ಚಾಮರಾಜನಗರ:ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಗುಂಡ್ಲುಪೇಟೆ ಪಣ್ಣಣದಲ್ಲಿ ಏರ್ಪಡಿಸಿದ್ದ ಬೃಹತ್​ ವೇದಿಕೆ ಕಾರ್ಯಕ್ರಮಕ್ಕ ಆಗಮಿಸಿದ ರಾಹುಲ್​ಗಾಂಧಿ ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ನಡೆಯಲಿರುವ 21 ದಿಗಳ ಯಾತ್ರಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ರಾಹುಲ್​ಗಾಂಧಿ ಅವರ ಎಡ-ಬಲ ಭಾಗದಲ್ಲಿ ನಿಂತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಸಾಥ್​ ಕೊಟ್ಟರು. ಈ ವೇಳೆ ಸಿದ್ದು- ಡಿಕೆಶಿ ಅವರಿಬ್ಬರ ಕೈ ಹಿಡಿದು ರಾಹುಲ್​ ಗಾಂಧಿ ನಗಾರಿ ಬಾರಿಸಿ ಇವರಿಬ್ಬರೂ ಒಂದೇ. ಬಣ ರಾಜಕೀಯ ಇಲ್ಲ ಎಂದು ಸಂದೇಶ ಸಾರಿದರು. ಸಿದ್ದರಾಮೋತ್ಸವ ವೇದಿಕೆಯಲ್ಲಿ ರಾಹುಲ್​ ಕೈ ಸನ್ನೆ ಮೇರೆಗೆ ಸಿದ್ದು ಮತ್ತು ಡಿಕೆಶಿ ಅವರಿಬ್ಬರೂ ಪರಸ್ಪರ ಅಪ್ಪಿಕೊಂಡಿದ್ದನ್ನು ಸ್ಮರಿಸಬಹುದು.
ಇನ್ನು ವೇದಿಕೆ ಆಗಮಿಸಿದ ಸಾಹಿತಿ ದೇವನೂರು ಮಹದೇವ ಅವರ ನೇತೃತ್ವದ ತಂಡ ರಾಹುಲ್ ಗಾಂಧಿಗೆ ಸಂವಿಧಾನದ ಪ್ರಿಯಾಂಬಲ್ ನೀಡಿ ಶುಭ ಹಾರೈಸಿದರು. ಬಳಿಕ ರಾಹುಲ್​ಗಾಂಧಿ ನೇತೃತ್ವದಲ್ಲಿ ಸಹಸ್ರಾರು ಜನರು ಪಾದಯಾತ್ರೆ ಹೊರಟಿದ್ದಾರೆ. ದಾರಿಯುದ್ದಕ್ಕೂ ಜಾನಪದ ಕಲಾತಂಡಗಳು ಯಾತ್ರೆಗೆ ಮೆರುಗು ನೀಡುತ್ತಿವೆ. ಕಾರ್ಯಕರ್ತರು ಕಾಂಗ್ರೆಸ್​ ಪರ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್​ಗೆ ಯಾಮಾರಿಸಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ ಸಿದ್ದು!?

ಹಸು ಮೇಯಿಸಿಕೊಂಡು ಮನೆಗೆ ತೆರಳುತ್ತಿದ್ದ ಚನ್ನಪಟ್ಟಣದ ರೈತ ದಂಪತಿ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − four =
Remember me
