ಬೆಂಗಳೂರು:ರಾಜಧಾನಿಯ ನೂತನ ಪೊಲೀಸ್​ ಆಯುಕ್ತರಾಗಿ ನಮೇಕವಾದ ಎಡಿಜಿಪಿ ಸಿ.ಎಚ್​.ಪ್ರತಾಪ್​ ರೆಡ್ಡಿ ಅವರಿಗೆ ನಿರ್ಗಮಿತ ಕಮಿಷನರ್​ ಕಮಲ್​ ಪಂತ್ ಅವರು ಮಂಗಳವಾರ ಅಧಿಕಾರ ಹಸ್ತಾಂತರಿಸಿದರು. 1991ನೇ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿರುವ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ಮೂಲದ ಪ್ರತಾಪ್​ರೆಡ್ಡಿ, ಬೆಂಗಳೂರು ನಗರದ 35ನೇ ಕಮಿಷನರ್​ ಆಗಿ ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ‌ ಪೊಲೀಸ್ ಆಯುಕ್ತರು, ನಗರದ ಎಲ್ಲ ಡಿಸಿಪಿಗಳು ಉಪಸ್ಥಿತರಿದ್ದರು.
ಬೆಂಗಳೂರಿನ ನ್ಯಾಷನಲ್​ ಅಸೋಸಿಯೇಷನ್​ ಆಫ್​ ಸಾಫ್ಟ್​ವೇರ್​ ಆ್ಯಂಡ್​ ಸರ್ವೀಸಸ್​ ಕಂಪನೀಸ್​ (ಸೈಬರ್​ ಸೆಕ್ಯೂರಿಟಿ ವಿಂಗ್​) ಸಲಹೆಗಾರರಾಗಿ ಪ್ರತಾಪ್​ರೆಡ್ಡಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದರು. ಕೆಲ ಕಾಲ ಸೈಬರ್​ ಸೆಕ್ಯೂರಿಟಿ ವಿಭಾಗದ ನಿರ್ದೇಶಕರಾಗಿದ್ದರು. ತಾಂತ್ರಿಕ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುವ ವಿರಳ ಐಪಿಎಸ್​ ಅಧಿಕಾರಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ವಿಜಯಪುರ, ಕಲಬುರಗಿಯಲ್ಲಿ ಎಸ್​ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಿಬಿಐ ಸೇವೆಗೂ ತೆರಳಿದ್ದ ಸಂದರ್ಭ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ಬ್ಯಾಂಕಿಂಗ್​, ಸೆಕ್ಯೂರಿಟಿ ವಂಚನೆ ಬೇಧಿಸಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪ್ರತಾಪ್​ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದರು. ಕೊಲೆ, ಕಳ್ಳತನ, ಮಹಿಳೆಯರ ವಿರುದ್ಧದ ಅಪರಾಧಗಳು, ಹಣಕಾಸಿನ ವಂಚನೆಗಳ ತನಿಖೆಗಳು, ಸರ್ಕಾರಿ ಸಂಸ್ಥೆಗಳಿಂದ ಹಕ್ಕುಗಳ ಉಲ್ಲಂನೆ ಸೇರಿ ಹಲವು ಅಪರಾಧ ಪ್ರಕರಣಗಳನ್ನು ಬೇಧಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆಂತರಿಕ ಭದ್ರತೆ, ಅಗ್ನಿಶಾಮಕ ಮತ್ತು ತುರ್ತು ಸೇವೆ ವಿಭಾಗದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಪ್ರಸ್ತುತ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಪ್ರತಾಪ್​ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದರು.
ನಿವೃತ್ತ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಬಳಿಕ 2020ರ ಆಗಸ್ಟ್​ನಲ್ಲಿ ನಗರ ಪೊಲೀಸ್​ ಆಯುಕ್ತರಾಗಿ ನೇಮಕಗೊಂಡಿದ್ದ ಕಮಲ್​ ಪಂತ್​ ಇಲಾಖೆಯಲ್ಲಿ ಗಮನಾರ್ಹ ಸುಧಾರಣೆ ತಂದಿದ್ದರು. ನಗರ ಪೊಲೀಸ್​ ಆಯುಕ್ತರಾಗಿ 22 ತಿಂಗಳು ಸೇವೆ ಸಲ್ಲಿಸಿದ್ದರು. ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ರೌಡಿ ಚಟುವಟಿಕೆ, ಡ್ರಗ್ಸ್​ ನಿಯಂತ್ರಣಕ್ಕೆ ಕಡಿವಾಣ ಹಾಕಿದ್ದರು. ಸೈಬರ್​ ಕ್ರೈಂ​ ತಡೆಗೆ ಶ್ರಮಿಸಿದ್ದರು. ಕೋವಿಡ್​ ಸಂದರ್ಭದಲ್ಲಿ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಅವಧಿಯಲ್ಲಿ ಬೆಳಕಿಗೆ ಬಂದ ಬಿಟ್​ಕಾಯಿನ್​ ಪ್ರಕರಣ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು.
ಹನಿಟ್ರ್ಯಾಪ್​ಗೆ ಬೆಂಗಳೂರಲ್ಲಿ ಬಿಜೆಪಿ ಮುಖಂಡ ಬಲಿ! ಪತ್ನಿಗೆ ಸಿಕ್ಕ ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ಹಾವಿನ ಮೊಟ್ಟೆ ಒಡೆಯಲು 54 ದಿನ ಹೆದ್ದಾರಿ ಕಾಮಗಾರಿ ಸ್ಥಗಿತ!

ವಾಕಿಂಗ್​ ವೇಳೆ ಅಪಘಾತ: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 18 =
Remember me
