ತುಮಕೂರು:ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ತಿಪಟೂರು ನಗರದಲ್ಲಿರುವ ಶಿಕ್ಷಣ ಸಚಿವ ನಾಗೇಶ್​ರ ಮನೆಗೆ NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಬುಧಾವರ ಮಧ್ಯಾಹ್ನ ಹಲವರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಕುರಿತು ತುರ್ತುಗೋಷ್ಠಿ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್​ನ ಕೆಲ ಕಾರ್ಯಕರ್ತರು ನಾಗೇಶ್​ರ ಮನೆಗೆ ನುಗ್ಗಿದ್ದಾರೆ. ಅಷ್ಟೇ ಅಲ್ಲ ನನಗೆ ಬಂದ ಮಾಹಿತಿ ಪ್ರಕಾರ ಅವರು ನಾಗೇಶ್​ರ ಮನೆಗೆ ಬೆಂಕಿ ಹಾಕಲು ಮುಂದಾಗಿದ್ದರು ಎಂದರು.
ಈಗಾಗಲೇ 15 ಜನರರು ಮತ್ತು 2 ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಗುಂಡಾ ವರ್ತನೆ ನಮ್ಮಲ್ಲಿ ನಡೆಯಲ್ಲ. ಬೆಂಗಳೂರಿಂದ ಐವರು, ದಾವಣಗೆರೆಯಿಂದ ಮೂವರು, ಹಾಸನದಿಂದ ಒಬ್ಬರು, ತುಮಕೂರಿನಿಂದ ಒಬ್ಬರು‌ ಎಸ್​ಎಸ್​ಯುಐ ಮುಖಂಡರು ಪ್ರೀ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಅವರಿಗೆಲ್ಲ ಈಗ ಪೊಲೀಸರು ಕಾನೂನಿನ ಪಾಠ ಮಾಡ್ತಾರೆ. ಇದು ಕಾಂಗ್ರೆಸ್ ಮುಖಂಡರ ಕೈವಾಡ. ದಾವಣಗೆರೆಯ ಎನ್​​ಎಸ್​ಯುಐ ಉಪಾಧ್ಯಕ್ಷ ಫೈಲ್ವಾನ್ ಅಲಿ ರೆಹಮಾನ್ ಎಂಬಾತ ಬಂದಿದ್ದಾನೆ. ಮೊದಲೇ ಸಂಚು ರೂಪಿಸಿಕೊಂಡು ಬಂದಿದ್ದಾರೆ. ಯಾರೆಲ್ಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಎಚ್ಚರಿಸಿದರು.
ನಾನು- ಅನಂತರಾಜು ಇಬ್ಬರೂ 6 ವರ್ಷದಿಂದ ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಇದ್ವಿ… ಪೊಲೀಸ್​ ಠಾಣೆ ಮುಂದೆ ರೇಖಾ ಕಣ್ಣೀರು

ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ತಂದೆಗೆ 107 ವರ್ಷ ಜೈಲು ಶಿಕ್ಷೆ! ಕೇರಳ ಇತಿಹಾಸದಲ್ಲೇ ಗರಿಷ್ಠ ಸೆರೆಮನೆವಾಸ

ರಜೆ ಬೇಕಂದ್ರೆ ಲಾಡ್ಜ್​ಗೆ ಬಂದು ಬಟ್ಟೆ‌ ಬಿಚ್ಚಬೇಕಂತೆ… ಕೊಪ್ಪಳದ ಸರ್ಕಾರಿ ಕಚೇರಿ ಮಹಿಳಾ ಸಿಬ್ಬಂದಿಯ ಕಣ್ಣೀರ ಕಥೆ

ಡಿಕೆಶಿ ಮುಖ್ಯಮಂತ್ರಿ ಆಗೋದು ಖಚಿತ! ಆಗ ಕುಣಿಗಲ್​ಗೆ ನಾನೇ ಸಿಎಂ ಎಂದ ಶಾಸಕ ರಂಗನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − three =
Remember me
