ಬೆಂಗಳೂರು: ಕರ್ನಾಟಕ, ದೆಹಲಿ, ಕೇರಳ, ತಮಿಳುನಾಡು, ಮಧ್ಯಪ್ರದೇಶ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಪಿಎಫ್​ಐ ಕಚೇರಿ, ಕಾರ್ಯಕರ್ತರ ಮನೆ ಸೇರಿದಂತೆ ಒಟ್ಟು 106 ಕಡೆ ಎನ್​ಐಎ ದಾಳಿ ನಡೆಸಿದೆ. ಈ ಕುರಿತು ಎಡಿಜಿಪಿ ಅಲೋಕ್‌ ಕುಮಾರ್ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ.
ಪ್ರಮುಖವಾಗಿ ಎನ್ಐಎ ನಡೆಸಿದ ದಾಳಿ ಇದು. ಎನ್ಐಎಗೆ ಪೊಲೀಸ್​ ಇಲಾಖೆಯಿಂದಲೂ ಸಹಾಯ ಮಾಡಲಾಯ್ತು. ಬೆಂಗಳೂರಿನ ಡಿ.ಜೆ.ಹಳ್ಳಿ ಗಲಾಟೆ ಪ್ರಕರಣದ ಕೇಸ್​ನಲ್ಲಿ ಬೇಕಾದವರ ಮೇಲೂ ದಾಳಿ ಮಾಡಲಾಯ್ತು. ಪ್ರಮುಖ ದಾಖಲೆಗಳನ್ನು ಸೀಜ್ ಮಾಡಲಾಗಿದೆ. ಕೆಲವರನ್ನ ಅರೆಸ್ಟ್ ಮಾಡಲಾಗಿದೆ. ಮುಂದೆ ಬೆಂಗಳೂರು ನಗರ ಪೊಲೀಸರಿಗೆ ಆರೋಪಿಗಳನ್ನ ಒಪ್ಪಿಸಲಾಗುವುದು. ಎನ್ಐಎ ಮಾಹಿತಿ ಆಧರಿಸಿ ಜಂಟಿಯಾಗಿ ಕಾರ್ಯಾಚರಣೆ ಮಾಡಲಾಗಿದೆ. ರಾಜ್ಯದಲ್ಲಿ ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಉತ್ತರ ಕನ್ನಡದಲ್ಲಿ ರಾಜ್ಯ ಪೊಲೀಸರು ದಾಳಿ ಮಾಡಿದ್ದಾರೆ. ಮಂಗಳೂರು, ಕಲಬುರಗಿ, ಬೆಂಗಳೂರಿನಲ್ಲಿ ಮಾತ್ರ ಎನ್ಐಎ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಲೋಕ್​ ಕುಮಾರ್​ ತಿಳಿಸಿದರು.
2020ರ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಶಿವಮೊಗ್ಗ, ದಾವಣಗೆರೆ, ಕೊಪ್ಪಳ ಮತ್ತು ಮಂಗಳೂರಿನಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಆಡುಗೋಡಿಯ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 12 =
Remember me
