ಬೆಂಗಳೂರು:ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಒಂದಾದ ಮೇಲೊಂದು ಯಡವಟ್ಟು ಮಾಡುತ್ತಲೇ ಇದ್ದಾರೆ.. ಜೆ.ಜೆ.ನಗರದಲ್ಲಿ ಸೋಮವಾರ ತಡರಾತ್ರಿ ಕೊಲೆಯಾದ 22 ವರ್ಷದ ಯುವಕ ಚಂದ್ರು ಕೇಸ್ ಸಂಬಂಧ ಸ್ಫೋಟಕ ಹೇಳಿಕೆ ಕೊಟ್ಟಿದ್ದ ಗೃಹ ಸಚಿವರು ಇದೀಗ ಉಲ್ಟಾ ಹೊಡೆದಿದ್ದಾರೆ. ಉರ್ದು ಬರಲ್ಲ ಎಂದು ಕನ್ನಡ ಮಾತಾಡಿದ್ದಕ್ಕೆ ದಲಿತ ಯುವಕ ಚಂದ್ರುನನ್ನು ಚೂರಿಯಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಇಂದು ಬೆಳಗ್ಗೆ ಅರಗ ಜ್ಞಾನೇಂದ್ರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಮತ್ತೆ ಆ ಹೇಳಿಕೆಯನ್ನ ಹಿಂಪಡೆದು ಕ್ಷಮೆ ಕೇಳಿದ್ದಾರೆ. ಈ ಹಿಂದೆ ಮೈಸೂರಲ್ಲಿ ಯುವತಿ ಮೇಲೆ ನಡೆದ ಗ್ಯಾಂಗ್​ ರೇಪ್​ ಪ್ರಕರಣ ಸಂಬಂಧ ಅಷ್ಟೊತ್ತಲ್ಲಿ ಯುವತಿ ಅಲ್ಲಿಗೇಕೆ ಹೋಗಬೇಕಿತ್ತು ಎಂದಿದ್ದರು. ಕಾಂಗ್ರೆಸ್​ನವರು ನನ್ನನ್ನೇ ರೇಪ್​ ಮಾಡ್ತಿದ್ದಾರೆ ಎಂದಿದ್ದರು. ಇದೀಗ ಚಂದ್ರು ಹತ್ಯೆ ಕೇಸ್​ನಲ್ಲೂ ವಿವಾದಾತ್ಮಕ ಹೇಳಿಕೆ ಕೊಟ್ಟು ಉಲ್ಟಾ ಹೊಡೆದಿದ್ದಾರೆ.
ಕಾಟನ್​ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು (22)ನನ್ನು ಸೋಮವಾರ ತಡರಾತ್ರಿ ಆರೋಪಿ ಶಾಹಿದ್​ ತಂಡ ಕೊಲೆ ಮಾಡಿತ್ತು. ಸ್ನೇಹಿತ ಸೈಮನ್​ ಹುಟ್ಟುಹಬ್ಬ ಆಚರಿಸಲು ಸೋಮವಾರ ರಾತ್ರಿ ಆತನ ಮನೆಗೆ ಚಂದ್ರು ಹೋಗಿದ್ದ. ಆ ವೇಳೆ ಚಿಕನ್​ ರೋಲ್​ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್​ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್​ ಮುಂದಿನಿಂದ ಬರುತ್ತಿದ್ದ ಶಾಹಿದ್​ ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ. ಈ ವೇಳೆ ಸರಿಯಾಗಿ ಬೈಕ್​ ಚಲಾಯಿಸುವಂತೆ ಶಾಹಿದ್​ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್​, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗೂ ಸೈಮನ್​ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್​ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್​ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ ಎಂದು ಪೊಲೀಸ್​ ಕಮಿಷನರ್​ ಕಮಲ್​ ಪಂತ್​ ಮತ್ತು ಡಿಸಿಪಿ ಅನುಚೇತ್​ ಅವರು ತಿಳಿಸಿದ್ದಾರೆ.
ಆದರೆ, ಗೃಹ ಸಚಿವರು ಮತ್ತು ಸಿ.ಟಿ.ರವಿ ಇಬ್ಬರೂ ಚಂದ್ರು ಹತ್ಯೆ ಕನ್ನಡ ಮಾತಾಡಿದ್ದಕ್ಕೆ ಆಗಿದೆ ಎಂದಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಎಬ್ಬಿಸಲು ಶುರು ಮಾಡಿತ್ತು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚಂದ್ರು ಸಾವನ್ನ ಎಳೆದು ತಂದರೇ? ಅಥವಾ ಪೊಲೀಸರೇ ಸತ್ಯ ಬಚ್ಚಿಟ್ಟರೇ? ಎಂಬ ಚರ್ಚೆ ಶುರುವಾಗಿತ್ತು. ಅಷ್ಟರಲ್ಲಿ ಗೃಹ ಸಚಿವರು ಉಲ್ಟಾ ಹೊಡೆದಿದ್ದಾರೆ. ಬೈಕ್​ ಟಚ್​ ಆಗಿದ್ದ ವಿಚಾರಕ್ಕೆ ಗಲಾಟೆ ನಡೆದು ಕೊಲೆಯಾಗಿದೆ. ನನಗೆ ಮೊದಲು ಬಂದ ಮಾಹಿತಿ ಪ್ರಕಾರ ಆ ಹೇಳಿಕೆಯನ್ನ ಕೊಟ್ಟುಬಿಟ್ಟೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಚಂದ್ರು ಕೊಲೆ ಕೇಸ್​: ಪೊಲೀಸರು ಮತ್ತು ಅರಗ ಜ್ಞಾನೇಂದ್ರ- ಸಿ.ಟಿ.ರವಿ ಹೇಳಿಕೆ… ಒಂದಕ್ಕೊಂದು ಸಂಬಂಧವೇ ಇಲ್ಲ

ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + six =
Remember me
