ಬೆಂಗಳೂರು:ಠೇವಣಿದಾರರ ಹೆಸರಿನಲ್ಲಿ ಸಾಲ ಪಡೆದ ಬ್ಯಾಂಕ್​ ವ್ಯವಸ್ಥಾಪಕ, ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಯುವತಿಗೆ ಕೇವಲ 6 ದಿನದಲ್ಲಿ ಬರೋಬ್ಬರಿ 5.70 ಕೋಟಿ ರೂ. ಕೊಟ್ಟಿದ್ದಾನೆ. ವ್ಯವಸ್ಥಾಪಕನ ಬಣ್ಣ ಬಯಲಾಗಿದ್ದು, ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.
ಸಿಲಿಕಾನ್​ ಸಿಟಿಯ ಹನುಮಂತನಗರದ ಇಂಡಿಯನ್​ ಬ್ಯಾಂಕ್​ ವ್ಯವಸ್ಥಾಪಕ ಎಸ್​. ಹರಿಶಂಕರ್​ ಬಂಧಿತ. ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟ ಹರಿಶಂಕರ್​, ‘ಡೇಟಿಂಗ್​ ಆ್ಯಪ್​ನಲ್ಲಿ ನನಗೆ ಯುವತಿ ಪರಿಚಯ ಆದಳು. ಅವಳ ಮೋಹಕ ಮಾತುಗಳಿಗೆ ಮರುಳಾಗಿ ಆಕೆಯ ಬಲೆಯಲ್ಲಿ ಸೆರೆಯಾದೆ. ಆಕೆ ಕೇಳಿದಾಗಲೆಲ್ಲಾ, ಆಕೆ ಹೇಳಿದ ಬ್ಯಾಂಕ್​ ಖಾತೆಗಳಿಗೆ ಗ್ರಾಹಕರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಕೊಂಡು ಡೇಟಿಂಗ್​ ಯುವತಿಗೆ ಕಳಿಸಿಬಿಟ್ಟೆ. ಅವಳ ಪ್ರೇಮಪಾಶಕ್ಕೆ ಒಳಗಾಗಿ ಮಾಡಬಾರದ್ದು ಮಾಡಿಬಿಟ್ಟೆ. ಬರೋಬ್ಬರಿ 5.70 ಕೋಟಿ ರೂ. ಕೊಟ್ಟು ಕೈ ಸುಟ್ಟಿಕೊಂಡೆ…’ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಹನುಮಂತನಗರ ಇಂಡಿಯನ್​ ಬ್ಯಾಂಕ್​ನಲ್ಲಿ ಅನಿತಾ ಎಂಬುವರು 1.32 ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರ ಆಧಾರದ ಮೇಲೆ ಅನಿತಾ, 75 ಲಕ್ಷ ರೂ. ಸಾಲ ಪಡೆದಿದ್ದರು. ಆನಂತರ ಹರಿಶಂಕರ್​, ಕೌಶಲ್ಯ ಮತ್ತು ಮುನಿರಾಜು ಒಳಸಂಚು ರೂಪಿಸಿ ಅನಿತಾ ಅವರ ಠೇವಣಿ ಖಾತೆಯ ಲೀನ್​ ಮಾರ್ಕ್ ಅ​ನ್ನು ಅನಧಿಕೃತವಾಗಿ ಅಳಿಸಿ ಅವರ ಠೇವಣಿ ಹಣದ ಆಧಾರದ ಮೇಲೆ ಮೇ 13 ರಿಂದ 19ರ ನಡುವೆ ಓವರ್​ ಡ್ರಾಫ್ಟ್​ನಲ್ಲಿ ಹಣ ಮಂಜೂರು ಮಾಡಿದ್ದರು. ಎಲ್ಲ ಓವರ್​ ಡ್ರಾಫ್ಟ್​ಗಳಿಗೂ ಅನಿತಾ ಅವರ 1.32 ಕೋಟಿ ರೂ. ಠೇವಣಿ ಹಣವನ್ನೇ ಆಧಾರವಾಗಿ ತೋರಿಸಿ 5.70 ಕೋಟಿ ರೂ. ಓವರ್​ ಡ್ರಾಫ್ಟ್ ಖಾತೆಗಳನ್ನು ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ಹಣವನ್ನು ಪಶ್ಚಿಮ ಬಂಗಾಳದ 28 ಬ್ಯಾಂಕ್​ ಖಾತೆಗಳಿಗೆ ಮತ್ತು ರಾಜ್ಯ 2 ಖಾತೆ ಒಟ್ಟು 30 ಬ್ಯಾಂಕ್​ ಖಾತೆಗಳಿಗೆ ಕೇವಲ 6 ದಿನಗಳ ನಡುವೆ 136 ಬಾರಿ ವರ್ಗಾವಣೆ ಮಾಡಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬಂದು ಪ್ರಶ್ನಿಸಿದ್ದಾರೆ. ಆನಂತರ ಆಂತರಿಕ ತನಿಖೆ ನಡೆಸಿದಾಗ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ.
5.70 ಕೋಟಿ ರೂ. ದುರುಪಯೋಗ ಆರೋಪದ ಮೇಲೆ ಇಂಡಿಯನ್​ ಬ್ಯಾಂಕ್​ನ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್​. ಮೂರ್ತಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ವ್ಯವಸ್ಥಾಪಕ ಹರಿಶಂಕರ್​, ಸಹಾಯಕ ವ್ಯವಸ್ಥಾಪಕಿ ಕೌಶಲ್ಯ ಜರಾಯ್​ ಮತ್ತು ಕ್ಲರ್ಕ್​ ಮುನಿರಾಜು ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಹರಿಶಂಕರ್​ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ.
ಕೇರಳ ಮೂಲದ ಹರಿಶಂಕರ್​ನನ್ನು ಬಂಧಿಸಿ ಪ್ರಾಥಮಿಕ ವಿಚಾರಣೆ ನಡೆಸಿದಾಗ ಪ್ರೇಮಪುರಾಣ ಬಾಯ್ಬಿಟ್ಟಿದ್ದಾನೆ. ಡೇಟಿಂಗ್​ ಆ್ಯಪ್​ನಲ್ಲಿ ನನಗೆ ಯುವತಿ ಪರಿಚಯ ಆದಳು. ಅವಳ ಮೋಹಕ ಮಾತುಗಳಿಗೆ ಮರುಳಾಗಿ ಅವರಿಗೆ ಸೆರೆಯಾದೆ. ಆಕೆ ಕೇಳಿದಂತೆ ಆಕೆ ಹೇಳಿದ ಬ್ಯಾಂಕ್​ ಖಾತೆಗಳಿಗೆ ಗ್ರಾಹಕರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಕೊಂಡು ಆನಂತರ ಡೇಟಿಂಗ್​ ಯುವತಿಗೆ ವರ್ಗಾವಣೆ ಮಾಡಿದ್ದೇನೆ. ಯುವತಿ ಪ್ರೇಮಪಾಶಕ್ಕೆ ಒಳಗಾಗಿ ಮೋಸದಿಂದ 5.70 ಕೋಟಿ ರೂ. ಕಳೆದುಕೊಂಡಿದ್ದೇನೆ ಎಂದು ಹರಿಶಂಕರ್​ ತಪ್ಪೊಪ್ಪಿಕೊಂಡಿದ್ದಾನೆ.
ಹೇಳುವುದೆಲ್ಲ ಸತ್ಯವಲ್ಲ:‘ಡೇಟಿಂಗ್​ ಆ್ಯಪ್​ನಲ್ಲಿ ಪರಿಚಯವಾದ ಯುವತಿಗೆ ಕೇವಲ 6 ದಿನಗಳಲ್ಲಿ 5.70 ಕೋಟಿ ರೂ. ವರ್ಗಾವಣೆ ಮಾಡಿದೆ. ಆಕೆ ವಾಪಸ್​ ಕೊಡುವುದಾಗಿ ನಂಬಿಸಿ ಪಡೆದುಕೊಂಡು ಕೊನೆಗೆ ಮೋಸ ಮಾಡಿದಳು ಎಂದು ಹರಿಶಂಕರ್​ಹೇಳುತ್ತಿದ್ದಾನೆ. ಆದರೆ, ಆರೋಪಿಯ ಎಲ್ಲ ಮಾತುಗಳನ್ನು ನಂಬಲು ಸಾಧ್ಯವಿಲ್ಲ. ಒಬ್ಬ ಬ್ಯಾಂಕ್​ ಮ್ಯಾನೇಜರ್​, ಅಪರಿಚಿತ ಯುವತಿಗೆ ಇಷ್ಟೊಂದು ಹಣ ವರ್ಗಾವಣೆ ಮಾಡಿದ್ದಾನೆ ಎಂದರೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ಹರಿಶಂಕರ್​, ಬಳಸುತ್ತಿದ್ದ ಮೊಬೈಲ್​ನ್ನು ಬ್ಯಾಂಕ್​ ವಶಕ್ಕೆ ಒಪ್ಪಿಸಿದ್ದಾನೆ. ಮೊಬೈಲ್​ ವಶಕ್ಕೆ ಪಡೆದು ಅದರಲ್ಲಿ ಯುವತಿ ಜತೆಗೆ ನಡೆದಿದೆ ಎನ್ನಲಾದ ಚಾಟಿಂಗ್​ ಮತ್ತು ಸಂಭಾಷಣೆಯನ್ನು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ಸಹಾಯದಿಂದ ಪಡೆಬೇಕಿದೆ. ಡೇಟಿಂಗ್​ ಯುವತಿ ಜತೆಗೆ ಸಂಭಾಷಣೆ, ಚಾಟಿಂಗ್​ ನಡೆದಿದೆಯಾ? ಎಂಬುದರ ಬಗ್ಗೆ ದಾಖಲೆ ಸಂಗ್ರಹಿಸಬೇಕಿದೆ’ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
‘ಇದಲ್ಲದೆ, ಪಶ್ಚಿಮ ಬಂಗಾಳದ ಮತ್ತು ರಾಜ್ಯದ 30 ಬ್ಯಾಂಕ್​ ಖಾತೆಗಳಿಗೆ ಆನ್​ಲೈನ್​ನಲ್ಲಿ 136 ಬಾರಿ ಒಟ್ಟಾರೆ 5.70 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ. ಆ ಬ್ಯಾಂಕ್​ ಖಾತೆಗಳ ವಿವರ ಪಡೆದು ಅದು ಯಾರಿಗೆ ಸಂಬಂಧಪಟ್ಟಿದೆ? ಅವರು ಯಾರು? ನಿಜವಾಗಿಯೂ ಡೇಟಿಂಗ್​ ಯುವತಿಯೇ ಅಥವಾ ವ್ಯವಸ್ಥಾಪಕನಿಗೆ ಪರಿಚಯ ಇರುವ ವ್ಯಕ್ತಿಗಳೇ? ಎಂಬುದರ ಬಗ್ಗೆ ದಾಖಲೆ ಪರಿಶೀಲನೆ ನಡೆಸಿ ನಿರ್ಧಾರಕ್ಕೆ ಬರಬೇಕಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಬೆಳಗಾವಿಯಲ್ಲಿ ತ್ರಿವಳಿ ಕೊಲೆ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ‌ಪ್ರವೀಣ್ ಭಟ್​ನನ್ನು ನಿರ್ದೋಷಿ ಎಂದ ಧಾರವಾಡ ಹೈಕೋರ್ಟ್

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 4 =
Remember me
