ಬೆಂಗಳೂರು:ಟೈಲರಿಂಗ್​ ಕಲಿಯಲು ಬರುತ್ತಿದ್ದ ಬಾಲಕಿಯನ್ನ ತನ್ನ ಮನೆಗೆ ಕರೆದೊಯ್ದ ಮಹಿಳೆಯೊಬ್ಬಳು ಆಕೆಯನ್ನು ಬಲವಂತವಾಗಿ ಸೆಕ್ಸ್​ ದಂಧೆಗೆ ಬಳಸಿಕೊಂಡಿದ್ದಾಳೆ. ಸತತ ಐದಾರು ದಿನಗಳ ಕಾಲ ಇದೇ ರೀತಿ ತನ್ನ ಮನೆಗೆ ಕರೆದೊಯ್ದು ಅಪರಿಚಿತ ಪುರುಷರಿಂದ ಅತ್ಯಾಚಾರ ಮಾಡಿಸಿ ಅವರಿಂದ ಹಣ ಪಡೆದ ಆಘಾತಕಾರಿ ಪ್ರಕರಣ ಬೆಂಗಳೂರಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣ ಸಂಬಂಧ ಎಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರು ಆರೋಪಿ ರಾಜೇಶ್ವರಿ, ಕಲಾವತಿ, ಕೇಶವಮೂರ್ತಿ, ರಫಿಕ್, ಸತ್ಯರಾಜ್ ಮತ್ತು ಶರತ್ ಸೇರಿ 6 ಮಂದಿಯನ್ನ ಬಂಧಿಸಿದ್ದಾರೆ.
ಬಿಡುವಿನ ಸಮಯದಲ್ಲಿ‌ ಟೈಲರಿಂಗ್ ಕಲಿಯಲು ರಾಜೇಶ್ವರಿ ಬಳಿ ಅಪ್ರಾಪ್ತ ಬಾಲಕಿ ಹೋಗುತ್ತಿದ್ದಳು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದ ರಾಜೇಶ್ವರಿ, ಮತ್ತು ಬರುವ ಪುಡಿ ಬೆರೆಸಿದ ಜ್ಯೂಸ್​ ಅನ್ನು ಬಾಲಕಿಗೆ ಕೊಟ್ಟಿದ್ದಳು. ಬಾಲಕಿ ಪ್ರಜ್ಞೆ ತಪ್ಪಿದ ಬಳಿಕ ಕೇಶವಮೂರ್ತಿ ಎಂಬುವರಿಂದ ಅತ್ಯಾಚಾರ ಮಾಡಿಸಿದ್ದಾಳೆ. ಪ್ರಜ್ಞೆ ಬಂದ ನಂತರ ಬಾಲಕಿಗೆ ಸ್ನಾನ ಮಾಡಿಸಿ ಯಾರಿಗೂ ವಿಷಯ ಹೇಳದಂತೆ ಬೆದರಿಕೆ ಹಾಕಿ ಮನೆಗೆ ಕಳಿಸಿದ್ದಳು. ನಂತರ ಇದೇ ರೀತಿ ನಾಲ್ಕೈದು ದಿನ ತನ್ನ ಮನೆಗೆ ಬಾಲಕಿಯನ್ನು ಕರೆಸಿಕೊಂಡ ರಾಜೇಶ್ವರಿ, ಬೇರೆ ಬೇರೆ ವ್ಯಕ್ತಿಗಳ ಕಾಮದಾಹಕ್ಕೆ ಬಾಲಕಿಯನ್ನು ದೂಡಿದ್ದಾಳೆ. ಬಳಿಕ ಅತ್ಯಾಚಾರ ಮಾಡಿದವರಿಂದ ರಾಜೇಶ್ವರಿ ಹಣ ಪಡೆದುಕೊಂಡಿದ್ದಾಳೆ.
ನಾಲ್ಕು ದಿನಗಳ ಬಳಿಕ ತೀವ್ರ ಅಸ್ವಸ್ಥಳಾದ ಅಪ್ರಾಪ್ತೆಯು ಪೋಷಕರ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಕೂಡಲೇ ಸಂತ್ರಸ್ತೆಯ ಪೋಷಕರು ಎಚ್.ಎಸ್.ಆರ್. ಲೇಔಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − two =
Remember me
