ಬೆಂಗಳೂರು:6 ವರ್ಷಗಳ ಹಿಂದೆ ಬೇರ್ಪಟ್ಟಿದ್ದ ತಾಯಿ-ಮಗನನ್ನು ಆಧಾರ್ ಕಾರ್ಡ್ ಡೀಟೇಲ್ಸ್ ಒಂದು ಮಾಡಿದೆ!
2016ರಲ್ಲಿ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ವೇಳೆ ವರ್ಷದ ಹಿಂದೆ ಸಿಂಗನಾಯಕನಹಳ್ಳಿಯ ಪಾರ್ವತಮ್ಮ ಅವರು ಮಗ ಭರತ್​ನನ್ನು ಕಳೆದುಕೊಂಡಿದ್ದರು. ಸಂತೆಯಲ್ಲಿ ನಾಪತ್ತೆಯಾದ ಮೂಗ ಮಗನಿಗಾಗಿ ತಾಯಿ ಹುಡುಕಾಟ ನಡೆಸಿದ್ದರು. ಎಷ್ಟೋ ದೇವರಿಗೆ ಹರಕೆ ಹೊತ್ತಿದ್ದರು. ನಿತ್ಯ ಮಗನಿಗಾಗಿ ತಾಯಿ ಕಾಯುತ್ತಲೇ ಇದ್ದರು. ಇದೀಗ ಆಧಾರ್​ ಕಾರ್ಡ್​ ಮೂಲಕ ತಾಯಿ ಮಡಿಲಿಗೆ ಮಗ ಸೇರಿದ್ದು, ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಯಲಹಂಕದ ಸಂತೆಯಲ್ಲಿ ತಪ್ಪಿಸಿಕೊಂಡ ಭರತ್​, ಮಹಾರಾಷ್ಟ್ರದ ನಾಗ್ಪುರ ರೈಲು ನಿಲ್ದಾಣ ಸೇರಿದ್ದ. ಭರತ್​ನನ್ನು ರಕ್ಷಿಸಿ ಪುನರ್ ವಸತಿ ಕೇಂದ್ರಕ್ಕೆ ರೈಲ್ವೆ ಅಧಿಕಾರಿಗಳು ತಲುಪಿಸಿದ್ದರು. ಮಾತು ಬಾರದ ಭರತ್​, ಅಲ್ಲೇ ನೆಲೆಸಿದ್ದ. ಈ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಪಾರ್ವತಮ್ಮ, ಮಗ ಕಾಣೆಯಾಗಿದ್ದಾನೆ ಎಂದು ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಗ್ಪುರದ ಪುನರ್​ ವಸತಿ ಕೇಂದ್ರದಲ್ಲೇ 6 ವರ್ಷಗಳಿಂದ ಆಶ್ರಯ ಪಡೆದಿದ್ದ ಭರತ್​ಗೆ 2022ರಲ್ಲಿ ಆಧಾರ್ ಕಾರ್ಡ್ ಮಾಡಿಸಲು ಆಧಾರ್ ಸೇವಾ ಕೇಂದ್ರಕ್ಕೆ ಭರತ್​ನನ್ನು ಅಧಿಕಾರಿಗಳು ಕರೆದೊಯ್ದಿದ್ದರು. ಈ ವೇಳೆ ಬೆರಳಚ್ಚು ಪಡೆದಾಗ ಹೊಸ ಆಧಾರ್ ಕಾರ್ಡ್​ಗೆ ರಿಜೆಕ್ಟ್ ತೋರಿಸಿತ್ತು. ಭರತ್ ಬೆರಳಚ್ಚಿನಿಂದ ಆಧಾರ್ ಕಾರ್ಡ್ ತೆಗೆದುಕೊಂಡಿದ್ದ ಆಧಿಕಾರಿಗಳಿಗೆ ಈತ ಬೆಂಗಳೂರು ಮೂಲದವ ಎಂದು ಗೊತ್ತಾಗಿದೆ. ಈ ಬಗ್ಗೆ ಅಡ್ರೆಸ್ ನೋಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪುನರ್ ವಸತಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅಲ್ಲಿಂದ ಯಲಹಂಕ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಭರತ್​ನ ತಾಯಿ ಪಾರ್ವತಮ್ಮರನ್ನು ಪತ್ತೆ ಹಚ್ಚಿದ ಯಲಹಂಕ ಪೊಲೀಸರು ನಾಗ್ಪುರಕ್ಕೆ ಕರೆದೊಯ್ದಿದ್ದರು. ಈ ವೇಳೆ ಮಗನನ್ನ ಕಂಡು ಭಾವುಕರಾದ ತಾಯಿ‌ ಭರತ್​ನನ್ನು ತಬ್ಬಿ ಮುದ್ದಾಡಿದರು. ಈ ಭಾವುಕ ಕ್ಷಣ ಕಂಡು ಪೊಲೀಸರು ಮತ್ತು ಅಧಿಕಾರಿಗೂ ಭಾವುಕರಾಗಿದ್ದರು.

ತಾಯಿ ಮಡಿಲಿಗೆ ಮಗ ಸೇರುವಂತೆ ಮಾಡಿದ ಆಧಾರ್​ ಕಾರ್ಡ್​ ಮತ್ತು ಇಂತಹ ಡಿಜಿಟಲ್​ ವ್ಯವಸ್ಥೆ ಜಾರಿ ಮಾಡಿದವರಿಗೂ ಪಾರ್ವತಮ್ಮ ಧನ್ಯವಾದ ತಿಳಿಸಿದ್ದಾರೆ.
ಭೀಕರ ಅಪಘಾತ, ಸ್ಥಳದಲ್ಲೇ ಐವರ ಸಾವು: ದತ್ತಾತ್ರೇಯನ ದರ್ಶನ ಪಡೆದು ವಾಪಸ್​ ಬರುವಾಗ ದುರಂತ

ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
