ಹುಬ್ಬಳ್ಳಿ:ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಏ.11ರಂದು ರುಂಡ-ಮುಂಡ-ಕೈಕಾಲು ಬೇರ್ಪಟ್ಟು ಅರ್ಧಂಬರ್ಧ ಸುಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ರಾಕೇಶ ಕಾಟವೆ ಮೃತ ದುರ್ದೈವಿ. ಈತ ನಟಿ ಶನಾಯ ಕಾಟವೆಯ ಸಹೋದರ. ರಾಕೇಶನ ಕೊಲೆಯಲ್ಲಿ ಶನಾಯ ಪಾತ್ರ ಇರುವ ಬಗ್ಗೆ ಅನುಮಾನ ದಟ್ಟವಾಗಿದೆ. ಇದಕ್ಕೆ ಪುಷ್ಟೀಕರಿಸುವಂತಿದೆ ಕೊಲೆಯ ಭಯಾನಕ ಟ್ರಾವೆಲ್ ಹಿಸ್ಟರಿ! ರಾಕೇಶ ಕಾಟವೆ ಕೊಲೆಗೈದ ಹಂತಕರು ಮೂರು ದಿನ ಶವದೊಂದಿಗೆ ಓಡಾಡಿದ್ದರು. ಈ ವೇಳೆ ಶವ ಇದ್ದ ಕಾರಿನಲ್ಲಿ ಹಂತಕರೊಂದಿಗೆ ಶನಾಯಳೂ ಪ್ರಯಾಣಸಿದ್ದಳಂತೆ!
ಗುಜರಾತ್ ಮೂಲದ ರಾಕೇಶ ಕಾಟವೆ ಚಿಕ್ಕವನಿದ್ದಾಗಲೇ ಅಪ್ಪ- ಅಮ್ಮನನ್ನು ಕಳೆದುಕೊಂಡಿದ್ದ. ಹಳೇ ಹುಬ್ಬಳ್ಳಿ ಶಿಮ್ಲಾ ನಗರದ ಶನಾಯಳ ತಾಯಿ, ರಾಕೇಶನನ್ನು ದತ್ತು ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಶನಾಯಳ ತಾಯಿಯೂ ಮೃತಪಟ್ಟಿದ್ದಾರೆ. ನಿಯಾಜ್​ ಎಂಬಾತನೊಂದಿಗೆ ಶನಾಯಗೆ ಹೈಸ್ಕೂಲ್​ನಲ್ಲಿದ್ದಾಗಲೇ ಲವ್​ ಶುರುವಾಗಿತ್ತು. ಇದಕ್ಕೆ ರಾಕೇಶ ಅಡ್ಡಿಯಾಗಿದ್ದ.
ಸಿನಿಮಾವೊಂದರ ಧ್ವನಿ ಸುರುಳಿ ಬಿಡುಗಡೆಗಾಗಿ ಏ.9ರಂದು ಹುಬ್ಬಳ್ಳಿಗೆ ಬಂದಿದ್ದ ಶನಾಯ ತನ್ನ ಪ್ರಿಯಕರನ ಮನೆಯಲ್ಲಿ ಉಳಿದುಕೊಂಡಿದ್ದಳು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಕೇಶನಿಗೆ ಬೈಪಾಸ್ ಬಳಿ ಡ್ರಾಪ್​ ಮಾಡುವ ನೆಪದಲ್ಲಿ ಹೋದ ನಿಯಾಜ್ ಆತನ ಕತ್ತು ಹಿಸುಕಿ ಕೊಂದಿದ್ದ. ಮೃತದೇಹವನ್ನ ಕಾರಿನಲ್ಲಿ ಹಾಕಿಕೊಂಡು ಶಿಮ್ಲಾ ನಗರದ ತನ್ನ ಮನೆಗೆ ಬಂದಿದ್ದ.
ಮನೆಯಲ್ಲಿದ್ದ ಶನಾಯ ಬಳಿ ‘ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆಸ್ಪತ್ರೆಗೆ ತೋರಿಸಬೇಕು. ನೀನು ಕೇಶ್ವಾಪುರದಲ್ಲಿನ ನನ್ನ ಹೊಸ ಬಾಡಿಗೆ ಮನೆಗೆ ಹೋಗು’ ಎಂದು ಕಾರಿನಲ್ಲಿ ಹತ್ತಿಸಿದ್ದ. ಕುಳಿತ ಭಂಗಿಯಲ್ಲೇ ಇದ್ದ ಸಹೋದರನ ಶವದೊಂದಿಗೆ ಶನಾಯ ಸಂಚರಿಸಿದ್ದಳು. ನಂತರ ನಯಾಜ್ ಶಿಮ್ಲಾ ನಗರದ ಮನೆಯಲ್ಲಿ ರಾಕೇಶನ ಶವ ಇರಿಸಿದ್ದ.
ಮರುದಿನ ಶವದ ರುಂಡ-ಮುಂಡ, ಕೈಕಾಲು ಕತ್ತರಿಸಿ ಬೇರ್ಪಡಿಸಿದ್ದರು. ಬಳಿಕ ರಮ್ಯ ರೆಸಿಡೆನ್ಸಿ ಬಳಿ ಜಮೀನೊಂದರಲ್ಲಿ ರಾತ್ರಿ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು. ವಾಪಸ್ ಬಂದಾಗ ಡಿಕ್ಕಿ ತೆಗೆದು ನೋಡಿದರೆ ರಾಕೇಶನ ರುಂಡ ಅಲ್ಲೇ ಇತ್ತು. ಮತ್ತೆ ದೇವರಗುಡಿಹಾಳಕ್ಕೆ ತೆರಳಿ ಅಲ್ಲಿ ರುಂಡ ಸುಟ್ಟು ಹಾಕಿದ್ದರು.
ಏ.11ರಂದು ಹೋಗಿ ಅರ್ಧಂಬರ್ಧ ಸುಟ್ಟು ಹಾಕಿದ್ದ ದೇಹವನ್ನು ಚೀಲದಲ್ಲಿ ತುಂಬಿಕೊಂಡು ಕೇಶ್ವಾಪುರದ ನಿರ್ಜನ ಪ್ರದೇಶಕ್ಕೆ ಹೋಗಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

ನೇಣುಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆ, ಗಂಡನ ಆ ಕಿರುಕುಳಕ್ಕೆ ಬಲಿಯಾದಳೇ ಪತ್ನಿ

ಆಕ್ಸಿಜನ್​ ಸೋರಿಕೆ: ಕೋವಿಡ್​ ವಾರ್ಡ್​ನಲ್ಲಿ 22 ಮಂದಿ ದುರಂತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
