ಬೆಂಗಳೂರು:ಆಟೋ ಓಡಿಸುವ ಶೋಕಿ ಬೆಳೆಸಿಕೊಂಡ ಬಾಲಕನೊಬ್ಬ, ಸಂಜೆ ವೇಳೆ ನಗರದ ವಿವಿಧೆಡೆ ಸುತ್ತಾಡಿ ಆಟೋಗಳ ಮೇಲೆ ಕಣ್ಣಿಡುತ್ತಿದ್ದ. ತಡರಾತ್ರಿ ಆ ಆಟೋಗಳನ್ನು ಕದ್ದು ಸಮಾಧಾನ ಆಗುವವರೆಗೂ ಸುತ್ತಾಡುತ್ತಿದ್ದ. ಬಳಿಕ ರಸ್ತೆಬದಿ ನಿಲ್ಲಿಸಿ ಪರಾರಿಯಾಗುತ್ತಿದ್ದ. ಮತ್ತೆ ಬೇರೆ ಆಟೋ ಕದ್ದು ಅದೇ ರೀತಿ ಸುತ್ತಾಡಿ ರಸ್ತೆಬದಿ ನಿಲ್ಲಿಸುತ್ತಿದ್ದ…
ಇಂತಹ ವಿಚಿತ್ರ ಕಳ್ಳನನ್ನು ವಶಕ್ಕೆ ಪಡೆದ ಕೆಂಗೇರಿ ಠಾಣೆ ಪೊಲೀಸರು, 6 ಆಟೋಗಳನ್ನು ಜಪ್ತಿ ಮಾಡಿದ್ದಾರೆ. ಮಾ.11ರ ರಾತ್ರಿ ಕೆಂಗೇರಿಯ ಮನೆಯ ಎದುರು ನಿಲ್ಲಿಸಿದ್ದ ಆಟೋ ಕಳುವಾಗಿತ್ತು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ವಿವಿಧೆಡೆ ಕಳವು ಮಾಡಿದ್ದ 15 ಲಕ್ಷ ರೂ. ಮೌಲ್ಯದ 6 ಆಟೋಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ-ಕಾರಿನ​ ನಡುವೆ ಭೀಕರ ಅಪಘಾತ: 5 ವಿದ್ಯಾರ್ಥಿಗಳು ದುರ್ಮರಣ, ಸಾವಲ್ಲೂ ಒಂದಾದ ಸ್ನೇಹಿತರು…

ದೇವಾಲಯ ನಿರ್ಮಾಣಕ್ಕೆ ನೀರು ಬಿಡಲು ಹೋದ ಗ್ರಾಪಂ ಸದಸ್ಯ ಸಾವು

https://www.vijayavani.net/a-prostitution-case-acused-ullala-abdul-razik-arrest/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
