ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಸ್ಯಾಂಡಲ್​ವುಡ್​ನ ಮೋಹಕ ತಾರೆ ರಮ್ಯಾ ಅವರು ಖುದ್ದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿಯ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುರುವಾರ ನಟಿ ರಮ್ಯಾ ದೂರು ದಾಖಲಿಸಿದ್ದಾರೆ. ದೂರು ಕೊಡುವ ಮುನ್ನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರ ಚರ್ಚಿಸಿದ ರಮ್ಯಾ, ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

‘Charlie 777 ಕನ್ನಡ ಚಲನಚಿತ್ರವನ್ನು ನೋಡಿ. ಈ ಸಿನಿಮಾ ಚೆನ್ನಾಗಿದೆ’ ಎಂದು ಜೂ.6ರಂದು ನಟಿ ರಮ್ಯಾ ಅವರು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಜೂ.8ರಂದು preetam.prince.k ಎಂಬ ಹೆಸರಿನ ಇನ್​ಸ್ಟಾಗ್ರಾಂ ಖಾತೆದಾರ ನಟಿ ರಮ್ಯಾ ಬಗ್ಗೆ ಅಶ್ಲೀಲವಾಗಿ ನಿಂದಿಸಿದ ಕಮೆಂಟ್​ ಅನ್ನು ಟ್ಯಾಗ್ ಮಾಡಿದ್ದ. ಈ ಕುರಿತು ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ, ಆರೋಪಿಯನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಎಫ್​ಐಆರ್​ ದಾಖಲಾಗಿದ್ದು, ಸೆಂಟ್ರಲ್ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪತ್ನಿಗೆ PSI ಕಿರುಕುಳ: ಬೇರೆ ಸ್ತ್ರೀಯರ ಜತೆ ನನ್ನ ಗಂಡನಿಗೆ ಸಂಪರ್ಕ ಇದೆ, ದಯವಿಟ್ಟು​ ನನಗೆ ನ್ಯಾಯ ಕೊಡ್ಸಿ… ಕಣ್ಣೀರಿಟ್ಟ ಪತ್ನಿ

ಜೆಡಿಎಸ್​ -ಕಾಂಗ್ರೆಸ್​ನ ಘಟಾನುಘಟಿಗಳಿಗೆ ಕೋಟಿ-ಕೋಟಿ ಸಾಲ ಕೊಟ್ಟ ಕುಪೇಂದ್ರರೆಡ್ಡಿ! ದೇವೇಗೌಡರ ಕುಟುಂಬಕ್ಕೂ ಸಾಲ

ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ನಾಪತ್ತೆ! ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
