ನರಗುಂದ:ಇಲ್ಲಿನ ದರ್ಗಾವೊಂದರಲ್ಲಿ ಶಿವನಾಮ ಝೇಂಕಾರ ಕೇಳಿಬರುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ ದಿನದಂದು ವಿಶೇಷ ಪೂಜೆ ಜತೆಗೆ ಭಜನೆ, ಪುರಾಣ ಪ್ರವಚನಗಳು ನಡೆಯುತ್ತವೆ! ಅಚ್ಚರಿಯಾದರೂ ಇದು ಸತ್ಯ.
ಸರ್ವಧರ್ಮದ ಭಕ್ತರ ಪ್ರೀತಿಪಾತ್ರ ಸಂತರಾಗಿದ್ದ ಲಿಂ. ಶ್ರೀ ಇಮಾಮ ಸಾಹೇಬರ ಸ್ಮರಣಾರ್ಥ 2005ರಲ್ಲಿ ಪಟ್ಟಣದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಮೆಹಬೂಬ ಸುಭಾನಿ ದರ್ಗಾದಲ್ಲಿ ಗದ್ದುಗೆ ನಿರ್ಮಿಸಲಾಗಿದೆ. ಅಂದಿನಿಂದ ಈ ದರ್ಗಾದಲ್ಲಿ ಪಾರ್ವತಿ-ಪರಮೇಶ್ವರ, ಗಣಪತಿ ವಿಗ್ರಹ, ನಾಗಲಿಂಗಸ್ವಾಮಿ, ಈಶ್ವರಲಿಂಗ, ಲಕ್ಷ್ಮೀ, ಸರಸ್ವತಿ, ಶಿರಡಿ ಸಾಯಿಬಾಬಾ, ಸಂತ ಶಿಶುನಾಳ ಶರೀಫ, ಗುರುಗೋವಿಂದ ಭಟ್ಟರು ಸೇರಿ ಅನೇಕ ಹಿಂದು ದೇವರು-ಸಂತರ ಫೋಟೋ ಮತ್ತು ಅಲೈದೇವರ ಪಾಂಜಾಗಳನ್ನು ಗದ್ದುಗೆ ಮೇಲಿಟ್ಟು ಇಸ್ಲಾಂ ಧರ್ಮದಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಜತೆಯಲ್ಲಿ ‘ಓಂ ನಮಃ ಶಿವಾಯ’ ಮಂತ್ರದೊಂದಿಗೆ ಎಲ್ಲ ದೇವರುಗಳನ್ನು ಪೂಜಿಸಲಾಗುತ್ತಿದೆ. ಬಾಬುಸಾಹೇಬ ಜಮಾದಾರ ಅವರು ಮುಸ್ಲಿಂ ವ್ಯಕ್ತಿಯಾಗಿದ್ದರೂ ರುದ್ರಾ ಮಾಲೆ, ವಿಭೂತಿ, ಕುಂಕುಮ ಧರಿಸಿ, ತಲೆಗೆ ಟೋಪಿ ಧರಿಸಿಕೊಂಡು ಎಲ್ಲ ದೇವರಿಗೆ ಬೆಳಗ್ಗೆ ಮತ್ತು ಸಂಜೆ ಪೂಜೆ ಸಲ್ಲಿಸುತ್ತಾರೆ.

ಜೆಡಿಎಸ್​ ಪಕ್ಷವನ್ನೇ ವಿಸರ್ಜನೆ ಮಾಡ್ತೀವಿ, ಮತ್ತೆ ಮತ ಕೇಳಲು ಬರಲ್ಲ: ಸವಾಲು ಸ್ವೀಕರಿಸುತ್ತಲೇ ಎಚ್​ಡಿಕೆ ಘೋಷಣೆ

ಆನೆ ದಂತದಲ್ಲಿ ಮಾಡಿದ ಚೆಸ್​ ಪಾನ್​, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….

ಶಿಕ್ಷಕಿ ಜೊತೆ ಶಾಲೆಯಲ್ಲೇ ಸಂಭೋಗ ನಡೆಸಿದ ಪ್ರಿನ್ಸಿಪಾಲ್! ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ಕಾಮದಾಟ ಮುಂದುವರಿಸಿದ್ದ ಜೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × three =
Remember me
