ತುಮಕೂರು:ಸರಿಯಾಗಿ ಓದಲಿಲ್ಲ ಎಂದು ಶಾಲಾ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಭಾರತ್​ ಮಾತಾ ಶಾಲೆ ಶಿಕ್ಷಕಿ ರಹತ್​ ಫಾತಿಮಾ ಶಿಕ್ಷೆಗೆ ಗುರಿಯಾದವರು. 2011ರ ಫೆ.17ರಂದು ಸರಿಯಾಗಿ ಓದಲಿಲ್ಲವೆಂದು 7 ವರ್ಷದ ಬಾಲಕಿಗೆ ಕೋಲಿನಿಂದ ಹೊಡೆದ ಪರಿಣಾಮ ಬಾಲಕಿಯ ಎಡಗಣ್ಣಿಗೆ ಗಾಯವಾಗಿತ್ತು. ಈ ಸಂಬಂಧ ತಿಲಕ್​ ಪಾರ್ಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಠಾಣಾ ಪಿಎಸ್​ಐ ಆಗಿದ್ದ ದಿನೇಶ್​ ಪಾಟೀಲ್​ ಆರೋಪಿ ಶಿಕ್ಷಕಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆ 325ರ ಅಡಿಯಲ್ಲಿ ಶಿಕ್ಷಕಿ ಅಪರಾಧವೆಸಗಿರುವುದು ಸಾಬೀತಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಸಿವಿಲ್​ ಹಾಗೂ ಜೆಎಂಎಸಿ ಕೋರ್ಟ್​ನ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಶಿಕ್ಷಕಿಗೆ 3 ವರ್ಷ ಕಠಿಣ ಸಜೆ, 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಜಿ.ಬಸವರಾಜು ವಾದ ಮಂಡಿಸಿದ್ದರು.
ಬಿಗ್​ ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​ಗೆ ಅಪಘಾತ

ತಂಗಿ ಸತ್ತರೂ ಯಾರಿಗೂ ಹೇಳದೆ 4 ದಿನ ಶವದ ಜತೆ ಒಬ್ಬಳೇ ಇದ್ದ ಅಕ್ಕ! ಇವರಿಬ್ಬರ ಬದುಕೇ ಕರುಣಾಜನಕ

ದೇವನಹಳ್ಳಿಯ ಬಾಡಿಗೆ ಮನೇಲಿ ಗೃಹಿಣಿ ಜತೆ ಯುವಕ ಆತ್ಮಹತ್ಯೆ: ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಬಯಲಾಯ್ತು ಭಯಾನಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + seventeen =
Remember me
