ಮಧುಗಿರಿ:ಅರುಂಧತಿ ಸಿನಿಮಾ ನೋಡಿ ‘ಮುಕ್ತಿ’ಗಾಗಿ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ ದುರಂತ ಅಂತ್ಯಕಂಡಿದ್ದಾನೆ. ಸಾವಿಗೂ ಮುನ್ನ ಅತ್ಯಂತ ದಯನೀಯ ಸ್ಥಿತಿಯಲ್ಲೂ ‘ಮುಕ್ತಿ ಕೊಡಿಸಪ್ಪಾ…’ ಎಂದು ತಂದೆ ಬಳಿ ಅಂಗಲಾಚುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್​ ಆಗಿದ್ದವ ದಾರಿ ತಪ್ಪಿದ್ದೆಲ್ಲಿ? 5 ವರ್ಷ ಕಷ್ಟಪಟ್ಟರೂ ಮಗ ಸರಿ ದಾರಿಗೆ ಬರಲಿಲ್ಲವೇಕೆ? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇದೆ.
ಗಿಡ್ಡಯ್ಯನಪಾಳ್ಯದ ಸಿದ್ದಪ್ಪ ಅವರ ಪುತ್ರ ರೇಣುಕ (22) ಮೃತ. ತುಮಕೂರಿನಲ್ಲಿ ಪಿಯುಸಿ ಓದುತ್ತಿದ್ದ ರೇಣುಕ, ಸದಾ ತೆಲುಗಿನ ಅರುಂಧತಿ ಸಿನಿಮಾ ನೋಡುತ್ತಿದ್ದ. ಬುಧವಾರ ಕಾಲೇಜು ಮುಗಿಸಿಕೊಂಡು ಗ್ರಾಮಕ್ಕೆ ಬಂದಿದ್ದ ಈತ, ಮನೆಯಲ್ಲಿ ಮತ್ತೆ ಅರುಂಧತಿ ಸಿನಿಮಾ ನೋಡಿದ್ದು, ಪುರವರದ ಪೆಟ್ರೋಲ್​ ಬಂಕ್​ನಲ್ಲಿ 20 ಲೀಟರ್​ ಪೆಟ್ರೋಲ್​ ಖರೀದಿಸಿ ತಂದಿಟ್ಟುಕೊಂಡಿದ್ದ. ಸಿನಿಮಾದಲ್ಲಿರುವಂತೆ ಮುಕ್ತಿ ಬಯಸಿ ಬುಧವಾರ ರಾತ್ರಿ ತಮ್ಮದೇ ರೇಷ್ಮೆ ತೋಟದಲ್ಲಿ ತನ್ನ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಇದನ್ನು ನೋಡಿದ ಪಾಲಕರು ಮತ್ತು ಗ್ರಾಮಸ್ಥರು ತಕ್ಷಣ ಓಡಿಹೋಗಿ ಬೆಂಕಿ ನಂದಿಸಿದ್ದರಾದರೂ, ದೇಹ ಬಹುತೇಕ ಸುಟ್ಟಿತ್ತು. ಆಗಲೂ ಆತ ‘ಮುಕ್ತಿ ಕೊಡಿಸಪ್ಪಾ…’ ಎಂದು ಅಂಗಲಾಚುತ್ತಿದ್ದ.
ಸುಟ್ಟಗಾಯಗಳಿಂದ ನರಳುತ್ತಿದ್ದ ಮಗನ ಸ್ಥಿತಿ ನೋಡಿ ಕಣ್ಣೀರಿಟ್ಟ ತಂದೆ ಸಿದ್ದಪ್ಪ, “ಯಾಕಪ್ಪ ರೇಣುಕಣ್ಣ.. ಹೀಗೆ ಮಾಡಿಕೊಂಡೆ… ಏನಾಗಿದೆ ನಿನಗೆ. ಆ ತೆಲುಗು ಅರುಂಧತಿ ಸಿನಿಮಾ ನೋಡಬೇಡ ಎಂದು ಪದೇಪದೆ ಹೇಳಿದರೂ, ನೀನು ಕೇಳಲಿಲ್ಲ. ಆ ಸಿನಿಮಾ ನೋಡಿ ಅದೇ ರೀತಿ ಮಾಡಿಕೊಂಡಿದ್ದೀಯಲ್ಲಪ್ಪ..” ಎಂದು ಮಗನನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ಆಗ ತಂದೆಯ ಕಣ್ಣುಗಳನ್ನೇ ದೃಷ್ಟಿಸಿದ ಮಗ ರೇಣುಕಾ, “ಅಪ್ಪ ನನಗೆ ಮುಕ್ತಿ ಕೊಡಿಸಪ್ಪಾ.. ಕೊನೆಯ ಸ್ಟೇಜ್​ ಅಪ್ಪಾ…” ಎಂದು ಸಿನಿಮಾ ಮಾದರಿಯಲ್ಲೇ ತಂದೆಯನ್ನು ಅಂಗಲಾಚಿದ. “ನಿನಗೆ ನಾನು ಯಾವ ರೀತಿ ಮುಕ್ತಿಕೊಡಿಸಲಪ್ಪಾ.. ಸಿನಿಮಾ ಗೀಳು ಹಚ್ಚಿಕೊಳ್ಳಬೇಡ ಎಂದರೂ ಕೇಳಲಿಲ್ಲ. ಈಗ ನೋಡು ಎಂತಹ ಪರಿಸ್ಥಿತಿ ತಂದುಕೊಂಡೆ” ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಸುಟ್ಟಗಾಯಗಳಿಂದ ನರಳಾಡುತ್ತಿದ್ದ ನರಳುತ್ತಿದ್ದ ಯುವಕನನ್ನು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್​ ಮತ್ತು ಸ್ನೇಹಿತರು ಆಂಬುಲೆನ್ಸ್​ನಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ರೇಣುಕಾ ಕೊನೆಯುಸಿರೆಳೆದ.
ಟಾಪರ್​ ಆಗಿದ್ದವ ಹಾಸ್ಟೆಲ್​ ಸೇರಿ ಕೆಟ್ಟನಾ?:ಆತ್ಯಹತ್ಯೆಗೆ ಯತ್ನಿಸಿದ ಯುವಕನ ತಂದೆ ಮತ್ತು ಗ್ರಾಮಸ್ಥರು ಹೇಳುವಂತೆ ಯುವಕ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್​ ಆಗಿದ್ದ. ಆದರೆ ಎಸ್ಸೆಸ್ಸೆಲ್ಸಿ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ತುಮಕೂರಿನ ಹಾಸ್ಟೆಲ್​ ಸೇರಿಕೊಂಡು ಅಲ್ಲಿ ಪುಂಡ ಹುಡುಗರ ಸ್ನೇಹ ಬೆಳೆಸಿ ಸಿನಿಮಾ ಗೀಳು ಹತ್ತಿಸಿಕೊಂಡಿದ್ದ ಎನ್ನಲಾಗಿದ್ದು, 5 ವರ್ಷದಿಂದ ಸರಿದಾರಿಗೆ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣಬಿಟ್ಟ… ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು. ಕೊಡಿಗೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್: ಎಲ್ಲ ಕೇಸು ಲೋಕಾಯುಕ್ತಕ್ಕೆ ವರ್ಗಾಯಿಸಲು ಆದೇಶ

ಕ್ರೈಸ್ಟ್ ಕಾಲೇಜಿನ 7 ವಿದ್ಯಾರ್ಥಿಗಳ ಹುಚ್ಚಾಟ: ಕೆರೆಗೆ ಕಾರು ಪಲ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
