ಬೆಂಗಳೂರು:ದರ್ಶನ್​ ಹೆಸರಲ್ಲಿ ವಂಚನೆ ಮಾಡಲೆತ್ನಿಸಿದ್ದ ಅರುಣಾಕುಮಾರಿ ಕೇಸ್​ಗೆ ಸ್ವತಃ ನಟ ದರ್ಶನ್​ ಅವರೇ ತಾರ್ಕಿಕ ಅಂತ್ಯ ಹಾಡಿದ್ದರೂ ಸಿನಿಮಾ ನಿರ್ದೇಶಕ, ಹಿರಿಯ ಪತ್ರಕರ್ತ ಇಂದ್ರಜಿತ್​ ಲಂಕೇಶ್​ ಈ ಪ್ರಕರಣಕ್ಕೆ ಎಂಟ್ರಿ ಕೊಡುವ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ನಡೆದಿರೋ ಗಲಾಟೆ, ಲೋನ್ ಹಗರಣ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರುವ ದಲಿತನ ಮೇಲಿನ ಹಲ್ಲೆ ಬಗ್ಗೆ ದರ್ಶನ್​ ವಿರುದ್ಧ ಸುದ್ದಿಗಾರರ ಮುಂದೆ ಹೊಸ ಬಾಂಬ್​ ಸಿಡಿಸಿರುವ ಇಂದ್ರಜಿತ್​ ಲಂಕೇಶ್​, ಎಲ್ಲದರ ಬಗ್ಗೆಯೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವ್ರು ನಮಗೆ ನೀಡಿಲ್ಲ ಎಂದಿದ್ದಾರೆ.
ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನು ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವ್ರು ನಮಗೆ ನೀಡಿಲ್ಲ. ಇಂದ್ರಜಿತ್ ಏನಾದ್ರು ಆರೋಪ ಮಾಡೋದಾದ್ರೆ ದೂರು ಕೊಟ್ಟು ಆರೋಪಗಳನ್ನ ಮಾಡಲಿ. ನನಗೆ ಕೊಟ್ಟ ಮನವಿ ಮೇಲೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.
ಗೃಹ ಸಚಿವರಿಗೆ ಕೊಟ್ಟ ಮನವಿ ಪತ್ರದಲ್ಲಿ ಯಾರೊಬ್ಬರ ಹೆಸರನ್ನೂ ನಮೂದಿಸದ ಇಂದ್ರಜಿತ್​, ಸುದ್ದಿಗಾರರ ಬಳಿ ನೇರವಾಗಿಯೇ ದರ್ಶನ್​ ಹೆಸರು ಪ್ರಸ್ತಾಪಿಸಿ ಆರೋಪಿಸಿದರು. ಮೈಸೂರು ಪೊಲೀಸ್ ಸ್ಟೇಷನ್​ಗಳು ಸೆಟಲ್​ಮೆಂಟ್ ಸ್ಟೇಷನ್​ಗಳಾಗಿವೆ. ಏನ್ರಿ ಅದು ತಲೆ ಸೀಳ್ತೀನಿ ಅನ್ನೋದು? ಆ ರೀತಿ ಸ್ಟಾರ್ ಮಾತನಾಡಬೇಕಿತ್ತಾ? ಎಂದರು.
ದರ್ಶನ್-ಉಮಾಪತಿ ನಡುವಿನ ಕೇಸ್​ ಸುಖಾಂತ್ಯದ ಬಗ್ಗೆ ಕೆಂಡಾಮಂಡಲವಾದ ಇಂದ್ರಜಿತ್, ಜನರು ಪೆದ್ದರಲ್ಲ. ಹಲವು ನಟರ ವಿಮರ್ಶೆ ಬರೆದಿದ್ದೇನೆ. ನಾನು ಯಾರಿಗೂ ಭಯ ಪಡಲ್ಲ. ಅರುಣಾಕುಮಾರಿಗೂ, ನನಗೂ ಪರಿಚಯವಿಲ್ಲ. ತನಿಖೆ ಪ್ರಗತಿಯಲ್ಲಿರುವಾಗ್ಲೇ ಕಾಂಪ್ರಮೈಸ್ ಆಗ್ತಾರೆ ಅಂದ್ರೆ ಯೋಚನೆ ಮಾಡಿ ಎಂದರು.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್​ನಲ್ಲಿ ದಲಿತ ಸಪ್ಲೈಯರ್​ಗೆ ನಟ ದರ್ಶನ್ ಮತ್ತು ಸ್ನೇಹಿತರ ಗ್ಯಾಂಗ್​ನಿಂದ ಹಲ್ಲೆ ಮಾಡಿದ್ದಾರೆ. ಪೊಲೀಸ್​ ಸ್ಟೇಷನ್​ನಲ್ಲಿ ಸೆಟಲ್​ಮೆಂಟ್ ಮಾಡಿದ್ದಾರೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ. ಕಾರಿನಲ್ಲಿ ಕೂತು ಅರುಣಾ ಕುಮಾರಿಗೆ ಹಿಂಸೆ ಮಾಡಿದ್ದಾರೆ. ಮೈಸೂರು ಪೊಲೀಸರೇನು ಬಳೆ ತೊಟ್ಟಿದ್ದಾರಾ? ಪೊಲೀಸರ ನಡವಳಿಕೆ ದುರಂತ ಅನ್ನಿಸುತ್ತೆ ಎಂದು ಇಂದ್ರಜಿತ್​ ಗಂಭೀರ ಆರೋಪ ಮಾಡಿದರು.
ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

ಕಾರಿನಲ್ಲಿ ಕೂತು ನಟ ದರ್ಶನ್ ಮಹಿಳೆಗೆ ಕಿರುಕುಳಕೊಟ್ಟರು​: ಇಂದ್ರಜಿತ್​ ಲಂಕೇಶ್​ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
