ಬೆಂಗಳೂರು:ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಗುತ್ತಿಗೆ ಆಧಾರದಲ್ಲಿ 5 ವಕೀಲ ಹುದ್ದೆಗೆ ಬೆಂಗಳೂರು ಮತ್ತು ಧಾರವಾಡ ನ್ಯಾಯಾಲಯದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸೀನಿಯರ್​ ಪ್ಯಾನಲ್​ ಅಡ್ವೊಕೇಟ್​-2 ಹಾಗೂ ಜೂನಿಯರ್​ ಪ್ಯಾನಲ್​ ಅಡ್ವೊಕೇಟ್​-3 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎರಡೂ ಹುದ್ದೆಗಳಿಗೆ 7ರಿಂದ 12 ವರ್ಷ ವೃತ್ತಿ ಅನುಭವ ಕೇಳಲಾಗಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ/ಎಲ್​ಎಲ್​ಬಿ ಪದವಿ ಪಡೆದಿರಬೇಕು. 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಣೆ ಆಗಲಿದೆ.
ವೇತನ:ಸೀನಿಯರ್​ ವಕೀಲರಿಗೆ 50,000 ರೂ. ಮಾಸಿಕ ವೇತನದೊಂದಿಗೆ 5000 ರೂ. ಭತ್ಯೆ, ಜೂನಿಯರ್​ ವಕೀಲರಿಗೆ 40,000 ರೂ.ನೊಂದಿಗೆ 5000 ರೂ. ಭತ್ಯೆ ಇರಲಿದೆ. ಕಾನೂನು ಅಧಿಕಾರಿಗಳು ಹೇಳುವ ಎಲ್ಲ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು.
ಅರ್ಜಿ ಸಲ್ಲಿಕೆ: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 25.4.2022 ರೊಳಗೆ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವದ ಆಧಾರದ ಮೇಲೆ ಕೌನ್ಸಿಲ್​, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಹಾಜರಾಗಲು ಯಾವುದೇ ಭತ್ಯೆ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು 100 ರೂ. ಸ್ಟಾಂಪ್​ ಪೇಪರ್​ನಲ್ಲಿ ಅಗ್ರಿಮೆಂಟ್​ ಮಾಡಿಸಬೇಕು.ಅಧಿಸೂಚನೆಗೆ:https://bit.ly/3xpl764ನೋಡಬಹುದು.
ಗದಗ ಗ್ರಾಮೀಣ ವಿವಿಯಲ್ಲಿ ಬೋಧಕ ಹುದ್ದೆ ನೇಮಕಾತಿಗೆ ನೇರ ಸಂದರ್ಶನ

ಬೆಂಗಳೂರಿನ ಪರಿಸರ ಸಂಶೋಧನಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
