ಆನೇಕಲ್:ತೃತೀಯಲಿಂಗಿ ಆರತಿ ಜವರಾಗೌಡ ಹೆರಸು ಕೇಳಿದ್ರೆ ಸಾಕು ಎಲ್ಲರ ಕಣ್ಮುಂದೆ ಬರುತ್ತೆ ಕಳೆದ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು ಮತ್ತು ಅವರಲ್ಲಿ ಅಡಗಿರುವ ಸಮಾಜ ಸೇವೆ.
ಆರತಿ ಎಲೆಕ್ಷನ್​ಗೂ ಸೈ, ಬಡವರ ಹಸಿವು ನೀಗಿಸುವ ಕೆಲಸಕ್ಕೂ ಸೈ. ಕರೊನಾ ಲಾಕ್​ಡೌನ್​ನಂತಹ ಸಂಕಷ್ಟ ಕಾಲದಲ್ಲೂ ಜನರ ಕಷ್ಟಕ್ಕೆ ಮರುಗುವ ಆರತಿ, ಆನೇಕಲ್​ನ ದೊಮ್ಮಸಂದ್ರದಲ್ಲಿ ತನ್ನ ಸ್ವಂತ ದುಡಿಮೆಯ ಹಣದಿಂದ ಗುರುವಾರ ನೂರಾರು ಜನರಿಗೆ ದಿನನಿತ್ಯ ಬಳಕೆಗೆ ಬೇಕಾದ ಅಗತ್ಯ ಸಾಮಗ್ರಿ ವಿತರಿಸಿದರು.
ವಾರ್ಡಿನ ಎಲ್ಲ ಬಡವರಿಗೂ ಒಂದಿಲ್ಲೊಂದು ರೀತಿಯಲ್ಲಿ ಸಹಾಯಹಸ್ತ ಚಾಚುತ್ತಿರುವ ಆರತಿ ಜವರಾಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನಗೆ ಮಂಗಳಮುಖಿ ಎನ್ನುವ ಬೇಸರ ಇಲ್ಲ. ನನ್ನ ವಾರ್ಡಿನ ಜನರ ಹಿತ ಕಾಯುವುದೇ ನನಗೆ ಮುಖ್ಯ ಎಂದರು.
ಕಳೆದ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದೊಮ್ಮಸಂದ್ರದ 13ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಮಂಗಳಮುಖಿ ಆರತಿ. ಗೆಲುವಿನ ನಗೆ ಬೀರಿ ರಾಜ್ಯದ ಗಮನ ಸೆಳೆದಿದ್ದರು.
ಕೆಲಸಕ್ಕಾಗಿ ಮನೆಗೆ ಬಂದ ಯುವತಿಗೆ ಗ್ರಾಪಂ ಸದಸ್ಯ ಹೀಗಾ ಮಾಡ್ಹೋದು? ಈ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ಹಿರಿಯ ನಟಿ ಕವಿತಾರ ಮಗ ಕರೊನಾಗೆ ಬಲಿ, ಪತಿಯ ಸ್ಥಿತಿ ಗಂಭೀರ

5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

Sign in to your account
Please enter an answer in digits:fourteen − 10 =
Remember me
