ಬೆಂಗಳೂರು:ನಟ ಪುನೀತ್​ರಾಜ್​ಕುಮಾರ್​ ಅವರ ಕೊನೇ ಸಿನಿಮಾ ಜೇಮ್ಸ್​ ಯಶಸ್ವೀ ಪ್ರದರ್ಶನ ಕಾಣುತ್ತಿದ್ದರೂ ಥಿಯೇಟರ್​ಗಳಿಂದ ಜೇಮ್ಸ್​ ಸಿನಿಮಾವನ್ನ ತೆಗೆಯಲಾಗುತ್ತಿದೆ ಎಂಬ ವ್ಯಾಪಕವಾಗಿ ಹಬ್ಬಿದ್ದು, ಅಪ್ಪು ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಗುರುವಾರ ಬೆಳಗ್ಗೆ ಶಿವರಾಜ್​ಕುಮಾರ್​ ದಂಪತಿ ಭೇಟಿಯಾಗಿ ಚರ್ಚಿಸಿದರು.
ಬಳಿಕ ಮಾತನಾಡಿದ ಸುದ್ದಿಗಾರರ ಜತೆ ಮಾತನಾಡಿದ ಶಿವಣ್ಣ, ಜೇಮ್ಸ್​ಗೂ ಕಾಶ್ಮೀರ್​ ಫೈಲ್ಸ್​ ಸಿನಿಮಾಗೂ ಯಾವುದೇ ಸಂಭದವಿಲ್ಲ. ನಾಮ್ಮ ಕುಟುಂಬ ಒಳ್ಳೆಯ ಸಿನಿಮಾಗೆ ಯಾವತ್ತೂ ಅಡ್ಡಿ ಮಾಡಿಲ್ಲ. ನಮ್ಮ ತಂದೆ ಕಾಲದಿಂದಲೂ ಅಡ್ಡಿ ಮಾಡಿಲ್ಲ. ಆದರೆ RRR ಸಿನಿಮಾ ಬಿಡುಗಡೆಯಿಂದ ಜೇಮ್ಸ್ ಸಿನಿಮಾ ಥಿಯೇಟರ್​ಗಳು ಕಡಿಮೆಯಾಗಿವೆ ಎಂದರು.
ಜೇಮ್ಸ್ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ ನೋಡಲು ಬರುವಂತೆ ಆಹ್ವಾನ ಮಾಡಿದ್ವಿ ಅಷ್ಟೇ. ನಾನು ಎಲ್ಲೂ ದಿ ಕಾಶ್ಮೀರ್ ಫೈಲ್ಸ್​ ಸಿನಿಮಾದಿಂದ ಜೇಮ್ಸ್​ಗೆ ಸಮಸ್ಯೆ ಆಗ್ತಿದೆ ಎಂದಿಲ್ಲ. RRR ಸಿನಿಮಾದಿಂದ ಸ್ವಲ್ಪ ಅಡ್ಡಿ ಆಗಿದೆ. ಜೇಮ್ಸ್ 386 ಥಿಯೇಟರ್​ಗಳಲ್ಲಿ ರಿಲೀಸ್​ ಆಗಿತ್ತು ಎಂದರು.
ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಒಂದೇ ಬೈಕ್​ನಲ್ಲಿ ಬರುತ್ತಿದ್ದ ಇಬ್ಬರು ಮಕ್ಕಳು, ದಂಪತಿ ಸ್ಥಳದಲ್ಲೇ ದುರ್ಮರಣ

ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
