ವಿಜಯಪುರ:2ಎ ಹೆಸರಿನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಸರ್ಕಾರಕ್ಕೆ ಬ್ಲಾಕ್​ಮೇಲ್​ ಮಾಡುತ್ತಿದ್ದಾರೆ. ಪಂಚಮಸಾಲಿ ಸಮಾಜದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಬಿಜೆಪಿ‌ ಮುಖಂಡರೂ ಆದ ಪಂಚಮಸಾಲಿ ಸಮಾಜದ ಧುರೀಣ ಸುರೇಶ ಬಿರಾದಾರ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುರೇಶ ಬಿರಾದಾರ, ಸಮಾಜದ ಹೆಸರಿನ ಮೇಲೆ ಇಲ್ಲಸಲ್ಲದ್ದು ಮಾತನಾಡಬಾರದು. ಇದರಿಂದ ಪಕ್ಷದಲ್ಲಿರುವ ಸಮಾಜದ ಮುಖಂಡರು ಮುಜುಗರ ಅನುಭವಿಸುತ್ತಿದ್ದಾರೆ. 1994ರಲ್ಲಿ ಮೊದಲ ಬಾರಿ ಶಾಸಕರಾದ ನೀವು ಅಲ್ಲಿಂದ ಇಲ್ಲಿಯವರೆಗೆ ಯಾರನ್ನು ಬೆಳೆಸಿದ್ದೀರಿ? ಸಮಾಜದ ಯಾವ ಮುಖಂಡರಿಗೆ ರಾಜಕೀಯವಾಗಿ ಮೇಲಕ್ಕೆತ್ತಿದ್ದೀರಿ ಹೇಳಿ ಎಂದು ಯತ್ನಾಳ್​ಗೆ ತರಾಟೆ ತೆಗೆದುಕೊಂಡರು.
ಹರಿಹರ ಪೀಠದ ‌ಮೊದಲ ಜಗದ್ಗುರುವಿನ ಬಗ್ಗೆ ಅವಮಾನಕರವಾಗಿ ಮಾತನಾಡುತ್ತೀರಿ. ಒಂದೆಡೆ ಹಿಂದುತ್ವದ ಬಗ್ಗೆ ಮಾತಾಡೋದು, ಇನ್ನೊಂದು ಕಡೆ ಸಮಾಜದ ಬಗ್ಗೆ ಮಾತಾಡೋದು, ಮತ್ತೊಂದು ಕಡೆ ಸ್ವಾಮೀಜಿಗಳನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ? ಸಮಾಜಕ್ಕೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು. ಕೂಡಲಸಂಗಮ ಸ್ವಾಮೀಜಿ ಮೊದಲಿನಿಂದಲೂ ಮೀಸಲಾತಿಗಾಗಿ ಹೋರಾಡುತ್ತಾ ಬಂದಿದ್ದಾರೆ. ಆದರೆ ತಾವು ಯಾವಾಗಿನಿಂದ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಸುರೇಶ ಪ್ರಶ್ನಿಸಿದರು. ಕೂಡಲಸಂಗಮ ಶ್ರೀಗಳ ಬಗ್ಗೆ ನಮಗೆ ಗೌರವ ಇದೆ. ತಾವೊಬ್ಬ ಸಮಾಜದ ವ್ಯಕ್ತಿಯಾಗಿ ಬಬಲೇಶ್ವರ ಹಾಗೂ ಹರಿಹರ ಪೀಠದ ಸ್ವಾಮೀಜಿಗಳನ್ನೂ ಗೌರವದಿಂದ ಕಾಣಬೇಕು. ಬೆಂಗಳೂರಲ್ಲಿ ಲಕ್ಷ ಲಕ್ಷ ಜನ ಸೇರಿದ್ದಾರೆಂದರೆ ಅದಕ್ಕೆ ಹರಿಹರ ಹಾಗೂ ಕೂಡಲಸಂಗಮ ಶ್ರೀಗಳು ಇಬ್ಬರೂ ಕಾರಣ ಎಂದರು.
ಪಂಚಮಸಾಲಿ ಸಾಮಜದವರಿಗೆ ಪಕ್ಷದಲ್ಲಿ ಸ್ಥಾನಮಾನ ಕೊಟ್ಟಾಗ ‌ನೀವೇ ವಿರೋಧ ಮಾಡಿದ್ದೀರಿ. ಮಳುಗೌಡ ಪಾಟೀಲ ನಗರ ಮಂಡಲ ಅಧ್ಯಕ್ಷರಾದಾಗ ನೀವೇ ನಿಮ್ಮ ಬೆಂಬಲಿಗರನ್ನು ಕಳುಹಿಸಿ ವಿರೋಧ ಮಾಡಿದಿರಿ. ಹೀಗಿರುವಾಗ ಸಮಾಜದ ಹೆಸರಲ್ಲಿ ಮಾತನಾಡವುದು ಸರಿಯೇ ಎಂದು ಹಿಗ್ಗಾಮುಗ್ಗಾ ಟೀಕಿಸಿದರು. ಮೋದಿ, ಅಮಿತ್ ಷಾ, ನಡ್ಡಾ, ಜೋಶಿ.. ಇದೀಗ ಬೊಮ್ಮಾಯಿ ಎಲ್ಲರನ್ನೂ ಟೀಕಿಸಿದ್ದೀರಿ‌. ನಿಮ್ಮ ಜೊತೆಗಿದ್ದ ಬೆಲ್ಲದ ಅವರ ಬಗ್ಗೆ ಏನು ಮಾತಾಡಿದ್ದೀರಿ? ನಿಮ್ಮ ನಡೆಯಿಂದ ಪಕ್ಷದಲ್ಲಿರುವ ಸಮಾಜದ ಇನ್ನುಳಿದ ಮುಖಂಡರು ಮುಜುಗರ ಅನುಭವಿಸುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಸಮಾಜ ಸೈಲೆಂಟ್ ಆಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಒಂದಲ್ಲಾ ಒಂದು ದಿನ ಸಮಾಜ ವೈಲೆಂಟ್ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜ ಎಂದರೆ ನೀವಷ್ಟೇನಾ? ಸಮಾಜದ ಮುಖಂಡನಾದವ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. 2ಎ ಮೀಸಲಾತಿಗೆ ವಚನಾನಂದ ಶ್ರೀಗಳು ಮೌನವಾಗಿ, ಕಾನೂನು ಬದ್ಧವಾಗಿ ಹೋರಾಟ ಮಾಡುತ್ತಿದ್ದಾರೆ. ಮೀಸಲಾತಿ ಸಿಗುವುದಾದರೆ ಅದು ವಚನಾನಂದ ಶ್ರೀಗಳಿಂದ ಎಂದು ಸುರೇಶ ಬಿರಾದಾರ ಹೇಳಿದರು.
ಮುಖಂಡ ಭೀಮಾಶಂಕರ ಹದನೂರ ಮಾತನಾಡಿ, ಯತ್ನಾಳ ಅವರು ಯಡಿಯೂರಪ್ಪ ಅವರಿಗೆ ಟಿಕೆಟ್ ಕೊಡುತ್ತಾರೆಂದಾಗ ಹೊಗಳಿದರು‌. ಬಳಿಕ ಅವರನ್ನೇ ಬೈಯ್ದರು. ಇದೀಗ ಎಲ್ಲ ಕಡೆ ಕೆಟ್ಟಿತೆಂದು ಸಮಾಜ ಹಿಡಿದಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದರೆ ಇದೇ ಯತ್ನಾಳರ ನಡೆಯೇ ಬೇರೆಯಾಗಿರುತ್ತಿತ್ತು ಎಂದರು. ಸಮಾಜದ ಹೆಸರು ಹೇಳಿಕೊಂಡು ಸಚಿವರಾಗಬೇಕೆಂಬ ಕಾರಣದಿಂದ ಯತ್ನಾಳ್​ ಹೀಗೆಲ್ಲ ಮಾತನಾಡುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನೇಳುವ ನೈತಿಕತೆ ಯತ್ನಾಳ್​ಗಿಲ್ಲ. ತನ್ನ ತಾನೇ ಬಣ್ಣಿಸಿಕೊಳ್ಳಲು ಸಮಾಜದ ವೇದಿಕೆ ಬಳಸಿಕೊಳ್ಳಬಾರದು. ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡಿದರೆ ಹೀರೋ ಆಗುತ್ತೇನೆಂಬ ಭ್ರಮೆ ಇರಬಾರದು ಎಂದರು. ರವಿ ಮೂಕರ್ತಿಹಾಳ, ಸಂದೀಪ ಪಾಟೀಲ ಮತ್ತಿತರರು ಸುದ್ದಿಗೋಷ್ಠಿ ನಡೆಸಿದರು.
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ತಾಯಿ-ಮಗು ಸೇರಿ ಮೂವರ ದುರ್ಮರಣ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಾಸ್ಯಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
