ಸಕಲೇಶಪುರ:ತಾಲೂಕಿನ ಹುರುಡಿ ಗ್ರಾಮ ಹೊರವಲಯದಲ್ಲಿ ಪೈಪ್​ಲೈನ್​ಗೆ ಕನ್ನ ಹಾಕಿ ಪೆಟ್ರೋಲ್​ ಕದಿಯಲು ಯತ್ನಿಸಿದ ಘಟನೆ ಸಂಭವಿಸಿದೆ. ಪೊಲೀಸರೊಂದಿಗೆ ಎಂಎಚ್​ಬಿ ಕಂಪನಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದರಿಂದ ಖದೀಮರ ಸಂಚು ವಿಫಲವಾಗಿದೆ.
ಎಂಎಚ್​ಬಿ ಕಂಪನಿ ಮಂಗಳೂರಿನಿಂದ ಬೆಂಗಳೂರಿಗೆ ಪೈಪ್​ಲೈನ್​ ಮೂಲಕ ಪೆಟ್ರೋಲ್​ ಸಾಗಿಸುತ್ತಿದೆ. ಎರಡು ದಿನಗಳ ಹಿಂದೆ ಕಳ್ಳರು ಗ್ರಾಮ ಹೊರವಲಯದಲ್ಲಿ ಜೆಸಿಬಿ ಮೂಲಕ ಪೈಪ್​ಲೈನ್​ ಮೇಲಿನ ಮಣ್ಣನ್ನು ತೆರವುಗೊಳಿಸಿ, ಪೈಪ್​ಗೆ ವಾಲ್ವ್​ ಫಿಟ್​ ಮಾಡಿ, ಪೈಪ್​ ಅಳವಡಿಸಿ ಅದಕ್ಕೆ ರಂದ್ರ ಕೊರೆಯುತ್ತಿದ್ದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ನೆರಿಯ ಎಂಬ ಪ್ರದೇಶದ ಸ್ಟೇಷನ್​ ಸಿಗ್ನಲ್​ನಲ್ಲಿ ಸೆನ್ಸಾರ್​ ಮೂಲಕ ರಂದ್ರ ಕೊರೆಯುತ್ತಿರುವುದು ಪತ್ತೆಯಾಯಿತು. ಎಚ್ಚೆತ್ತ ಅಧಿಕಾರಿಗಳು ರಾತ್ರೋರಾತ್ರಿ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ಗ್ರಾಮಾಂತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಕರಾವಳಿ-ಮಲೆನಾಡು ಭಾಗದಲ್ಲಿ ಮತ್ತೆ ಸ್ಯಾಟಲೈಟ್​ ಫೋನ್​ ಸಿಗ್ನಲ್​ ಪತ್ತೆ

PSI ಜತೆ ಅನುಚಿತ ವರ್ತನೆ: 6 ಪೇದೆಗಳ ಸಸ್ಪೆಂಡ್​​

ಕೊರಟಗೆರೆ ಪಟ್ಟಣದಲ್ಲಿ ಡಾಂಬರು ಡ್ರಮ್ ಸಿಡಿದು ಐವರಿಗೆ ಅಂಟಿಕೊಂಡ ಟಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
