ಹುಬ್ಬಳ್ಳಿ:ರಾಕೇಶ ಕಾಟವೆ ಕೊಲೆ‌ ಪ್ರಕರಣದಲ್ಲಿ ಸಿನಿಮಾ ನಟಿ, ಹುಬ್ಬಳ್ಳಿ ಮೂಲದ ಶನಾಯ ಕಾಟವೆಯ ವಿಚಾರಣೆ‌ ಮುಂದುವರಿದಿದೆ.
ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿದ್ದ ಶನಾಯ ಇತ್ತೀಚೆಗೆ ಕೆಲ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. 2018ರಲ್ಲಿ ತೆಲುಗಿನ ‘ಇದಂ ಪ್ರೇಮಂ ಜೀವನಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಕನ್ನಡದ ‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಅಂಡರ್ ವಲ್ಡ್೯ ಕಥೆ ಒಳಗೊಂಡಿರುವ ‘ಛೋಟಾ ಬಾಂಬೆ’ ಚಿತ್ರದ ಎರಡನೇ ನಾಯಕಿಯಾಗಿ ಶನಾಯ ಬಣ್ಣ ಹಚ್ಚಿದ್ದಾರೆ‌.
ಏ.10ರಂದು ಹುಬ್ಬಳ್ಳಿಯಲ್ಲಿ ಸಿನಿಮಾವೊಂದರ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತು. ಈ ನಿಮಿತ್ತ ಹಿಂದಿನ ದಿನವೇ ಹುಬ್ಬಳ್ಳಿಗೆ ಬಂದಿದ್ದ ಶನಾಯ, ಮರುದಿನ ಸಮಾರಂಭಕ್ಕೆ ಆಗಮಿಸಿರಲಿಲ್ಲ. ಏ.9ರಂದೇ ಶನಾಯಳ ಸಹೋದರ ರಾಕೇಶ ಕಾವಟೆ ಕೊಲೆ ನಡೆದಿತ್ತು ಎಂಬುದು ಗಮನಾರ್ಹ. ಶನಾಯಳ ಪ್ರಿಯಕರ ನಿಯಾಜ್​ನಿಂದಲೇ ರಾಕೇಶ ಕೊಲೆಯಾಗಿದ್ದಾನೆ. ದಿನವಿಡೀ ನಿಯಾಜ್ ತನ್ನ ಮನೆಯಲ್ಲೇ ಶವ ಇಟ್ಟುಕೊಂಡು ಬಳಿಕ ರುಂಡ-ಮುಂಡ-ಕೈಕಾಲು ಬೇರ್ಪಡಿಸಿ ಮರುದಿನ ರಾತ್ರಿ ರಮ್ಯ ರೆಸಿಡೆನ್ಸಿ ಬಳಿ ಜಮೀನೊಂದರಲ್ಲಿ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ಏ.11ರಂದು ಹೋಗಿ ಅರ್ಧಂಬರ್ಧ ಸುಟ್ಟಿದ್ದ ಮೃತದೇಹವನ್ನು ಚೀಲದಲ್ಲಿ ತುಂಬಿಕೊಂಡು ಕೇಶ್ವಾಪುರದ ನಿರ್ಜನ ಪ್ರದೇಶಕ್ಕೆ ಹೋಗಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಈ ಪಕ್ರರಣ ಸಂಬಂಧ ಪೊಲೀಸರು ನಟಿ ಶನಾಯಳನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಶನಾಯ ಮತ್ತು ನಿಯಾಜ್​ನ ಪ್ರೀತಿಗೆ ರಾಕೇಶ್​ ಆಕ್ಷೇಪಿಸುತ್ತಿದ್ದ. ಇದೇ ಕಾರಣಕ್ಕೆ ಏ.9ರಂದು ರಾಕೇಶನ ಕತ್ತು ಹಿಸುಕಿ ನಿಯಾಜ್ ಕೊಂದಿದ್ದ. ಮೃತದೇಹವನ್ನ ಕಾರಿನಲ್ಲಿ ಹಾಕಿಕೊಂಡು ಶಿಮ್ಲಾ ನಗರದ ತನ್ನ ಮನೆಗೆ ಬಂದಿದ್ದ. ಮನೆಯಲ್ಲಿದ್ದ ಶನಾಯ ಬಳಿ ‘ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆಸ್ಪತ್ರೆಗೆ ತೋರಿಸಬೇಕು. ನೀನು ಕೇಶ್ವಾಪುರದಲ್ಲಿನ ನನ್ನ ಹೊಸ ಬಾಡಿಗೆ ಮನೆಗೆ ಹೋಗು’ ಎಂದು ಕಾರಿನಲ್ಲಿ ಹತ್ತಿಸಿದ್ದ. ಕುಳಿತ ಭಂಗಿಯಲ್ಲೇ ಇದ್ದ ಸಹೋದರನ ಶವದೊಂದಿಗೆ ಶನಾಯ ಪ್ರಯಾಣಿಸಿದ್ದಳು. ನಂತರ ನಿಯಾಜ್ ಶಿಮ್ಲಾ ನಗರದ ಮನೆಯಲ್ಲಿ ರಾಕೇಶನ ಶವ ತಂದು ತುಂಡರಿಸಿ ಬಳಿಕ ಸುಟ್ಟು ಹಾಕಿದ್ದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
