ಗುಂಡ್ಲುಪೇಟೆ:ಬಂಡೀಪುರ ಕಾಂಡಚಿನ ಗ್ರಾಮದ ಜಮೀನಿನಲ್ಲಿ ಬೆಳೆ ಕಾಯಲು ಹೋಗಿದ್ದ ತಂದೆ-ಮಗನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಸ್ಥಳದಲ್ಲೇ ತಂದೆ ಮೃತಟ್ಟಿದ್ದಾರೆ. ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ರೈತ ಬೆಳ್ಳಿಶೆಟ್ಟಿ (55) ಆನೆ ದಾಳಿಯಿಂದ ಮೃತಪಟ್ಟವರು. ಇವರ ಮಗ ಮಹೇಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಮೀನಿನಲ್ಲಿ ಬೆಳೆ ಕಾಯಲು ಹಾಕಿದ್ದ ಗುಡಿಸಲಿನಲ್ಲಿ ಬುಧವಾರ‌ ರಾತ್ರಿ ಬೆಳ್ಳಿಶೆಟ್ಟಿ ಮಲಗಿದ್ದರು. ಮಗ ಮಹೇಶ್ ಹೊರಗೆ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿ ಜಮೀನಿಗೆ ನುಗ್ಗಿದ ಆನೆ ಇವರ ಮೇಲೆ ದಾಳಿ ನಡೆಸಿದೆ‌. ಮಹೇಶ್ ಭುಜಕ್ಕೆ ಗಾಯಗಳಾಗಿವೆ.‌ ಆದರೂ ಆನೆಯಿಂದ ಮಹೇಶ್​ ತಪ್ಪಿಸಿಕೊಂಡಿದ್ದಾರೆ. ನಂತರ ಗುಡಿಸಲಿನಲ್ಲಿದ್ದ ಬೆಳ್ಳಿಶೆಟ್ಟಿ ಅವರ ತಲೆಯನ್ನು ತುಳಿದು ಸಾಯಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳ ದೌಡಾಯಿಸಿದ ಹೊಯ್ಸಳ ಪೊಲೀಸರು ಮಹೇಶ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡಾನೆಗಳ ಹಾವಳಿ ನಿಯಂತ್ರಿಸದ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ದಿಗ್ಬಂಧನ ವಿಧಿಸಿದ್ದ ವಿಚಾರದಲ್ಲಿ ಕೆಲ‌ ದಿನಗಳ ಹಿಂದೆ ಗುಂಡ್ಲುಪೇಟೆ ಸುದ್ದಿಯಾಗಿತ್ತು. ಇದೀಗ ಕಾಡಾನೆ ದಾಳಿಗೆ ರೈತ ಬಲಿಯಾಗಿದ್ದಾರೆ.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು: ಮಧು ಜಿ.ಮಾದೇಗೌಡಗೆ ವಿಜಯ ಮಾಲೆ

ಬಾವಿಗೆ ಬೀಳುತ್ತಿದ್ದ ಸಾರಿಗೆ ಬಸ್ ಜಸ್ಟ್ ಮಿಸ್: 70 ಜನರ ಪ್ರಾಣ ಉಳಿಸಿದ ಬೇವಿನ ಮರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
