ಬೆಂಗಳೂರು:ಇಂದು ಸಭಾಪತಿ ಸ್ಥಾನಕ್ಕೆ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಕೊಡುವೆ. ನಾಳೆ ಬಿಜೆಪಿಗೆ ಸೇರುವೆ ಎಂದು ಬಸವರಾಜ ಹೊರಟ್ಟಿ ಘೋಷಿಸಿದರು.
ಜೆಡಿಎಸ್​ ತೊರೆದು ಬಿಜೆಪಿ ಸೇರಲು ಸಜ್ಜಾಗಿರುವ ಬಸವರಾಜ ಹೊರಟ್ಟಿ ಅವರಿಗೆ ಈಗಾಗಲೇ ಬಿಜೆಪಿಗೆ ಪಕ್ಷದ ರಾಷ್ಟ್ರೀಯ ನಾಯಕ ಅಮಿತ್​ ಷಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ, ಇಲ್ಲಿಯವರೆಗೂ ನಾನು ಮಾಡಿರುವ ಕೆಲಸದ ಬಗ್ಗೆ ಹೇಳಲು ಹೆಮ್ಮೆ ಎನ್ನಿಸುತ್ತದೆ. ಶಾಸಕರಿಗೆ ಟ್ರೈನಿಂಗ್ ಕೊಡುವುದನ್ನು ಮಾಡಿದ್ದೇನೆ. ಮೂವತ್ತು ಸಭೆ ಮಾಡಿದ್ದೇನೆ. ಶಾಸಕರ ಶಿಬಿರ ಮಾಡಿದ್ದೇನೆ. ಸದನದಲ್ಲಿ ಶೇ.95ರಷ್ಟು ಅಂದಿನದ್ದು ಅಂದೇ ಮುಗಿಸಿದ್ದೇನೆ. ಶಿಮ್ಲಾ, ದೆಹಲಿಗೆ ಹೋಗಿದ್ವಿ. ಪ್ರಜಾಪ್ರಭುತ್ವದ ಬಗ್ಗೆ ಮಾತಾಡಿದ್ವಿ. ಪಬ್ಲಿಕ್ ಅಕೌಂಟ್ಸ್ ಬಗ್ಗೆ ಕೂಡ ಮಾರ್ಗದರ್ಶನ ಮಾಡಿದ್ವಿ ಎಂದು ವಿವರಿಸಿದರು.
ಕುಮಾರಸ್ವಾಮಿ ಮತ್ತು ದೇವೇಗೌಡರು ನನ್ನನ್ನು ಅವರ ಕುಟುಂಬದ ಸದಸ್ಯರಂತೆ ನೋಡಿದ್ರು. ಅವರು ನಮಗೆ ಇಲ್ಲಿಯವರಗೂ ಸಹಕಾರ ಕೊಟ್ಟರು. ನಮ್ಮ ಶಿಕ್ಷಕರು ಬನ್ನಿ ಎಂದು ಕೇಳಿಕೊಂಡ್ರು. ಅನಿವಾರ್ಯ ಸಂದರ್ಭದಲ್ಲಿ ಹೀಗೆ ಆಗುತ್ತೆ. ದೇಶದಲ್ಲಿ ಯಾವ ಪಕ್ಷ ಜಾತಿ ಇಲ್ಲದೆ ಚುನಾವಣೆ ಮಾಡುತ್ತೆ ಹೇಳಿ ನೋಡೋಣ? ನಾನು ಎಲ್ಲ ಅಧಿಕಾರ ಅನುಭವಿಸಿದ್ದೇನೆ. ನಾನು ಗೆದ್ದೆ ಗೆಲ್ಲುತ್ತೇನೆ, ಮತ್ತೆ ಪರಿಷತ್​ಗೆ ಬರುತ್ತೇನೆ. ನಾನು ಸಚಿವ ಸ್ಥಾನ ಬೇಕು ಎಂದು ಯಾವತ್ತೂ ಸಮ್ಮಿಶ್ರ ಸರ್ಕಾರದಲ್ಲಿ ಕೇಳಿಲ್ಲ. ಸಿಎಂಗೆ ಅವರದ್ದೇ ಒತ್ತಡ ಇರುತ್ತೆ. ನಾನು ಅವರಿಗೆ ಸಪೋರ್ಟ್ ಮಾಡಿದ್ದೇನೆ ಎಂದರು.
ಹನಿಟ್ರ್ಯಾಪ್​ಗೆ ಬೆಂಗಳೂರಲ್ಲಿ ಬಿಜೆಪಿ ಮುಖಂಡ ಬಲಿ! ಪತ್ನಿಗೆ ಸಿಕ್ಕ ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ವಾಕಿಂಗ್​ ವೇಳೆ ಅಪಘಾತ: ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್​ ಬಾಲರಾಜ್​ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
