ರಾಮನಗರ:ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ರೇಷ್ಮೆ ಇಲಾಖೆ ಆವರಣದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಇದರಿಂದ ರಾಮನಗರ-ಚನ್ನಪಟ್ಟಣ ಅವಳಿ ನಗರದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗಲಿದೆ. ಜ.27ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದೀಗ ಆದೇಶ ಹೊರಡಿಸಲಾಗಿದೆ.
75 ಕೋಟಿ ರೂ. ವೆಚ್ಚ:ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್​ನಿಂದ 75 ಕೋಟಿ ರೂ. ಆರ್ಥಿಕ ನೆರವು ಈಗಾಗಲೇ ಬಿಡುಗಡೆ ಆಗಿದೆ.
10 ದಿನಗಳಲ್ಲಿ ಟೆಂಡರ್​:ಮಾರುಕಟ್ಟೆಗೆ ಪ್ರತಿದಿನ 40-50 ಟನ್​ ರೇಷ್ಮೆಗೂಡು ಬರುತ್ತಿದೆ. ಹೈಟೆಕ್​ ಮಾರುಕಟ್ಟೆ ನಿರ್ಮಾಣವಾದ ಬಳಿಕ ಇದರ ಪ್ರಮಾಣ 100-150 ಟನ್​ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಗಾಗಿ, 10 ದಿನಗಳಲ್ಲಿ ಟೆಂಡರ್​ ಕರೆದು, ಆದಷ್ಟು ಬೇಗ ಭೂಮಿಪೂಜೆ ನೆರವೇರಿಸಲು ಕ್ರಮ ಕೈಗೊಳ್ಳುವಂತೆ ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾರುಕಟ್ಟೆಯಲ್ಲಿ ಏನೆಲ್ಲ ಇರಲಿದೆ?:ಹೈಟೆಕ್​ ಮಾರುಕಟ್ಟೆಯಲ್ಲಿ ಆಧುನಿಕ ಪ್ರವೇಶದ್ವಾರ, ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ, ಕೋರ್​ ಕಟ್ಟಡ, ಶೌಚಗೃಹದ ಬ್ಲಾಕ್​, ಅಗ್ನಿಶಾಮಕದಳದ ಕೊಠಡಿ, ವಿದ್ಯುತ್​ ಕೊಠಡಿ, ಪೊಲೀಸ್​ ಚೌಕಿ, ನೀರು ಶೇಖರಣಾ ತೊಟ್ಟಿ, ಒಳಚರಂಡಿ ಸಂಸ್ಕರಣಾ ಘಟಕ, ಕಾಂಪೌಂಡ್​, ಸೋಲಾರ್​ ವ್ಯವಸ್ಥೆ, ಸಿಸಿ ಕ್ಯಾಮರಾ, ಹವಾನಿಯಂತ್ರಣ ವ್ಯವಸ್ಥೆ, ಆಂತರಿಕ ರಸ್ತೆಗಳು, ಜನರೇಟರ್​ ಮತ್ತಿತರ ಸೌಲಭ್ಯಗಳು.
ತುಮಕೂರು ಸ್ಮಾರ್ಟ್​ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳ ಲವ್ವಿಡವ್ವಿ! ಕಾಲೇಜಿಗೆ ಚಕ್ಕರ್ ಹಾಕಿ ಮೈಮರೆಯುತ್ತಿರುವ ಜೋಡಿಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
