ಕೊಡಗು:ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿದೆ.
ಈ ಭಾಗದಲ್ಲಿ ಒಂದು ತಿಂಗಳಿಂದ ಪದೇಪದೆ ಭೂಕಂಪನ ಆಗುತ್ತಿದೆ. ಜತೆಗೆ ಮುಂಗಾರು ಮಳೆಯೂ ಹೆಚ್ಚಾಗಿದ್ದು, ರಸ್ತೆ ಕುಸಿತ, ಗುಡ್ಡ ಕುಸಿ, ಮನೆ ಹಾನಿ… ಹೀಗೆ ಒಂದಿಲ್ಲೊಂದು ಹಾನಿ ಸಂಭವಿಸುತ್ತಲೇ ಇದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಇಂದು(ಶುಕ್ರವಾರ) ಮತ್ತೆ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದ್ದು, ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇಲಾಖೆಗಳಿಂದ ಹೊರಬಿದ್ದಿಲ್ಲ.
ಸತತ ಭೂಕಂಪನದಿಂದ ತತ್ತರಿಸಿರುವ ದಕ್ಷಿಣ ಕನ್ನಡ, ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಎಲ್ಲೆಲ್ಲಿ ಅನುಭವ?:ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಭೂಕಂಪನದ ಅನುಭವವಾಗಿದೆ.
ಯಾವ ಸಮಯದಲ್ಲಿ?:ಶುಕ್ರವಾರ ಬೆಳಗ್ಗೆ 10.09ರ ಸುಮಾರಿಗೆ ಭೂಮಿಯ ತಳಭಾಗದಿಂದ ಭಾರೀ ಶಬ್ದ ಕೇಳಿಸಿದೆ. ಅದಾದ ಬಳಿಕ ಭೂಮಿ ನಡುಗಿದೆ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ. ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಭಾರೀ ಸದ್ದಿನೊಂದಿಗೆ ಹತ್ತಕ್ಕೂ ಹೆಚ್ಚು ಭಾರಿ ಭೂಕಂಪನದ ಅನುಭವವಾಗಿದೆ.
ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಬಾಲೆಯ ಮೊಗದಲ್ಲಿ ನಗು ಅರಳಿಸಿದ ದಾವಣಗೆರೆ ಎಸ್ಪಿ! ಈ ಸ್ಟೋರಿ ಕೇಳಿದ್ರೆ ಭಾವುಕರಾಗ್ತೀರಿ

ಊರಿಗೆ ಹೋಗ್ಬೇಕಿತ್ತು.. ಅದ್ಕೆ ರಸ್ತೆಬದಿ ನಿಂತಿದ್ದ ಬಸ್​ ಓಡಿಸಿಕೊಂಡು ಬಂದೆ… ಈತನ ಮಾತು ಕೇಳಿ ಮಾಲೀಕ ದಿಗ್ಭ್ರಾಂತ

ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್​ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್​ನಲ್ಲಿದೆ ಮಹತ್ವದ ಸಾಕ್ಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
