ಬೆಂಗಳೂರು:ರಾಜ್ಯದ ಹಿಜಾಬ್​ ವಿವಾದಕ್ಕೆ ಅಲ್​ಖೈದಾ ಉಗ್ರ ಸಂಘಟನೆ ಎಂಟ್ರಿಯಾಗಿದೆ. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಜೈಶ್ರೀರಾಮ್​ ಘೋಷಣೆಗೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್…’ ಎಂದು ಘೋಷಣೆ ಕೂಗಿದ್ದ ಹಿಜಾಬ್​ಧಾರಿ ವಿದ್ಯಾರ್ಥಿನಿ ಮುಸ್ಕಾನ್​ನನ್ನು ಪ್ರಶಂಸಿಸಿರುವ ಅಲ್​ಖೈದಾ ಮುಖ್ಯಸ್ಥ ಆಲ್​ ಜವಾಹಿರಿ, ‘ಮುಸ್ಕಾನ್​ ಭಾರತದ ಉದಾತ್ತ ಮಹಿಳೆ. ಅವಳ ಹೋರಾಟ ನನಗೆ ಆನಂದ ಭಾಷ್ಪ ತರಿಸಿದೆ’ ಎಂದಿದ್ದಾರೆ.
ಹಿಜಾಬ್​ ವಿವಾದ ಮತ್ತು ಮಸ್ಕಾನ್​ ಬಗ್ಗೆ ಅಲ್​ಖೈದಾ ಮುಖ್ಯಸ್ಥ ಆಲ್​ ಜವಾಹಿರಿ ಮಾತನಾಡಿರುವ 9 ನಿಮಿಷದ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ‘ದಬ್ಬಾಳಿಕೆ ವಿರುದ್ಧ ಭಾರತದ ಮುಸ್ಲಿಮರು ತಿರುಗಿ ಬೀಳಬೇಕು. ಮುಸ್ಕಾನ್​ಳ ಹೋರಾಟ ನನಗೆ ಆನಂದ ಭಾಷ್ಪ ತರಿಸಿದೆ. ಹಿಜಾಬ್​ ಹಾಕುವುದು ನಮ್ಮ ಧರ್ಮದ ಹಕ್ಕು. ಮುಸ್ಕಾನ್​ ಬಣ್ಣಿಸಿ ಒಂದು ಪದ್ಯ ಬರೆಯುತ್ತೇನೆ’ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್​ ವಿವಾದದ ಹಿಂದೆ ಟೆರರ್​ ಕೈವಾಡ ಇದೆ ಎಂದಿದ್ದಾರೆ.
ಈ ಬಗ್ಗೆ ನಾನು ಹಿಂದೆಯೇ ಹೇಳಿದ್ದೆ. ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ. ಈ ವಿವಾದವನ್ನು ನಮ್ಮ ಮಾಧ್ಯಮಗಳಿಗಿಂತ ಮೊದಲು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು. ಈಗ ಉಗ್ರ ಸಂಘಟನೆಗಳು ಕೂಡ ಬೆಂಬಲ ನೀಡುತ್ತಿವೆ. ವಿವಾದದ ಬಗ್ಗೆ ಎನ್​ಐಎ ತನಿಖೆ ನಡೆಯಬೇಕು. ಉಗ್ರ ಸಂಘಟನೆಗಳ ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅಲ್‌‌ಖೈದ ಹೇಳಿಕೆಯಿಂದ ನಮಗೇನು ಆಗಬೇಕಿದೆ? ಕರ್ನಾಟಕದ ಜನ ಅದಕ್ಕೆಲ್ಲಾ ಮನ್ನಣೆ ಕೊಡಲ್ಲ. ನಮ್ಮ ಜನ ಸೌಹಾರ್ದವಾಗಿ ಬದುಕುವವರು. ಅವರ ಹೇಳಿಕೆಯಿಂದ ರಾಜ್ಯದಲ್ಲಿ ಅಂಥ ವ್ಯತ್ಯಾಸ ಆಗಲ್ಲ ಎಂದು ಮಾಜಿ ಎಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಕೆಲವೇ ದಿನದಲ್ಲಿ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆ ದುರಂತ ಸಾವು! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ?

ಬೆಂಗ್ಳೂರಲ್ಲಿ ಕನ್ನಡ ಮಾತನಾಡಿದ್ದಕ್ಕೆ ಯುವಕನ ಕೊಲೆ! ಸ್ಫೋಟಕ ರಹಸ್ಯ ಬಿಚ್ಚಿಟ್ಟ ಹೋಂ ಮಿನಿಸ್ಟರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
