ಚಾಮರಾಜನಗರ:ಜಿಲ್ಲೆಯ ಎಲ್ಲ ಕ್ವಾರಿಗಳನ್ನು ನಾಳೆಯಿಂದ ಬಂದ್ ಮಾಡಲು ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.
ಕಲ್ಲು ಗಣಿಕಾರಿಕೆ ಸ್ಥಳದಲ್ಲಿ ಬಂಡೆ ಕುಸಿತ ಕುಸಿತ ಪ್ರಕರಣ ಪರಿಶೀಲ‌ನೆಗಾಗಿ ಮಡಹಳ್ಳಿ ಬಿಳಿಕಲ್ಲು ಕ್ವಾರಿಗೆ ಬಂದಿದ್ದ ಸಚಿವರು ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಎಲ್ಲ ಗಣಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ನಾಳೆಯಿಂದ ಒಂದು ತಿಂಗಳ ಕಾಲ ಭೇಟಿ ನೀಡಿ ಪರಿಶೀಲನೆ ನಡೆಸುವರು‌. ಸಕ್ರಮ ಗಣಿಗಾರಿಕೆ ಮುಂದುವರಿಯಲಿದೆ. ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕಲಾಗುವುದು ಎಂದು ವಿವರಿಸಿದರು.
ಗಣಿ ಇಲಾಖೆ ಡಿಡಿಗೆ ತರಾಟೆ:ಬಂಡೆ ಕುಸಿತ ಪ್ರಕರಣದ ಸಂಬಂಧ ಪರಿಶೀಲನೆ ನಡೆಸಲು ಗುಂಡ್ಲುಪೇಟೆಗೆ ಆಗಮಿಸಿದ್ದ ಸೋಮಣ್ಣ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪ ನಿರ್ದೇಶಕ ನಾಗಭೂಷಣ್​ಗೆ ಬೆವರಿಳಿಸಿದರು. ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಸ್ವಾಗತಿಸಲು ನಿಂತಿದ್ದ ನಾಗಭೂಷಣ್​ಗೆ, ನೀನು ಇಷ್ಟು ದಿನ ತಿಂದಿದ್ದು ಸಾಕು. ಇನ್ನಾದರೂ ಕೆಲಸ ಮಾಡು. ನಾನು ಮೂರು ದಿನ ಇದ್ದು ಹೋಗಲು ಸಿದ್ದ ಇದ್ದೇನೆ. ನಿನ್ನ ಹಾಗೆ ಗೂಟ ಹೊಡೆದುಕೊಂಡು ಕುಳಿತಿರಲು ಸಿದ್ಧವಿಲ್ಲ. ಎಲ್ಲ ಅವ್ಯವಹಾರಗಳಿಗೂ ತಾಯಿ ಬೇರು ನೀವು. ನಿಮ್ಮ ಪೋಷಣೆಯಿಂದಲೇ ಎಲ್ಲ ನಡೆಯುತ್ತಿದೆ. ಇದನ್ನು ಹೇಗೆ ಮಟ್ಟ ಹಾಕುತ್ತೇನೆ ನೋಡಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಮಳವಳ್ಳಿಯ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ 8 ತಿಂಗಳ ಗರ್ಭಿಣಿ ಸಾವು

ಗುಂಡ್ಲುಪೇಟೆಯಲ್ಲಿ ಬಂಡೆ ಕುಸಿತ, ಬೆಚ್ಚಿದ ಜೂಜುಕೋರರು! ಇಸ್ಪೀಟ್ ಅಡ್ಡೆ ಸ್ಥಳದಿಂದ ಮಾಡಿದ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 4 =
Remember me
