ಮಂಡ್ಯ:ಕೆಆರ್​ಎಸ್​ ಡ್ಯಾಂ ಭರ್ತಿಯಾದ ಹಿನ್ನೆಲೆ ಬುಧವಾರ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದರು. ಬಳಿಕ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂನ ಕಾವೇರಿ ಪ್ರತಿಮೆ ಮುಂಭಾಗ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಾಡಿನ ಜೀವನದಿ ಕಾವೇರಿ. ಈ ಭಾಗದ ಭಾಗ್ಯದ ಬಾಗಿಲು ತೆಗೆದ ತಾಯಿ. ಮೈಸೂರಿನ ಮಹಾರಾಜರು ಈ ಕನ್ನಂಬಾಡಿ ಕಟ್ಟಿದ್ದಾರೆ. ಅವರ ಶ್ರಮ, ತ್ಯಾಗ ಮರೆಯಲು ಅಸಾಧ್ಯ. ಬೃಹತ್ ನೀರಾವರಿ ಯೋಜನೆ ತಂದಿದ್ದಾರೆ. ವಿಶ್ವೇಶ್ವರಯ್ಯ ಅವರನ್ನ ನಾವು ನೆನೆಯಬೇಕು. ಈ ಡ್ಯಾಂ ನಮ್ಮ ಪವರ್ ಗ್ರಿಡ್. ಇದನ್ನು ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂದರು.
ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ. ಹಳೇ ಗೇಟ್​ಗಳು ಸಂಪೂರ್ಣ ಹಾಳಾಗಿದ್ದವು. ಅದರಿಂದ ಸಾಕಷ್ಟು ನೀರು ಪೋಲಾಗಿತ್ತು. ಅದನ್ನ ನೋಡಿ ನನಗೆ ನಿದ್ದೆಯೇ ಬರಲಿಲ್ಲ. ತಕ್ಷಣ ಆ ಗೇಟ್​ಗಳ ಬದಲಾವಣೆ ಮಾಡಲು ನಿರ್ಧಾರ ಮಾಡಿದೆ. ಮೊದಲು 16 ಗೇಟ್ ರಿಪೇರಿ ಮಾಡಿಸಿದೆ. ಇನ್ನೂ 61 ಗೇಟ್ ಬದಲಾವಣೆ ಮಾಡಬೇಕಿದೆ. ಇನ್ನು ಒಂದೂವರೆ ವರ್ಷದಲ್ಲಿ ಕಾರ್ಯ ಮುಗಿಯಬೇಕು. ಗೇಟ್​ಗಳ ಬದಲಾವಣೆಗೆ 150 ಕೋಟಿ ರೂ. ವೆಚ್ಚವಾಗಿದೆ. ಈ ಕಾಮಗಾರಿ ಮುಗಿಸಿ ಕೆಆರ್​ಎಸ್​ನ 75ನೇ ವರ್ಷ ಆಚರಣೆ ಮಾಡ್ತೀವಿ ಎಂದು ಸಿಎಂ ಹೇಳಿದರು.
ಮುಂದಿನ ವಾರ ಮೇಕೆದಾಟು ಯೋಜನೆ ಅಂತಿಮ ಆದೇಶ ಬರುವ ಸಾಧ್ಯತೆ ಇದೆ. ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡುತ್ತಿದ್ದಾರೆ, ಮುಂದಿನ ವಾರ ಮತ್ತೊಂದು ವಿಚಾರಣೆ ಇದೆ. ಅಂದು ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ, ನಂತರ ಡಿಪಿಆರ್ ಅನುಮೋದನೆ ಪಡೆದು ಕೆಲಸ ಪ್ರಾರಂಭಿಸುತ್ತೇವೆ. ರಾಜಕೀಯ ಕಾರಣಕ್ಕೆ ತಮಿಳುನಾಡು ಯೋಜನೆಯನ್ನು ವಿರೋಧಿಸುತ್ತಿದೆ‌. ಆದರೂ ನಾವು ಫೈಟ್ ಮಾಡುತ್ತೇವೆ. ಮೇಕೆದಾಟು ಯೋಜನೆ ಅನುಷ್ಠಾನವಾಗಿ ನೀರು ಸಂಗ್ರಹವಾದರೆ, ನೀರಿನ ಅಭಾವ ಎದುರಾದಾಗ ಎರಡೂ ರಾಜ್ಯದವರು ಬಳಕೆ ಮಾಡಿಕೊಳ್ಳಬಹುದು ಎಂದರು.
ಸಚಿವರಾದ ಗೋವಿಂದ ಕಾರಜೋಳ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಗನಚುಕ್ಕಿ-ಭರಚುಕ್ಕಿಗೆ ಟೂರ್​ ಪ್ಯಾಕೇಜ್​ ಘೋಷಿಸಿದ ಕೆಎಸ್​ಆರ್​ಟಿಸಿ: ಪ್ರವಾಸ ದರ ತಲಾ 250 ರೂಪಾಯಿ

ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ವಾಮಾಚಾರ? ಪ್ರಾಂಶುಪಾಲರ ಕೊಠಡಿಯಲ್ಲಿ ಕೆಂಪು ದಾರ-ಬೊಂಬೆ ಪತ್ತೆ!

ಕಬಿನಿ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಸಿಎಂ: ನಾಡಿನಲ್ಲಿ ಉತ್ತಮ ಮಳೆ-ಬೆಳೆ ಆಗಲೆಂದು ಪ್ರಾರ್ಥನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − five =
Remember me
