ತುಮಕೂರು:ಫೇಸ್​ಬುಕ್​ನಲ್ಲಿ ಬಂದ ಜ್ಯೋತಿಷಿಯೊಬ್ಬರ ಜಾಹೀರಾತು ನಂಬಿ ಕೌಟುಂಬಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋದ ಉದ್ಯಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಕೆಇಬಿ ಲೇಔಟ್​ ಸಪ್ತಗಿರಿ ಬಡಾವಣೆ ನಿವಾಸಿ, ಉದ್ಯಮಿ ವಿಜಯ್​ಬಾಬು ಎಂಬುವರ ಮನೆಯ ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಫೇಸ್​ಬುಕ್​ ಜಾಹೀರಾತು ನೋಡಿ ಜ್ಯೋತಿಷಿಯ ಮೊರೆಹೋಗಿದ್ದರು. ಶಂಕರಶರ್ಮ ಮತ್ತು ಮಾದವರಾವ್​ ಎಂಬುವವರು ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ನಂಬಿಸಿ ಪೂಜೆ, ಹೋಮ, ಹಾಗೂ ವಿವಿಧ ಪೂಜಾ ಕೈಂಕರ್ಯಗಳ ನೆಪದಲ್ಲಿ ಹಂತಹಂತವಾಗಿ ಉದ್ಯಮಿ ಬಳಿ ವಿವಿಧ ಬ್ಯಾಂಕ್​ ಖಾತೆಗಳಿಂದ 46 ಲಕ್ಷ ರೂ. ಪಡೆದಿದ್ದಾರೆ.
ಹಣ ಪಡೆದು ಯಾವುದೇ ಪೂಜೆ ಮಾಡದೆ ಮೊಬೈಲ್​ ಸ್ವಿಚ್ಡ್​ ಆಫ್​ ಮಾಡಿಕೊಂಡು ಕಾಣೆಯಾಗಿದ್ದರಿಂದ ವಿಜಯ್​ಬಾಬು ಅವರು ಸಿಇಎನ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಈಶ್ವರಪ್ಪ ವಿರುದ್ಧ ಕಮಿಷನ್​ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ! ಸಾವಿಗೂ ಮುನ್ನ ಡೆತ್​ನೋಟ್​ ರವಾನೆ

ತಿಂಗಳ ಹಿಂದಷ್ಟೇ ಜನಿಸಿದ್ದ ಮುದ್ದು ಮಗುವಿಗೆ ತಂದೆಯಾಗಿದ್ದ ಪೊಲೀಸ್​ ಪೇದೆ ಬಾಳಲ್ಲಿ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
