ಬೆಂಗಳೂರು:ಉದ್ಯಾನನಗರಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಹೋಟೆಲ್​ಗಳನ್ನು ತೆರೆಯಲು ಅನುಮತಿ ನೀಡಿ ನಗರ ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ ಆದೇಶ ಹೊರಡಿಸಿದ್ದಾರೆ. 1 ಗಂಟೆವರೆಗೆ ವ್ಯಾಪಾರ ನಡೆಸಲು ಅನುಮತಿ ಇದ್ದರೂ ಪೊಲೀಸರು ರಾತ್ರಿ 10 ಗಂಟೆಗೆಲ್ಲ ಹೋಟೆಲ್​ಗಳನ್ನು ಬಂದ್​ ಮಾಡಿಸುತ್ತಿದ್ದರು. ಪೊಲೀಸರ ಕಿರಿಕಿರಿಗೆ ಇನ್ನುಮುಂದೆ ಬ್ರೇಕ್​ ಬೀಳಲಿದೆ.ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 1 ಗಂಟೆವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಪ್ರತಾಪ್​ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿ ಹೋಟೆಲ್​ಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವಂತೆ ಡಿಸಿಪಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್​ ಆಯುಕ್ತರಾಗಿದ್ದ ಎನ್​.ಎಸ್​.ಮೇರಿಕ್​, 2016ರಲ್ಲಿ ನಗರ ವ್ಯಾಪ್ತಿ ರಾತ್ರಿ 1 ಗಂಟೆವರೆಗೆ ಹೋಟೆಲ್​ಗಳನ್ನು ತೆರೆಯಲು ಅನುಮತಿ ನೀಡಿದ್ದರು. ಈ ಸಂಬಂಧ ರಾಜ್ಯ ಸರ್ಕಾರವು ಅಧಿಕೃತ ಆದೇಶ ಹೊರಡಿಸಿತ್ತು. ಅಲ್ಲದೆ ಸುನೀಲ್​ ಕುಮಾರ್​ ಅವರು ಆಯುಕ್ತರಾಗಿದ್ದಾಗ ಮೆಜೆಸ್ಟಿಕ್​ ಹಾಗೂ ಮೈಸೂರು ರಸ್ತೆಯ ಸ್ಯಾಟ್​ಲೈಟ್​ ಬಸ್​ ನಿಲ್ದಾಣಗಳಲ್ಲಿ 24 ತಾಸು ವಹಿವಾಟು ನಡೆಸಲು ಹೋಟೆಲ್​ಗಳಿಗೆ ಅವಕಾಶ ನೀಡಿದ್ದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಗರಕ್ಕೆ ಬರುವ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೆಜೆಸ್ಟಿಕ್​ ಹಾಗೂ ಸ್ಯಾಟ್​ಲೈಟ್​ ಬಸ್​ ನಿಲ್ದಾಣ ವ್ಯಾಪ್ತಿಯಲ್ಲಿ ಹೋಟೆಲ್​ಗಳಿಗೆ ದಿನ ಪೂರ್ತಿ ಕಾರ್ಯನಿರ್ವಹಿಸಲು ಸುನೀಲ್​ ಕುಮಾರ್​ ಅನುಮತಿ ನೀಡಿದ್ದರು.
ಆದರೆ ಇತ್ತೀಚಿಗೆ ಪೊಲೀಸರು, ರಾತ್ರಿ 10 ಗಂಟೆ ಬಳಿಕ ಹೋಟೆಲ್​ಗಳನ್ನು ಬಂದ್​ ಮಾಡಿಸುತ್ತಿದ್ದರು. ಇದರಿಂದ ಹೋಟೆಲ್​ಗಳಿಗೆ ನಷ್ಟ ಉಂಟಾಗಿತ್ತು. ಇನ್ನು ಕರೊನಾ ಸೋಂಕು ಬಳಿಕ ಹೋಟೆಲ್​ಗಳಿಗೆ ಪೊಲೀಸರು ನಿರ್ಬಂಧ ಹೆಚ್ಚಾಯಿತು. ಪೊಲೀಸರ ಕಿರುಕುಳದಿಂದ ಬೇಸತ್ತ ಹೋಟೆಲ್​ ಮಾಲೀಕರ ಸಂಘವು, ಇತ್ತೀಚಿಗೆ ನಗರ ಪೊಲೀಸ್​ ಆಯುಕ್ತ ಸಿ.ಎಚ್​.ಪ್ರತಾಪ್​ ರೆಡ್ಡಿ ಅವರನ್ನು ಭೇಟಿಯಾಗಿ 2016ರ ಆದೇಶದಂತೆ ರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಆಯುಕ್ತರು, ಹೋಟೆಲ್​ಗಳನ್ನು ಅವಧಿ ಮುಂಚೆ ಬಂದ್​ ಮಾಡದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.
ನಕ್ಸಲರೊಂದಿಗೆ ನಂಟು: ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ಬಿಡುಗಡೆಗೆ ‘ಸುಪ್ರೀಂ’ ತಡೆ

ರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ… ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ

Sign in to your account
Please enter an answer in digits:4 × 1 =
Remember me
