ವಿಜಯನಗರ:ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕಗಳನ್ನು ಪ್ರವಾಸಿಗರು ಅಂಬಾರಿಯಲ್ಲಿ‌ ಕುಳಿತು ಕಣ್ತುಂಬಿಕೊಳ್ಳುವ ಕಾಲ ಸನಿಹದಲ್ಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಚರಿಸುವಂತೆ, ಅಂಬಾರಿ ಡಬಲ್​ ಡೆಕ್ಕರ್​ ಬಸ್​ ಸಂಚಾರ ವಿಜಯನಗರದಲ್ಲೂ ಓಡಾಟ ಆರಂಭಿಸಲಿದೆ. ಓಪನ್​ ಟಾಪ್​ ವ್ಯವಸ್ಥೆ ಹೊಂದಿರುವ ಈ ಬಸ್​ನಲ್ಲೇ ಕುಳಿತು ಪ್ರವಾಸಿಗರು ಹಂಪಿಯ ಸೌಂದರ್ಯ ಸವಿಯಬಹುದು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಂಬಾರಿ ಬಸ್ ಅನ್ನು ಹಂಪಿಯಲ್ಲೂ ಪರಿಚಯಿಸುತ್ತಿದ್ದು, ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಸೇರಿದಂತೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಜತೆಗೂಡಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅಂಬಾರಿ ಬಸ್ ಅನ್ನು ಪರಿಚಯಿಸುತ್ತಿದ್ದು, ಹಂಪಿಯಲ್ಲಿ ಈ ಬಸ್ ಸಂಚರಿಸುವಾಗ ವಿದ್ಯುತ್ ತಂತಿ ಹಾಗೂ ಮರ-ಗಿಡಗಳು ಅಡ್ಡಿಯಾಗಲಿವೆಯೇ ಎಂಬುದನ್ನು ಪರಿಶೀಲಿಸಲು ಪ್ರಾಯೋಗಿಕವಾಗಿ ಅಂಬಾರಿ ಬಸ್ ಅನ್ನು ಓಡಿಸಲಾಯಿತು. ಈ ವೇಳೆ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ಆರ್​ಎಫ್​ಒ ವಿನಯ್, ಜೆಸ್ಕಾಂ ಅಧಿಕಾರಿ ಉಮೇಶ್, ಆರ್​ಟಿಒ ಇನ್​ಸ್ಪೆಕ್ಟರ್ ಸಂದೀಪ್ ಮತ್ತಿತರರು ಪ್ರಯಾಣಿಸಿದರು.
ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
