ಬೆಂಗಳೂರು:ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಸಿನಿಮಾರಂಗ ಹಾಗೂ ರಾಜಕೀಯ ಎರಡಕ್ಕೂ ಗುಡ್ ಬೈ ಹೇಳಿದ್ದಾರೆ.
ರಮ್ಯಾ ಅಭಿನಯದ ಮೊದಲ ಸಿನಿಮಾ ‘ಅಭಿ’ ತೆರೆಕಂಡು ಕಳೆದ ಭಾನುವಾರಕ್ಕೆ 18 ವರ್ಷ ಪೂರೈಸಿತು. ಈ ಹಿನ್ನೆಲೆಯಲ್ಲಿ ರಮ್ಯಾ, ಭಾನುವಾರ ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಆಗ ಅಭಿಮಾನಿಗಳು ಮತ್ತೆ ನಟನೆಗೆ ಮರಳುವುದು ಯಾವಾಗ? ಎಂದು ಪ್ರಶ್ನಿಸಿದ್ದು, ‘ನಟನೆ ಎಂಬ ಹಡಗು ಮುಳುಗಿ ತುಂಬ ದಿನಗಳೇ ಕಳೆದು ಹೋಗಿವೆ. ಸಿನಿಮಾ ಮೇಲಿನ ಆಸೆಯನ್ನು ಕಳೆದುಕೊಂಡಿದ್ದೇನೆ’ ಎನ್ನುವ ಮೂಲಕ ಇನ್ನೆಂದೂ ಮತ್ತೆ ಬಣ್ಣದ ಲೋಕಕ್ಕೆ ಬರಲ್ಲ ಎಂದಿದ್ದಾರೆ. ನನಗೆ ನಟಿಸಲು ಆಸಕ್ತಿಯೂ ಇಲ್ಲ ಎಂದಿದ್ದಾರೆ. ನಟಿ ರಮ್ಯಾ ನಟನೆಯಿಂದ ದೂರ ಉಳಿದು ಹಲವು ವರ್ಷ ಕಳೆದಿವೆ. 2016ರಲ್ಲಿ ಕೋಡಿ ರಾಮಕೃಷ್ಣ ನಿರ್ದೇಶನದ ‘ನಾಗರಹಾವು’ ಚಿತ್ರವೇ ಅವರ ಕಡೆಯ ಸಿನಿಮಾ. ಸಿನಿಮಾ ಮಾತ್ರವಲ್ಲ, ರಾಜಕೀಯದಿಂದಲೂ ರಮ್ಯಾ ತುಂಬಾ ದೂರ ಹೋಗಿರುವ ಮಾತುಗಳನ್ನಾಡಿದ್ದಾರೆ.ಇದನ್ನೂ ಓದಿರಿಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳು ಗ್ರಾಮದ ಜಮೀನೊಂದರಲ್ಲಿ ಶವವಾಗಿ ಪತ್ತೆ! ಆ ರಾತ್ರಿ ಆಗಿದ್ದೇನು?
ಕೆಲ ವರ್ಷಗಳ ಹಿಂದೆ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿದ್ದ ರಮ್ಯಾ, ಲೋಕಸಭೆ ಚುನಾವಣೆ ಬಳಿಕ ಎಲ್ಲಿದ್ದಾರೆ? ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಕೆಲ ವಿಷಯಗಳನ್ನ ಹಂಚಿಕೊಳ್ಳುತ್ತಿರುತ್ತಾರಷ್ಟೆ. ಭಾನುವಾರದ ಸಂವಾದದಲ್ಲಿ ‘ನನ್ನ ರಾಜಕೀಯದ ಸಮಯವೂ ಮುಗಿದಿದೆ’ ಎನ್ನುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ.
ಮಂಡ್ಯ ಸಂಸದೆಯಾಗಿದ್ದ ವೇಳೆ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ರಮ್ಯಾ, ಸದ್ದಿಲ್ಲದೆ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದಾರೆ. ಜತೆಗೆ ಚಿತ್ರರಂಗಕ್ಕೂ ಗುಡ್‍ಬೈ ಹೇಳಿದ್ದಾರೆ. ಕೆಲವರು ರಮ್ಯಾರ ಈ ನಿರ್ಧಾರಕ್ಕೆ ಆಕ್ಷೇಪಿಸಿದ್ದು, ಮತ್ತೆ ಚಂದನವನಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ.
ಮೋಕ್ಷಕ್ಕಾಗಿ ಸಹೋದರಿಯರಿಬ್ಬರ ಬಲಿ ಕೊಟ್ಟ ಊರಲ್ಲೇ ಮತ್ತೊಂದು ದುರಂತ: ರಾತ್ರೋರಾತ್ರಿ ತಾಯಿ-ತಂಗಿ-ತಮ್ಮನ ಭೀಕರ ಹತ್ಯೆ!

ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ

ಹಾಡಹಗಲೇ ಫ್ಯಾನ್ಸಿ ಸ್ಟೋರ್​ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
