ಬೆಂಗಳೂರು:ಠೇವಣಿದಾರರಿಗೇ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ನಕಲಿ ದಾಖಕೆ ಸೃಷ್ಟಿಸಿ 5.70 ಕೋಟಿ ರೂ. ಸಾಲ ಪಡೆದ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಹನುಮಂತನಗರದ ಇಂಡಿಯನ್​ ಬ್ಯಾಂಕ್​ ವ್ಯವಸ್ಥಾಪಕ ಎಸ್.ಹರಿಶಂಕರ್​, ವಿಚಾರಣೆ ವೇಳೆ ಸ್ಫೋಟಕ ರಹಸ್ಯ ಬಾಯ್ಬಿಟ್ಟಿದ್ದಾನೆ. ‘ಡೇಟಿಂಗ್​ ಆ್ಯಪ್​ನಲ್ಲಿ ನನಗೆ ಯುವತಿ ಪರಿಚಯ ಆದಳು. ಅವಳ ಮೋಹಕ ಮಾತುಗಳಿಗೆ ಮರುಳಾಗಿ ಆಕೆಯ ಬಲೆಯಲ್ಲಿ ಸೆರೆಯಾದೆ. ಆಕೆ ಕೇಳಿದಾಗಲೆಲ್ಲಾ, ಆಕೆ ಹೇಳಿದ ಬ್ಯಾಂಕ್​ ಖಾತೆಗಳಿಗೆ ಗ್ರಾಹಕರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಕೊಂಡು ಡೇಟಿಂಗ್​ ಯುವತಿಗೆ ಕಳಿಸಿಬಿಟ್ಟೆ. ಅವಳ ಪ್ರೇಮಪಾಶಕ್ಕೆ ಒಳಗಾಗಿ ಮಾಡಬಾರದ್ದು ಮಾಡಿಬಿಟ್ಟೆ. ಬರೋಬ್ಬರಿ 5.70 ಕೋಟಿ ರೂ. ಕೊಟ್ಟು ಕೈ ಸುಟ್ಟಿಕೊಂಡೆ…’ ಎಂದು ಆರಂಭದಲ್ಲಿ ಕಥೆ ಕಟ್ಟಿದ್ದ ಈತ, ಇದೀಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ. ಇವನ ಲೀಲೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಈತ ಡೇಟಿಂಗ್​ ನೆಪದಲ್ಲಿ ಒಬ್ಬಳಿಗಲ್ಲ, 8 ಯುವತಿಯರಿಗೆ ಕೋಟ್ಯಂತರ ಹಣ ಸಂದಾಯ ಮಾಡಿದ್ದಾನೆ. ಕೇರಳ ಮೂಲದ ಹರಿಶಂಕರ್​ಗೆ ಈಗಾಗಲೇ ಮದುವೆ ಆಗಿದೆ. ಬಾಣಂತನಕ್ಕೆಂದು ಪತ್ನಿ ತವರಿಗೆ ಹೋಗಿದ್ದಾರೆ. ಈ ವೇಳೆ ಡೇಟಿಂಗ್​ ಆ್ಯಪ್​ನಲ್ಲಿ ಬೆಡಗಿಯರ ಹಿಂದೆ ಬಿದ್ದ ಹರಿಶಂಕರ್​, ತಾನು ಕೆಲಸ ಮಾಡುವ ಬ್ಯಾಂಕ್​ನಲ್ಲಿ ಠೇವಣಿದಾರರಾದ ಅನಿತಾ ಎಂಬುವರ ಎಫ್​ಡಿ ಅಕೌಂಟ್​ಗೆ ಕನ್ ಹಾಕಿದ್ದಾನೆ. ಡೇಟಿಂಗ್​ ಆ್ಯಪ್​ನ 8 ಯುವತಿಯರಗೆ ಹಂಚಿದ್ದಾನೆ. ‘ಏನೋ ತಪ್ ಮಾಡ್​ಬಿಟ್ಟೆ. ನನ್​ ಹೆಂಡ್ತಿಗೆ ಈ ವಿಷ್ಯ ಹೇಳ್ಬೇಡಿ ಸಾರ್..’ ಅಂತಿದ್ದಾನಂತೆ.
ಹನುಮಂತನಗರ ಇಂಡಿಯನ್​ ಬ್ಯಾಂಕ್​ನಲ್ಲಿ ಅನಿತಾ ಎಂಬುವರು 1.32 ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರ ಆಧಾರದ ಮೇಲೆ ಅನಿತಾ, 75 ಲಕ್ಷ ರೂ. ಸಾಲ ಪಡೆದಿದ್ದರು. ಆನಂತರ ಹರಿಶಂಕರ್​, ಕೌಶಲ್ಯ ಮತ್ತು ಮುನಿರಾಜು ಒಳಸಂಚು ರೂಪಿಸಿ ಅನಿತಾ ಅವರ ಠೇವಣಿ ಖಾತೆಯ ಲೀನ್​ ಮಾರ್ಕ್ ಅ​ನ್ನು ಅನಧಿಕೃತವಾಗಿ ಅಳಿಸಿ ಅವರ ಠೇವಣಿ ಹಣದ ಆಧಾರದ ಮೇಲೆ ಮೇ 13 ರಿಂದ 19ರ ನಡುವೆ ಓವರ್​ ಡ್ರಾಫ್ಟ್​ನಲ್ಲಿ ಹಣ ಮಂಜೂರು ಮಾಡಿದ್ದರು. ಎಲ್ಲ ಓವರ್​ ಡ್ರಾಫ್ಟ್​ಗಳಿಗೂ ಅನಿತಾ ಅವರ 1.32 ಕೋಟಿ ರೂ. ಠೇವಣಿ ಹಣವನ್ನೇ ಆಧಾರವಾಗಿ ತೋರಿಸಿ 5.70 ಕೋಟಿ ರೂ. ಓವರ್​ ಡ್ರಾಫ್ಟ್ ಖಾತೆಗಳನ್ನು ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ಹಣವನ್ನು ಪಶ್ಚಿಮ ಬಂಗಾಳದ 28 ಬ್ಯಾಂಕ್​ ಖಾತೆಗಳಿಗೆ ಮತ್ತು ರಾಜ್ಯ 2 ಖಾತೆ ಒಟ್ಟು 30 ಬ್ಯಾಂಕ್​ ಖಾತೆಗಳಿಗೆ ಕೇವಲ 6 ದಿನಗಳ ನಡುವೆ 136 ಬಾರಿ ವರ್ಗಾವಣೆ ಮಾಡಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬಂದು ಪ್ರಶ್ನಿಸಿದ್ದಾರೆ. ಆನಂತರ ಆಂತರಿಕ ತನಿಖೆ ನಡೆಸಿದಾಗ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ.
5.70 ಕೋಟಿ ರೂ. ದುರುಪಯೋಗ ಆರೋಪದ ಮೇಲೆ ಇಂಡಿಯನ್​ ಬ್ಯಾಂಕ್​ನ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್​. ಮೂರ್ತಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ವ್ಯವಸ್ಥಾಪಕ ಹರಿಶಂಕರ್​, ಸಹಾಯಕ ವ್ಯವಸ್ಥಾಪಕಿ ಕೌಶಲ್ಯ ಜರಾಯ್​ ಮತ್ತು ಕ್ಲರ್ಕ್​ ಮುನಿರಾಜು ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಹರಿಶಂಕರ್​ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 10 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ.
ವಿಚಾರಣೆ ವೇಳೆ ಹರಿಶಂಕರ್​, ಪ್ರೇಮಪುರಾಣ ಬಾಯ್ಬಿಟ್ಟಿದ್ದಾನೆ. ಡೇಟಿಂಗ್​ ಆ್ಯಪ್​ನಲ್ಲಿ ಯುವತಿಯರ ಪರಿಚಯ ಆಯಿತು. ಅವರ ಮೋಹಕ ಮಾತುಗಳಿಗೆ ಮರುಳಾಗಿ ಅವರಿಗೆ ಸೆರೆಯಾದೆ. ಅವರು ಕೇಳಿದಂತೆ ಅವರು ಹೇಳಿದ ಖಾತೆಗಳಿಗೆ ಹಣ ಕಳಿಸಿದೆ ಎಂದಿದ್ದಾನೆ.
ತುಮಕೂರಲ್ಲಿ ಭಯಾನಕ ಗ್ಯಾಂಗ್​: ವಿದ್ಯಾರ್ಥಿಗಳೇ ಟಾರ್ಗೆಟ್​, ಕೆಲ್ಸದ ಆಸೆಗೆ ಫ್ಲ್ಯಾಟ್​​ಗೆ ಹೋದ ಹುಡ್ಗೀರಾ ಪಾಡು ಹೇಳತೀರದು

ನಂಜನಗೂಡಲ್ಲಿ ಜಮೀನಿಗೆ ಹೋಗಿದ್ದ ತಾಯಿ-ಮಗಳು ಶವವಾಗಿ ಪತ್ತೆ: ಅಂತ್ಯಕ್ರಿಯೆ ಬಳಿಕ ಪ್ರಕರಣಕ್ಕೆ ಸ್ಫೋಟಕ ತಿರುವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
