ಬೆಂಗಳೂರು:‘ಓಂ’, ‘ಶ್’​, ‘ಉಪೇಂದ್ರ’, ‘ಸೂಪರ್’​, ‘ಉಪ್ಪಿ-2’… ಹೀಗೆ ಸೂಪರ್​ ಹಿಟ್​ ಚಿತ್ರಗಳನ್ನು ನಿರ್ದೇಶಿಸಿದ್ದ ನಟ ಉಪೇಂದ್ರ ಅವರು ಮತ್ತೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, ಬಹುನಿರೀಕ್ಷಿತ ಹೊಸ ಸಿನಿಮಾದ ಪಸ್ಟ್​ ಲುಕ್​ ಇಂದು ಬಿಡುಗಡೆಯಾಗಿದೆ. ತನ್ನ ಸಿನಿಮಾಗಳಿಗೆ ಭಿನ್ನ-ವಿಭಿನ್ನ ಟೈಟಲ್​ ಇಡುವುದರಲ್ಲೂ ಫೇಮಸ್ ಆಗಿರುವ ಉಪೇಂದ್ರ ಅವರು, ಈ ಬಾರಿಯೂ ಅಂಥದ್ದೇ ಒಂದು ಹೊಸ ಟೈಟಲ್​ ಕೊಟ್ಟು ಅಭಿಮಾನಿಗಳ ತಲೆಗೆ ಕೆಲಸ ಹಚ್ಚಿದ್ದಾರೆ.
ಹೊಸ ಸಿನಿಮಾದ ಪೋಸ್ಟರ್​ನಲ್ಲಿ ಕೊಂಬು ಇರುವ ಕುದುರೆ ಮೇಲೆ ಉಪೇಂದ್ರ ಸವಾರಿ ಮಾಡುತ್ತಿದ್ದು, ಅವರ ಲುಕ್​ ಕೂಡ ಗಮನ ಸೆಳೆಯುತ್ತಿದೆ. ಕೆಳಗೆ ಕುದುರೆಯ ಲಾಳಾಕೃತಿಯಲ್ಲಿ ಇಂಗ್ಲಿಷ್​ನ ‘U'(ಯು) ಶೀರ್ಷಿಕೆ ಇಟ್ಟು. ಅದರ ಮಧ್ಯೆ ಬೆಂಕಿಯಲ್ಲಿ ಉದ್ದ ನಾಮ ಎಳೆದದಿದ್ದಾರ. ಇದು ಕುದುರೆ ಲಾಳವೋ, ಮೂರು ನಾಮವೋ, ಉಗುರಿನ ಮೇಲೆ ಮತದಾನದ ಇಂಕು ಹಚ್ಚಿದ ಗುರುತೋ… ಎಂದು ಅಭಿಮಾನಿಗಳು ಚರ್ಚಿಸುತ್ತಾ, ಇಂತಹದ್ದೇ ಸಿನಿಮಾಗಾಗಿ ಕಾಯ್ತಿದ್ದೀವಿ ಎಂದು ಖುಷಿಯಾಗಿದ್ದಾರೆ.
ಹೊಸ ಸಿನಿಮಾದ ಫಲ್ಟ್​ ಲುಕ್​ನ ಪೋಸ್ಟರ್​ ಅನ್ನು ಶುಕ್ರವಾರ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿರುವ ಉಪೇಂದ್ರ, ‘ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಚಿತ್ರದ ಅಡಿಬರಹವನ್ನು 7 ಭಾಷೆಯಲ್ಲಿ ಅಂದರೆ, ಒಂದೊಂದು ಪದವನ್ನು ಒಂದೊಂದು ಭಾಷೆಯಲ್ಲಿ ಬರೆಯಲಾಗಿದೆ. ಆರಂಭದಲ್ಲಿ ‘ಇವನು’ ಎಂಬ ಪದ ಕನ್ನಡದಲ್ಲಿದೆ. ‘ಇವನು ಹೇಗೆ ಬರುತ್ತಾನೆ ಎಂದು ತಿಳಿದಿಲ್ಲ. ಆದರೆ, ಖಂಡಿತ ಬರುತ್ತಾನೆ’ ಎಂಬ ಅಡಿಬರಹ ಇದೆ. ಈ ಸಿನಿಮಾವನ್ನು ಜಿ.ಮನೋಹರ್​ ಮತ್ತು ಶ್ರೀಕಾಂತ್​ ಕೆ.ಪಿ. ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಉಪೇಂದ್ರ ಅವರೇ ನಿರ್ದೇಶಕ ಹಾಗೂ ನಾಯಕ.
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏#nimmaupendra#uppidirects#laharifilm#venusenterrtainers@LahariFilm@kp_sreekanth@LahariMusicpic.twitter.com/YrMlCXyyyS
— Upendra (@nimmaupendra)March 11, 2022

ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
