ವಿಜಯಪುರ:ಆಲಮಟ್ಟಿ ಜಲಾಶಯದ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಒಳಗೆ ನುಗ್ಗಲು ಯತ್ನಿಸಿದ ಬುರ್ಕಾಧಾರಿಯೊಬ್ಬರನ್ನ ಭದ್ರತಾ ಸಿಬ್ಬಂದಿ ತಡೆದು ವಿಚಾರಣೆ ನಡೆಸಿದಾಗ ಬುರ್ಕಾಧಾರಿ ವ್ಯಕ್ತಿ ಮಹಿಳೆ ಅಲ್ಲ, ಮಂಗಳಮುಖಿ ಎಂಬುದು ಗೊತ್ತಾಗಿದೆ.
ಬುರ್ಕಾಧರಿಸಿದ್ದ ವ್ಯಕ್ತಿಯೊಬ್ಬರು ಸೋಮವಾರ ಬೆಳ್ಳಂಬೆಳಗ್ಗೆ ಜಲಾಶಯದ ಸುತ್ತಮುತ್ತ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದರು. ಅಲ್ಲದೆ ಒಳನುಗ್ಗಲು ಯತ್ನಿಸಿದ್ದಾರೆ. ಕೂಡಲೇ ತಡೆದ ಭದ್ರತಾ ಸಿಬ್ಬಂದಿ, ಇಷ್ಟು ಬೇಗ ಒಳಗಡೆ ಪ್ರವೇಶವಿಲ್ಲ ಎಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಬುರ್ಕಾಧಾರಿ ವ್ಯಕ್ತಿ ಮಹಿಳೆಯಲ್ಲ ಎಂಬುದು ಭದ್ರತಾ ಸಿಬ್ಬಂದಿಗೆ ಗೊತ್ತಾಗಿದೆ. ಅಷ್ಟರಲ್ಲಿ ಸ್ವಲ್ಪ ದೂರ ನಡೆದು ಹೋದ ಆ ವ್ಯಕ್ತಿ ಬುರ್ಕಾ ಕಳಚಿದ್ದು, ಪ್ಯಾಂಟು-ಶರ್ಟ್​ನಲ್ಲಿ ವಾಪಸ್ ಬಂದಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಕೂಲಂಕುಶವಾಗಿ ವಿಚಾರಣೆ ನಡೆಸಲಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದ್ದು, ಆ ವ್ಯಕ್ತಿ ಮಂಗಳಮುಖಿ ಎಂಬುದು ಗೊತ್ತಾಗಿದೆ. ಹೆಸರು ಕಿಶೋರ. ವಿಚಾರಣೆ ವೇಳೆ ತನ್ನೂರು ಮಂಗಳೂರು ಎಂದಿದ್ದಾನೆ. ಮತ್ತೊಮ್ಮೆ ಹಾಸನ ಜಿಲ್ಲೆ ಸಕಲೇಶಪುರ ಅಂತಲೂ ಹೇಳಿದ್ದಾನೆ. ಮನೆಯಲ್ಲಿ ಮದುವೆ ಮಾಡುತ್ತಿರುವ ಕಾರಣ ಜಗಳ ಮಾಡಿಕೊಂಡು ಬಂದಿದ್ದಾಗಿ ಬಾಯ್ಬಿಟ್ಟಿದ್ದಾನೆ. ವಿಚಾರಣೆ ಮುಂದುವರಿದಿದೆ.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಅಡ್ಡ ಬಂದ ನಾಯಿ: ಬೈಕ್​ ಸವಾರರಿಬ್ಬರ ಸಾವು

ಮಗು ಅಳುವ ಶಬ್ದ ಕೇಳಿ ಕಲ್ಯಾಣಿ ಬಳಿ ಬಂದವರಿಗೆ ಕಾದಿತ್ತು ಶಾಕ್​! ಮಗು ಕಣ್ಣೆದುರೇ ಸಾವಿನ ಮನೆಯ ಕದ ತಟ್ಟಿದ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 19 =
Remember me
