| ನವೀನ್​ಚಂದ್ರ ಶೆಟ್ಟಿಆನೇಕಲ್​ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ 50 ಎಕರೆ ಜಾಗದಲ್ಲಿ ಡೇ ಕ್ರಾಲ್​ ನಿರ್ಮಿಸಿ, ಚಿರತೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬನ್ನೇರುಘಟ್ಟ ಉದ್ಯಾನದಲ್ಲೇ ಹುಟ್ಟಿ ಬೆಳೆದಿರುವ ಅಶೋಕ, ಸಾನ್ವಿ ಮತ್ತು ಲೋಕೇಶ್​ ಎಂಬ ಸಾಕು ಚಿರತೆಗಳನ್ನು ಇಲ್ಲಿ ಬಿಡಲಾಗಿದೆ.
ಈ ಹಿಂದೆ ಮಹಾರಾಷ್ಟ್ರದ ಗೋರೆವಾಡ ಸೇರಿ ದೇಶದ ವಿವಿಧೆಡೆಗಳಲ್ಲಿ ಡೇ ಕ್ರಾಲ್​ ನಿರ್ಮಿಸಿ ಚಿರತೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಗೋರೆವಾಡ ಹೊರತುಪಡಿಸಿ ಬೇರೆಡೆಗಳಲ್ಲಿ ಅದು ಸಫಲವಾಗಿರಲಿಲ್ಲ. ಗೋರೆವಾಡದ ಯಶಸ್ಸಿನಿಂದ ಉತ್ತೇಜಿತರಾಗಿರುವ ಬನ್ನೇರುಘಟ್ಟ ಉದ್ಯಾನದ ಅಧಿಕಾರಿಗಳು ಬನ್ನೇರುಘಟ್ಟದಲ್ಲೂ ಅಂಥದ್ದೇ ಸಫಾರಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.
ಚಿರತೆ ಸಫಾರಿ ವ್ಯವಸ್ಥೆ ಕಲ್ಪಿಸಲು ಉದ್ಯಾನದ ಅಧಿಕಾರಿಗಳು ಎರಡು ವರ್ಷಗಳಿಂದ ಸಿದ್ಧತೆ ಆರಂಭಿಸಿದ್ದರು. ಇದಕ್ಕಾಗಿ ಉದ್ಯಾನದ ಸುತ್ತ ಬೇಲಿ ನಿರ್ಮಾಣಕ್ಕೂ ಮುಂದಾಗಿದ್ದರು. ಈ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.
6 ಹೋಲ್ಡಿಂಗ್​ ಹೌಸ್​:ಚಿರತೆಗಳಿಗೆ ಪ್ರತಿದಿನ ಆಹಾರ ನೀಡಲು ಮತ್ತು ಅವುಗಳ ಸುರಕ್ಷತೆಗಾಗಿ ಆರು ಕಡೆ ಹೋಲ್ಡಿಂಗ್​ ಹೌಸ್​ ನಿರ್ಮಿಸಲಾಗಿದೆ. ಇತರ ಪ್ರಾಣಿಗಳಿಗೆ ಕೋಳಿ ಮಾಂಸ ಕೊಡಲಾಗುತ್ತಿದೆ. ಚಿರತೆಗಳಿಗೆ ಎಮ್ಮೆ ಮಾಂಸ ಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಒಂದು ಭಾಗದಲ್ಲಿ ಪ್ರಾಯೋಗಿಕವಾಗಿ ಮೂರು ಚಿರತೆಗಳನ್ನು ಬಿಡಲಾಗಿದೆ. ಮೂರು ಪ್ರತ್ಯೇಕ ಕೋಣೆಗಳಲ್ಲಿ ಅವುಗಳನ್ನು ಇರಿಸಲಾಗುತ್ತಿದೆ. ಇದುವರೆಗೆ 12 ಕೋಣೆಗಳನ್ನು ನಿರ್ಮಿಸಲಾಗಿದ್ದು, ಈ ಕೋಣೆಗಳಲ್ಲಿ ಎಷ್ಟು ಚಿರತೆಗಳನ್ನು ಬಿಡಬೇಕು? ಅವುಗಳನ್ನು ಹೇಗೆ ನಿರ್ವಹಿಸಬೇಕು? ಎಂಬ ಬಗ್ಗೆ ಚಿಂತನೆ ನಡೆದಿದೆ.
ಮುಕ್ಕಾಲು ಎಕರೆ ಡೇ ಕ್ರಾಲ್​:ಚಿರತೆ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ನೋಟ ಒದಗಿಸುವ ಜತೆಗೆ ಅವರ ಸುರಕ್ಷತೆಗಾಗಿ ಮುಕ್ಕಾಲು ಎಕರೆ ಜಾಗದಲ್ಲಿ ಡೇ ಕ್ರಾಲ್​ ನಿರ್ಮಿಸಲಾಗಿದೆ. ಇಲ್ಲಿ 20 ಅಡಿಗೂ ಎತ್ತರದ ಕಬ್ಬಿಣದ ಮೆಶ್​ ಹಾಕಲಾಗಿದೆ. ಮೆಶ್​ಗಳ ಮೇಲೆ ಕಬ್ಬಿಣದ ಶೀಟುಗಳನ್ನು ಹಾಕಲಾಗಿದೆ. ಮೇಲೆ ಹೋದರೂ ಚಿರತೆಗಳು ಹೊರಬಾರದಂತೆ ತಡೆಯಲು ಅನುಕೂಲವಾಗಿದೆ.
ನೀರಿನ ಕೊಳ, ಜೋಕಾಲಿ ವ್ಯವಸ್ಥೆ:ಬೆಕ್ಕಿನ ಪ್ರಬೇಧಕ್ಕೆ ಸೇರಿದ ಚಿರತೆಗಳಿಗೆ ಆಟ ಆಡುವುದು ತುಂಬಾ ಇಷ್ಟ. ಹಾಗಾಗಿ ಡೇ ಕ್ರಾಲ್​ ಒಳಗೆ ನೀರಿನ ಕೊಳ, ಜೋಕಾಲಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಚಿರತೆಗಳು ಆಟವಾಡುವುದನ್ನು ಪ್ರವಾಸಿಗರು ಆಸ್ವಾದಿಸುತ್ತಾರೆ ಎಂಬುದು ಉದ್ಯಾನದ ಅಧಿಕಾರಿಗಳ ನಿರೀಕ್ಷೆ.
ಚಿರತೆಗಳಿಗೆ ಬೋನಿನ ರೀತಿ ವ್ಯವಸ್ಥೆ:ಡೇ ಕ್ರಾಲ್​ ಪಕ್ಕದಲ್ಲೇ ಚಿರತೆಗಳಿಗೆ ಆಹಾರವನ್ನು ನೀಡಲು ಬೋನಿನ ರೀತಿ ವ್ಯವಸ್ಥೆ ಮಾಡಲಾಗಿದೆ. ಇದರೊಳಗೆ ಹೋಗಿ ಸರಾಗವಾಗಿ ಹೊರಬರಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಚಿರತೆಗಳಿಗೆ ಆಹಾರ ಕೊಡುವ ಸಿಬ್ಬಂದಿಯ ಜತೆಗೆ ಚಿರತೆಗಳಿಗೂ ಸುರಕ್ಷತೆ ಕಲ್ಪಿಸಲಾಗಿದೆ. ಆಹಾರ ಕೊಡಲು ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಿಂಹದ ಸಫಾರಿ ಪಕ್ಕದಲ್ಲೇ ಚಿರತೆ ಸಫಾರಿ ನಿರ್ಮಾಣವಾಗುತ್ತಿದೆ. ಇಲ್ಲಿಗೆ ಹೋಗಿ ಬರಲು ರಸ್ತೆ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಸದ್ಯ ಚಿರತೆ ವೀಕ್ಷಣೆಗೆ ಅವಕಾಶ ಇಲ್ಲ:ಬನ್ನೇರುಘಟ್ಟ ಉದ್ಯಾನದಲ್ಲಿ 50 ಎಕರೆ ಜಾಗದಲ್ಲಿ ಬಯಲು ಚಿರತೆ ಸಫಾರಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಆದ್ದರಿಂದ, ಸದ್ಯ ಬಯಲು ಚಿರತೆ ಸಫಾರಿಗೆ ಅವಕಾಶ ಇಲ್ಲ. ಅದರ ಬದಲು ಡೇ ಕ್ರಾಲ್​ನಲ್ಲಿ ಚಿರತೆಗಳನ್ನು ನೋಡಲು ಅವಕಾಶ ಮಾಡಿಕೊಡಲಾಗುವುದು. ಈ ವ್ಯವಸ್ಥೆ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ.
ಬಯಲು ಚಿರತೆ ಸಫಾರಿ ಕಷ್ಟ:ಬನ್ನೇರುಘಟ್ಟದಲ್ಲಿ ಬಯಲು ಚಿರತೆ ಸಫಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಜಾಗದಲ್ಲಿ ಬಿಟ್ಟರೆ ಅವು ಎಲ್ಲಿರುತ್ತವೆ? ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ. ಆದ್ದರಿಂದ, ವಿದೇಶಗಳಲ್ಲಿ ಇರುವಂತೆ ಚಿರತೆಗಳಿಗೆ ಜಿಪಿಎಸ್​ ಅಥವಾ ಚಿಪ್​ ಅಳವಡಿಕೆ ಮಾಡಿ, ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ಕೆಲ ಅಧಿಕಾರಿಗಳು ಮಾಹಿತಿ ನೀಡಿದರು.
ಬನ್ನೇರುಘಟ್ಟ ಉದ್ಯಾನದಲ್ಲಿ ಈವರೆಗೆ ವ್ಯವಸ್ಥೆ ಮಾಡಿರುವ ಎಲ್ಲ ಸಫಾರಿಗಳು ಯಶಸ್ವಿಯಾಗಿವೆ. ಆದ್ದರಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಚಿರತೆ ಸಫಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಪ್ರಾಯೋಗಿಕವಾಗಿ ಮೂರು ಚಿರತೆಗಳನ್ನು ಗುರುವಾರದಿಂದ ಡೇ ಕ್ರಾಲ್​ಗೆ ಬಿಡಲಾಗಿದೆ. ಅವುಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದೆ.|ಡಾ. ಉಮಾಶಂಕರ್​ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿ
ಬನ್ನೇರುಘಟ್ಟ ಜೈವಿಕ ಉದ್ಯಾನ ಹೊಸತನದ ರೂವಾರಿ. ಅದಕ್ಕೆ ತಕ್ಕುದಾಗಿ ಚಿರತೆ ಸಫಾರಿ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲೆಂಬ ಹೆಗ್ಗಳಿಕೆಯ ಈ ವ್ಯವಸ್ಥೆ ನಮಗೂ ಸಂತಸ ತಂದಿದೆ.| ಸುನಿಲ್​ ಪನ್ವಾರ್​ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ
ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಕೊಳ್ಳೇಗಾಲದ ಪಾಳ್ಯ ಗ್ರಾಮದಲ್ಲಿ ನರಬಲಿ ಹಬ್ಬ: ರಾತ್ರಿ ಸತ್ತು, ಬೆಳಗ್ಗೆ ಬದುಕಿ ಬಂದವನಿಗೆ ಮೇ 18ರಂದು ತಿಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 17 =
Remember me
