ಚಿಕ್ಕಬಳ್ಳಾಪುರ:ಸ್ಯಾಂಡಲ್​ವುಡ್​ನ ಹಿರಿಯ ನಟ ಜಗ್ಗೇಶ್ ಪುತ್ರನ‌ ಐಷಾರಾಮಿ ಕಾರು ಗುರುವಾರ ಅಪಘಾತಕ್ಕೀಡಾಗಿದೆ.
ನವರಸ ನಾಯಕ ಜಗ್ಗೇಶ್​ರ ಹಿರಿಯ ಪುತ್ರ ಯತಿರಾಜ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ಅಗಲಗುರ್ಕಿ ಬಳಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ನುಜ್ಜು-ಗುಜ್ಜಾಗಿದೆ. ಚಿಕ್ಕಬಳ್ಳಾಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನ ಕಾರು ಹೇಗೆ ಅಪಘಾತಕ್ಕೀಡಾಯ್ತು ಎಂಬುದರ ಬಗ್ಗೆ ಜಗ್ಗೇಶ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

‘ಕರೊನಾ ಬಂದಾಗಿನಿಂದ ಹೊರ ಹೋಗಿಲ್ಲ, ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಮಗ ಯತಿರಾಜ ಹೋಗಿದ್ದ. ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರು- ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಹೋಗಿ ಬರುವಾಗ ಅಡ್ಡ ಬಂದ ನಾಯಿಯ ಪ್ರಾಣ ಕಾಪಾಡಲು ಹೋಗಿ ರಸ್ತೆ ವಿಭಜಕ್ಕೆ ಕಾರು ಡಿಕ್ಕಿಯಾಗಿ ಪಕ್ಕದ ರಸ್ತೆಗೆ ಬಿದ್ದಿದೆ. ರಾಯರ ದಯೆ ಮತ್ತು ನಿಮ್ಮ ಶುಭಹಾರೈಕೆ ನನ್ನ ಮಗ ಯತಿರಾಜನಿಗೆ ಸಣ್ಣ ಗಾಯ ಆಗಿಲ್ಲ’ ಎಂದು ಜಗ್ಗೇಶ್​ ಟ್ವೀಟ್ ಮಾಡಿದ್ದಾರೆ.
ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

ಹೊಲದಲ್ಲಿ ಮೈಮರೆತ ಪ್ರೇಮಿಗಳು! ವಿಡಿಯೋ ಚಿತ್ರೀಕರಿಸಿ, ಮರಕ್ಕೆ ಕಟ್ಟಿ ಹಿಂಸಿಸಿದ ಜನ… ಬೆಚ್ಚಿಬೀಳಿಸುತ್ತೆ ಭಯಾನಕ ಘಟನೆ

ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
