ಚಿತ್ರದುರ್ಗ:ಮುರುಘಾ ಮಠದ 2021ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ಯಾಂಡಲ್​ವುಡ್​ನ ಡಾ.ಪುನೀತ್‌ ರಾಜ್‌ಕುಮಾರ್ ಅವರಿಗೆ ನೀಡಲಾಗಿದ್ದು, ಅಶ್ವಿನಿ ಪುನೀತ್​ರಾಜ್​ಕುಮಾರ್​ ಅವರು ಪ್ರಶಸ್ತಿ ಸ್ವೀಕರಿಸಿದರು.

ಬಸವ ಜಯಂತಿ ದಿನವಾದ ಮಂಗಳವಾರ ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಫಲಕ ಒಳಗೊಂಡಿದೆ.

ಡಾ.ಶಿವಮೂರ್ತಿ ಮುರುಘ ಶರಣು ಮಾತನಾಡಿ, ಡಾ.ರಾಜ್​ಕುಮಾರ್ ಅವರ ಮುದ್ದಿನ ಮಗ ಪುನೀತ್‌. ಅಭಿನಯ, ಹಾಡುಗಾರಿಕೆಯಲ್ಲಿ ಪುನೀತರು, ಪ್ರಣೀತರು. ತಂದೆಯ ಮಾರ್ಗದರ್ಶನ ಆಂತರ್ಯದಲ್ಲಿಟ್ಟುಕೊಂಡು ಆಕಾಶದ ಎತ್ತರಕ್ಕೆ ಬೆಳೆದರು. ಕನ್ನಡ ಚಲನಚಿತ್ರ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಪುನೀತ್​ರಂತಹ ಪ್ರತಿಭೆಯನ್ನು ಕಂಡ ನಾವುಗಳೇ ಧನ್ಯರು ಎಂದರು.
ಸಚಿವ ಬಿ.ಸಿ. ಪಾಟೀಲ್, ಶಾಸಕ ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ, ಸಿಇಒ ನಂದಿನಿ ದೇವೆ, ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್ ಉಪಸ್ಥಿತರಿದ್ದರು.
PSI ಎಕ್ಸಾಂ ಅಕ್ರಮ: ನನಗೆ ಸಚಿವರ ಸಂಬಂಧಿ ಮತ್ತು ಡಿಕೆಶಿ ಪರಿಚಯವಿದೆ… ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ ದರ್ಶನ್​ ಗೌಡನ ತಂದೆ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

10 ದಿನ ಮೊದಲೇ ಆ್ಯಸಿಡ್​ ದಾಳಿಗೆ ಸಂಚು ರೂಪಿಸಿದ್ದ! ಮೆಜೆಸ್ಟಿಕ್​ನಲ್ಲಿ ಬೈಕ್​ ಪತ್ತೆ, ತಿರುಪತಿಯಲ್ಲಿ ಆರೋಪಿಗಾಗಿ ಹುಡುಕಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
