ಬೆಂಗಳೂರು:2021ನೇ ಸಾಲಿನ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆ(UPSC)ಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ದೇಶಕ್ಕೆ ಶ್ರುತಿ ಶರ್ಮಾ ಟಾಪರ್​ ಆಗಿ ಹೊರಹೊಮ್ಮಿದರೆ, 31ನೇ ರ್ಯಾಂಕ್​ ಪಡೆದ ದಾವಣಗೆರೆಯ ಅವಿನಾಶ್​ ಕರ್ನಾಟಕಕ್ಕೆ ಮೊದಲಿಗರು. ಮೊದಲ ಪ್ರಯತ್ನದಲ್ಲಿಯೇ UPSC ಎಕ್ಸಾಂ ಪಾಸ್​ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಅವಿನಾಶ್​, ತಮ್ಮ ಸಾಧನೆ ಬಗ್ಗೆ‘ದಿಗ್ವಿಜಯ ನ್ಯೂಸ್’​ಜತೆ ಮಾತನಾಡಿದ್ದಾರೆ.
‘ಪ್ರತಿನಿತ್ಯ ನಾನು 6-7 ತಾಸು ಓದುತ್ತಿದ್ದೆ. ಹಿರಿಯರ ಆಶೀರ್ವಾದ, ನನ್ನ ತಂದೆ-ತಾಯಿ, ಅಜ್ಜ, ತಂಗಿ, ದೊಡ್ಡಪ್ಪ ಅವರ ಸಹಕಾರ ತುಂಬಾನೇ ಇತ್ತು. ನಾನು ಕೋಚಿಂಗ್​ ಕ್ಲಾಸ್​ಗೂ ಹೋಗಿದ್ದೆ. ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಎಕ್ಸಾಂ ಪಾಸ್​ ಆಗಿದ್ದು ತುಂಬಾ ಖುಷಿಯಾಗಿದೆ. ನನಗೆ 31ನೇ ರ್ಯಾಂಕ್​ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ದೇಶದ ಸೇವೆ ಮಾಡಲು ಸಿಕ್ಕ ಒಳ್ಳೆಯ ಅವಕಾಶ ಇದು. ದೇಶದ ಅಭಿವೃದ್ಧಿಗೆ ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಯುಪಿಎಸ್​ಸಿ ಸಾಧಕರು ಆಗ್ಬೇಕು ಅಂದ್ರೆ ಹಾರ್ಡ್​ವರ್ಕ್​ ಬೇಕೆಬೇಕು. ದಿನಕ್ಕೆ ಐದಾರು ತಾಸು ಓದಬೇಕು. ಪರೀಕ್ಷೆ ಬಗ್ಗೆ ಮೊದಲು ತಿಳಿದುಕೊಂಡು ನಂತರ ಓದಬೇಕು. ಅದಕ್ಕಾಗಿ ಗೈಡರ್​ ಬೇಕು ಎಂದು ಯುಪಿಎಸ್​ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ಅವಿನಾಶ್​ ಅವರು ದಾವಣಗೆರೆಯ ಹೋಟೆಲ್ ಉದ್ಯಮಿ, ಆನಂದ್ ರೆಸಿಡೆನ್ಸಿ ಮಾಲೀಕ ವಿಠಲ್‌ರಾವ್​ರ ಪುತ್ರ.
UPSC ರಿಸಲ್ಟ್​ ಪ್ರಕಟ: ದೇಶಕ್ಕೆ ಶ್ರುತಿ ಶರ್ಮಾ ಟಾಪರ್​, ದಾವಣಗೆರೆಯ ಅವಿನಾಶ್​ಗೆ 31ನೇ ರ‌್ಯಾಂಕ್

Sign in to your account
Please enter an answer in digits:eight − three =
Remember me
