ಬೆಂಗಳೂರು:ಖಾಸಗಿ ಕಂಪನಿ ಉದ್ಯೋಗಿ ಸುನಿತಾ ರಾಮಪ್ರಸಾದ್​ ಕೊಲೆ ಪ್ರಕರಣಕ್ಕೆ ಬಂಧಿತ ಆರೋಪಿಗಳು ಪೊಲೀಸರ ಮುಂದೆ ಕುತೂಹಲಕಾರಿ ವಿಷಯ ಬಾಯ್ಬಿಟ್ಟಿದ್ದಾರೆ.
ಮೃತದೇಹವನ್ನ ಅಪಾರ್ಟ್​ಮೆಂಟ್​ನಲ್ಲೇ ಬಿಟ್ಟು ಆಕೆ ಕಾರಿನಲ್ಲೇ ಆರೋಪಿಗಳು ಪರಾರಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ. ತಲೆಮರೆಸಿಕೊಂಡಿರುವ ಕಿಂಗ್​ಪಿನ್​ ಕಿರಣ್​ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಂಧಿತರಾಗಿರುವ ವರ್ತೂರಿನ ಇಮ್ರಾನ್​ (23) ಮತ್ತು ವೆಂಕಟೇಶ್​ನನ್ನು (52) ವಿಚಾರಣೆ ನಡೆಸಿದಾಗ ಪ್ರಕರಣದ ಕೆಲ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.ಬಾಡಿಗೆಗೆ ಮನೆ ತೋರಿಸುವ ನೆಪದಲ್ಲಿ ಸುನಿತಾರನ್ನು ಕಿರಣ್​ ಕಾಚಮಾರನಹಳ್ಳಿಯ ಜೆ.ಜೆ. ಲೇಔಟ್​ನ ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡಿದ್ದ. ಸುನಿತಾ ತನ್ನ ಮಾರುತಿ 800 ಕಾರಿನಲ್ಲಿ ಅಲ್ಲಿಗೆ ಬಂದಿದ್ದರು. ಅವರನ್ನು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಅವರ ಕಾರಿನಲ್ಲೇ ಬೇರೆಡೆ ಸಾಗಿಸಿ ಪ್ರಕರಣ ಮರೆಮಾಚಲು ಆರೋಪಿಗಳು ಸಂಚು ರೂಸಿದ್ದರು.
ಆದರೆ, ಸುನಿತಾ ದಪ್ಪವಿದ್ದ ಹಿನ್ನೆಲೆಯಲ್ಲಿ 4ನೇ ಮಹಡಿಯಿಂದ ಅವರನ್ನು ಎತ್ತಿಕೊಂಡು ಕಾರಿನಲ್ಲಿ ಕೂರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮೃತದೇಹವನ್ನು ಅಲ್ಲೇ ಬಿಟ್ಟು, ಸುನಿತಾರ ಕಾರಿನಲ್ಲೇ ಮೂವರು ಆರೋಪಿಗಳೂ ಪರಾರಿಯಾಗಿದ್ದರು. ಕಾರನ್ನು ವರ್ತೂರು ಸಮೀಪ ನಿಲುಗಡೆ ಮಾಡಿದ ಆರೋಪಿಗಳು ಅಲ್ಲಿಂದ ಪ್ರತ್ಯೇಕವಾಗಿದ್ದರು. ಇದೀಗ ಆರೋಪಿ ಕಿರಣ್​ ಮೊಬೈಲ್​ ಸ್ವಿಚ್​ಆಫ್​ ಮಾಡಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಪತ್ತೆಹಚ್ಚುವುದು ಪೊಲೀಸರಿಗೆ ತಲೆನೋವಾಗಿದೆ ಎಂದು ತಿಳಿದು ಬಂದಿದೆ. ಕಿರಣ್​ ಪತ್ತೆಯಾದ ಬಳಿಕ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ನಾನು ಶಾಸಕ, ಸಚಿವ, ಡಿಸಿಎಂ ಆಗಿದ್ದೀನಿ… ಆದ್ರೆ ನನ್ನನ್ನು ಈಗಲೂ ದೇವಸ್ಥಾನಕ್ಕೆ ಸೇರಿಸಲ್ಲ: ಡಾ.ಪರಮೇಶ್ವರ್

ಗುತ್ತಿಗೆದಾರ ಸಂತೋಷ್ ಸಾವಿನ ಕಿಂಗ್​ಪಿನ್​ ಡಿಕೆಶಿ! ಶುದ್ಧ ತನಿಖೆ ನಡೆಸಿದ್ರೆ ಒಂದೇ ದಿನದಲ್ಲಿ ಬಯಲಾಗುತ್ತೆ: ಕಾಳಿ ಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
