ಬಾಗಲಕೋಟೆ:ರಾಜ್ಯಾದ್ಯಾಂತ ಅಪ್ಪು ಅಭಿಮಾನಿಗಳು ನೋವಿನಲ್ಲೇ ‘ಜೇಮ್ಸ್​’ ಜಾತ್ರೆಯಲ್ಲಿ ಮುಳುಗಿದ್ದಾರೆ. ಅಪ್ಪು ಇಲ್ಲದ ಮೊದಲ ಬರ್ತ್​ ಡೇ ದಿನದಂದೇ ಬಿಡುಗಡೆಯಾದ ಅವರು ನಾಯಕರಾಗಿ ನಟಿಸಿರುವ ಕೊನೇ ಚಿತ್ರ ಜೇಮ್ಸ್​ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಬಳಿ ಜನಸಾಗರವೇ ಸಾಲುಗಟ್ಟಿ ನಿಂತಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಜೇಮ್ಸ್ ಸಿನಿಮಾ ಟಿಕೆಟ್​ಗಾಗಿ ಮುಗಿಬಿದ್ದ ಅಭಿಮಾನಿಗಳತ್ತ ಪೊಲೀಸರು ಲಾಠಿ ಬೀಸಿದ ಘಟನೆಯೂ ನಡೆದಿದೆ.
ಬಾಗಲಕೋಟೆಯ ಶಕ್ತಿ ಚಿತ್ರಮಂದಿರದಲ್ಲಿ ಸೆಕೆಂಡ್ ಶೋ ಆರಂಭದ ವೇಳೆ ಈ ಘಟನೆ ಸಂಭವಿಸಿದೆ. ಫಸ್ಟ್ ಶೋಗೆ ಟಿಕೆಟ್ ಸಿಗದವರು ಹಾಗೂ ಸೆಕೆಂಡ್ ಶೋಗೆ ಬಂದವರು ಎಲ್ಲರೂ ಒಮ್ಮೆಲೆ ಜಮಾಯಿಸಿದ್ದರು. ಜನದಟ್ಟಣೆ ಹೆಚ್ಚಾಗಿತ್ತು. ಅಷ್ಟೇ ಅಲ್ಲ ಟಾಕೀಸ್​ನ ಒಳ ಹೋಗಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.
ಕಾಡಿತು ಅಪ್ಪು ಅಗಲಿಕೆ ನೋವು… ಜೇಮ್ಸ್​ ನೋಡಲಾಗದೆ ಕಣ್ಣೀರು ಹಾಕುತ್ತಾ ಥಿಯೇಟರ್​ನಿಂದ ಹೊರ ಬಂದ ಫ್ಯಾನ್ಸ್!

ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್​ ಕಟ್ಟಿರೋ ಜೆಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
