ವಿಜಯನಗರ:ಡಾ.ಪುನೀತ್ ರಾಜ್​ಕುಮಾರ್​ ನಮ್ಮನ್ನು ಅಗಲಿ 6 ತಿಂಗಳ ಕಳೆದರೂ ಅಭಿಮಾನಿಗಳ ಮನದಲ್ಲಿನ ನೋವು ಮಾತ್ರ ಇನ್ನೂ ಕರಗಿಲ್ಲ. ಅಪ್ಪು ನೆನಪಲ್ಲೇ ಇದ್ದಾರೆ. ಅವರ ಹಲವರು ಪುನೀತ್​ರ ಫೋಟೋವನ್ನ ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ, ಕೆಲವರು ಅಪ್ಪು ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ. ಕೆಲವರು ಅಪ್ಪು ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟು ಅವರಲ್ಲಿ ಅಪ್ಪು ಅವರನ್ನ ಕಾಣುತ್ತಿದ್ದಾರೆ. ಬೈಕ್​, ಕಾರು, ಆಟೋ ಮೇಲೆ ಕರುನಾಡಿನ ರಾಜಕುಮಾರನ ಫೋಟೋ ಮತ್ತು ಹೆಸರು ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇನ್ನು ಅಪ್ಪು ಅವರಿಂದ ಉಡುಗೊರೆ ಪಡೆದಿದ್ದ ಉಡುಗೊರೆಯನ್ನ ಅಭಿಮಾನಿಗಳಿಗೆ ಜೋಪಾನ ಮಾಡುತ್ತಿದ್ದಾರೆ… ಇದೀಗ ಸಚಿವರೊಬ್ಬರ ಕಚೇರಿಯಲ್ಲಿ ಪುನೀತ್​ರ ಜಾಕೆಟ್​ಗೆ ಫೋಟೋ ಫ್ರೇಮ್​ ಹಾಕಿಸಿ ಇಡಲಾಗಿದೆ.
‘ಅರಸು’ ಸಿನಿಮಾದಲ್ಲಿ ಪುನೀತ್​ರಾಜ್​ಕುಮಾರ್​ ಅವರು ಧರಿಸಿದ್ದ ಜಾಕೆಟ್​ಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ದಾರ್ಥ್ ಸಿಂಗ್ ಫೋಟೋ ಫ್ರೇಮ್​ ಹಾಕಿಸಿ ಅಪ್ಪನ ಕಚೇರಿಯಲ್ಲಿ ಇಟ್ಟಿದ್ದಾರೆ.

ಅರಸು ಸಿನಿಮಾದಲ್ಲಿ ತಾನು ಧರಿಸಿದ್ದ ಜಾಕೆಟ್​ ಅನ್ನು ಪುನೀತ್​ ಅವರು ಅಂದು ತನ್ನ ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವಗೆ ಕೊಟ್ಟಿದ್ದರು. ದೊಡ್ಮನೆ ಹುಡ್ಗನ ಪ್ರೀತಿಗೆ ಕಂಡು ಭಾವುಕರಾಗಿದ್ದ ಕಿಚಡಿ ವಿಶ್ವ, ಆ ಜಾಕೆಟ್​ ಅನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರು. ಅಪ್ಪು ಕೊಟ್ಟಿದ್ದ ಜಾಕೆಟ್ ಅನ್ನು ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್ ಅವರಿಗೆ ಕಿಚಡಿ ವಿಶ್ವ ನೀಡಿದ್ದು, ಜಾಕೆಟ್​ಗೆ ಫೋಟೋ ಪ್ರೇಮ್​ ಹಾಕಿಸಿ ಅಪ್ಪನ ಕಚೇರಿಯಲ್ಲಿ ಮಗ ಇಟ್ಟಿದ್ದಾರೆ.
ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
