ಬೆಂಗಳೂರು:ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ  ನಟಿಯರು, ಯಂಗ್ ಹೀರೋಯಿನ್‌ಗಳಿಂದ ಹಿಡಿದು ಸೀನಿಯರ್ ಹೀರೋಯಿನ್‌ಗಳವರೆಗೆ ಎಲ್ಲರೂ ತಮಗಾದ ಕಹಿ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಮಲಯಾಳಂ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ ಈ ರೀತಿಯ ಸಮಿತಿ ಕನ್ನಡ ಚಿತ್ರಂಗಕ್ಕೂ ಅಗತ್ಯವಿದೆ  ಎನ್ನುವ ಕೂಗು ಕೇಳಿ ಬಂದಿತ್ತು.
ಮಾಲಿವುಡ್​ನ ಹೇಮಾ ಸಮಿತಿ ವರದಿಯಲ್ಲಿ ನಟಿಯರು ಬಿಚ್ಚಿಟ್ಟಿರುವ ಕಾಸ್ಟಿಂಗ್​ ಕೌಚ್​ ಕುರಿತು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಮಯದಲ್ಲಿ ನಟಿ ಶ್ರುತಿ ಹರಹರನ್​ ಸ್ಯಾಂಡಲ್​ವುಡ್​ನಲ್ಲಿಯೂ ಇಂಥದ್ದೊಂದು ಸಮಿತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರಕ್ಕೆ ಕರೆ ನೀಡಿದೆ.

ಲಿಂಗ ನ್ಯಾಯವನ್ನು ಪ್ರತಿಪಾದಿಸುವ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ. ನಾವು ಈ ಸಂದೇಶದೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಅರ್ಜಿಗಳನ್ನು ಒದಗಿಸಿದ್ದಾರೆ ಎನ್ನಲಾಗಿದೆ.

2018ರಲ್ಲಿ ನಟಿ ಶ್ರುತಿ ಹರಹರನ್​ ಅವರು, ನಟ ಅರ್ಜುನ್​ ಸರ್ಜಾ ಅವರ ವಿರುದ್ಧ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪ ಮೀ-ಟು ಅಭಿಯಾನದ ಮೂಲಕ ಹೇಗೆಲ್ಲಾ ಬಿರುಗಾಳಿಯನ್ನೇ ಸೃಷ್ಟಿಸಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಶ್ರುತಿ ಅವರು ಈ ವಿಷಯವನ್ನು ಹೇಳಿದ ಬಳಿಕ, ಸಿನಿ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಬಾಲಿವುಡ್​ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ನಟಿಯರು ತಮಗಾಗಿರುವ ದೌರ್ಜನ್ಯದ ಕುರಿತು ಹೇಳಿಕೊಂಡರು. ಸಿನಿಮಾ ಮಾತ್ರವಲ್ಲದೇ ವಿಭಿನ್ನ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರೂ ತಮ್ಮ ಕಾರ್ಯಕ್ಷೇತ್ರಗಳಲ್ಲಿ ತಮಗಾಗಿರುವ, ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಮಾತನಾಡಿದರು. ಮೀ ಟೂ ಅಭಿಯಾನ ಕೆಲ ವರ್ಷ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತು. ಅದಾದ ಬಳಿಕ ಒಬ್ಬೊಬ್ಬರೇ ನಟಿಯರು ತಮಗಾಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಬಹಿರಂಗವಾಗಿ ಹೇಳಿಕೊಂಡಿದ್ದರು, ಈಗಲೂ ಹೇಳಿಕೊಳ್ಳುತ್ತಲೇ ಇದ್ದಾರೆ. ಕೆಲವರು ತಮಗೆ ಆಮಿಷ ಒಡ್ಡಿದ, ಲೈಂಗಿಕತೆಗೆ ಬರುವಂತೆ ಪ್ರಚೋದಿಸಿದವರ ಹೆಸರನ್ನು ನೇರಾನೇರ ಹೇಳಿದ್ದರೆ, ಹಲವು ನಟಿಯರು ಯಾರ ಹೆಸರನ್ನೂ ಹೇಳದೇ ಘಟನೆಯ ಕುರಿತು ವಿವರಿಸಿದ್ದಾರೆ.
ತುಟಿ ಒತ್ತಿ ಮುತ್ತು ಕೊಡುತ್ತಿದ್ದರು, ಆ ವಿಷಯದಲ್ಲಿ ತೊಂದ್ರೆ ಕೊಡ್ತಿದ್ದರು! ರಾಧಿಕಾ ಶರತ್ ಕುಮಾರ್ ಶಾಕಿಂಗ್ ಕಾಮೆಂಟ್ಸ್

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:6 − five =
Remember me
