ಬೆಂಗಳೂರು:ಸೆ.26ರಿಂದ 28ರವರೆಗೆ ಗಣ್ಯವ್ಯಕ್ತಿಗಳು ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ಮತ್ತು ಸುರಕ್ಷತೆ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾಯಿಸಲಾಗಿದೆ.
ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಸಂಚಾರ ಠಾಣೆ ವ್ಯಾಪ್ತಿಯ ಕೆಲ ಏಕಮುಖ ಸಂಚಾರ ರಸ್ತೆಗಳನ್ನು ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಗಳಾಗಿ ಮಾರ್ಪಡಿಸಲಾಗಿದೆ. ಕಬ್ಬನ್‌ಪಾರ್ಕ್ ಸಂಚಾರ ಠಾಣೆ ವ್ಯಾಪ್ತಿಯ ರಾಜಭವನ ರಸ್ತೆಯನ್ನು ರಾಜಭವನ ಮುಖ್ಯದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿ ಗಣ್ಯ ವ್ಯಕ್ತಿಗಳ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ. ವಿಧಾನಸೌಧದ ನಿರ್ಗಮನ ದ್ವಾರ(ಗೇಟ್ ಸಂಖ್ಯೆ 4)ದಲ್ಲಿ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡಲಾಗಿದೆ.
ಅಶೋಕನಗರ ಸಂಚಾರ ಠಾಣಾ ವ್ಯಾಪ್ತಿಯ ರಿಚ್ಮಂಡ್ ವೃತ್ತದಿಂದ ಬಾಲ್ಡ್‌ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಸೆ.26ರ ಸಂಜೆ 5.30ರಿಂದ 6 ಗಂಟೆವರೆಗೆ ಹಳೇ ವಿಮಾನ ನಿಲ್ದಾಣ ರಸ್ತೆ- ಎಂ.ಜಿ.ರಸ್ತೆ- ಡಿಕನ್ಸನ್ ರಸ್ತೆ- ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ- ರಾಜಭವನ ರಸ್ತೆ ಬಳಸದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು.
ಸೆ.27ರ ಬೆಳಗ್ಗೆ 9.30ರಿಂದ 11.30ರಲ್ಲಿ ರಾಜಭವನ ರಸ್ತೆ- ಇನ್ಫೆಂಟ್ರಿ ರಸ್ತೆ, ಕೆ.ಆರ್.ರಸ್ತೆ- ಕಬ್ಬನ್ ರಸ್ತೆ- ಡಿಕನ್ಸನ್ ರಸ್ತೆ-ಎಂ.ಜಿ.ರಸ್ತೆ- ಹಳೇ ವಿಮಾನ ನಿಲ್ದಾಣ ರಸ್ತೆ- ಸುರಂಜನ್‌ದಾಸ್ ರಸ್ತೆ. ಮಧ್ಯಾಹ್ನ 3.40ರಿಂದ ರಾತ್ರಿ 8 ಗಂಟೆ ವರೆಗೆ ರಾಜಭವನ ರಸ್ತೆ- ಇನ್ಫೆಂಟ್ರಿ ರಸ್ತೆ- ಕ್ವೀನ್ಸ್ ರಸ್ತೆ- ಕಸ್ತೂರಿ ಬಾ ರಸ್ತೆ- ರಿಚ್ಮಂಡ್ ರಸ್ತೆ- ಲ್ಯಾಂಗ್ ಫೋರ್ಡ್ ರಸ್ತೆ- ಅಂಬೇಡ್ಕರ್ ರಸ್ತೆ.
ಸೆ.28ರ ಬೆಳಗ್ಗೆ 9 ಗಂಟೆಯಿಂದ 9.30ರವರೆಗೆ ರಾಜಭವನ ರಸ್ತೆ- ಇನ್ಫೆಂಟ್ರಿ ರಸ್ತೆ- ಕೆ.ಆರ್.ರಸ್ತೆ- ಕಬ್ಬನ್ ರಸ್ತೆ- ಡಿಕನ್ಸನ್ ರಸ್ತೆ- ಎಂ.ಜಿ.ರಸ್ತೆ- ಹಳೇ ವಿಮಾನ ನಿಲ್ದಾಣ ರಸ್ತೆಗಳಲ್ಲಿ ಸಂಚರಿಸುವ ಬದಲು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ವೈಭವದ ನಾಡಹಬ್ಬಕ್ಕೆ ಇಂದು ರಾಷ್ಟ್ರಪತಿ ಚಾಲನೆ: ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟಿಸಲಿರುವ ದ್ರೌಪದಿ ಮುರ್ಮು

ಸಂಬಂಧಗಳ ಬೆಸೆಯುವ ಹಬ್ಬ; ತಾರೆಯರ ನವರಾತ್ರಿ

ಮಹಾಲಯ ಅಮಾವಸ್ಯೆ ದಿನದಂದೇ ಭೀಕರ ಅಪಘಾತ: ಎಎಸ್​ಐ ಪತ್ನಿ-ಮಗಳು ಸೇರಿ ನಾಲ್ವರು ದುರ್ಮರಣ

ಅಪಘಾತದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ ಮೃತ್ಯು: ಸಾವಲ್ಲೂ ಸಾರ್ಥಕತೆ ಮೆರೆದ ಪ್ರತಿಭಾವಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
