ಬೆಂಗಳೂರು:ಗೋವಾದ ಸಮುದ್ರ ತೀರದಲ್ಲಿ ಸೊಮರ್​ ಸಾಲ್ಟ್​ ಮಾಡುವಾಗ ಕುತ್ತಿಗೆ, ಬೆನ್ನು ಭಾಗಕ್ಕೆ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟ ದಿಗಂತ್​ರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಇಂದು ಮಧ್ಯಾಹ್ನದ ವೇಳೆ ಆಸ್ಪತ್ರೆಯಿಂದ ಹೆಲ್ತ್​ ಬುಲೆಟಿನ್​ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲದೆ, ದಿಗಂತ್​ರ ಆರೋಗ್ಯ ಸ್ಥಿತಿ ಕುರಿತು ನಟಿ ಐಂದ್ರಿತಾ ರೇ ಮಾಧ್ಯಮಗಳ ಜತೆ ಎಂದು ಮೂಲಗಳು ತಿಳಿಸಿವೆ.
ಕುಟುಂಬಸ್ಥರೊಂದಿಗೆ ನಟ ದಿಗಂತ್ ಗೋವಾ ಪ್ರವಾಸಕ್ಕೆ ತೆರಳಿದ್ದರು. ಸಮುದ್ರ ತೀರದಲ್ಲಿ ಸೊಮರ್​ ಸಾಲ್ಟ್​ ಮಾಡುತ್ತಿದ್ದ ದಿಗಂತ್​, ಆಯತಪ್ಪಿ ಬಿದ್ದು ಕುತ್ತಿಗೆ ಭಾಗಕ್ಕೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಸಂಜೆ ಏರ್​ಲಿಫ್ಟ್​ ಮೂಲಕ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಐಂದ್ರಿತಾ ಕರೆತಂದರು.
ಮಣಿಪಾಲ್​ ಆಸ್ಪತ್ರೆಯ ಡಾ. ವಿದ್ಯಾಧರ್​ ನೇತೃತ್ವದ ವೈದ್ಯರ ತಂಡ ಸತತ ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದರು. ದಿಗಂತ್​ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಆಪ್ತರು ಹಾಗೂ ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ದಿಗಂತ್​​ ಚೇತರಿಕೆಗಾಗಿ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸದ್ಯ ದಿಗಂತ್​ರನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಗಿದ್ದು, ಬೆಡ್​ ಮೇಲೆ ಮಲಗಿದ ಸ್ಥಿತಿಯಲ್ಲೇ ದಿಗಂತ್​​, ಥಮ್ಸ್ ಅಪ್ ಮಾಡುತ್ತಿರುವ ಫೋಟೋ ವೈರಲ್​ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ದಿಗಂತ್​ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ, ಇಂದು ಸಂಜೆಯೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ. ಆದರೆ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಇದುವರೆಗೂ ಬಂದಿಲ್ಲ. ಹೆಲ್ತ್​ ಬುಲೆಟಿನ್​ ಬಿಡುಗಡೆಯಾದ ಬಳಿಕ ಇದಕ್ಕೆಲ್ಲಾ ಸ್ಪಷ್ಟತೆ ಸಿಗಲಿದೆ.
ಬೆಂಗಳೂರಲ್ಲಿ ಪ್ರಧಾನಿ ಮೋದಿ, ಖರ್ಚಾಗಿದ್ದು ಎಷ್ಟು ಕೋಟಿ?

ಪ್ರಿನ್ಸಿಪಾಲ್​ರ ಕಪಾಳಕ್ಕೆ ಬಾರಿಸಿದ ಮಂಡ್ಯ ಶಾಸಕ! ಕಾಲೇಜಲ್ಲಿ ಸಹೋದ್ಯೋಗಿಗಳ ಸಮ್ಮುಖದಲ್ಲೇ ಕೃತ್ಯ, ವಿಡಿಯೋ ವೈರಲ್​

ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
