ಬೆಂಗಳೂರು:ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್​ ಕೊಲೆ ಪ್ರಕರಣ ಸಂಬಂಧ ನಾದಿನಿ ಮಾಲಾ ಮೇಲೆ ಪೊಲೀಸರ ಕಣ್ಣು ಬಿದ್ದಿದೆ.
ರೇಖಾರ ಪತಿ ಕದಿರೇಶ್​ರ ಸಹೋದರಿ ಮಾಲಾ ಮೇಲೆ ಹಲವು ಕೇಸ್​ಗಳಿವೆ. ಮುಂದಿನ‌ ಚುನಾವಣೆಯಲ್ಲಿ ತನ್ನ ಮಗಳನ್ನ ನಿಲ್ಲಿಸುವ ಪ್ಲ್ಯಾನ್ ಮಾಲಾಗೆ ಇತ್ತು. ಮಗಳನ್ನ ನಿಲ್ಲಿಸಲು ರೇಖಾ ಕದಿರೇಶ್ ಅಡ್ಡಗಾಲಾಗಿದ್ರು. ಅಲ್ಲದೆ ರೇಖಾಗೂ ಓರ್ವ ಮಗಳು, ಮಗನಿದ್ದಾನೆ. ಹೀಗಾಗಿ ಕೊಲೆ ಮಾಡಿದ್ರೆ ಸುಲಭವಾಗಿ ತನ್ನ ಮಗಳನ್ನು ಚುನಾವಣೆಗೆ ನಿಲ್ಲಿಸಬಹುದೆಂದು ಯೋಜನೆ ಇತ್ತು ಎಂಬ ಅನುಮಾನ ಮೂಡಿದೆ. ರೇಖಾರ ಸಹಚರ ಪೀಟರ್ ಜತೆ ಮಾಲಾ ಚೆನ್ನಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಮಾಲಾಳನ್ನ ಕಾಟನ್​ಪೇಟೆ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿರಿಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

ರೇಖಾ ಪತಿ ಕದಿರೇಶ್​ನನ್ನು 3 ವರ್ಷದ ಹಿಂದೆ ಅವರ ಮನೆ ಬಳಿಯೇ ಹಾಡಹಗಲೇ ಶೋಭನ್ ಗ್ಯಾಂಗ್ ಕೊಲೆ ಮಾಡಿತ್ತು. ಈ ಘಟನೆ ಬೆಂಗಳೂರನ್ನೇ ಬೆಚ್ಚಿಬೀಳಿಸತ್ತು. ಇದೀಗ ರೇಖಾರನ್ನ ಅವರ ಸಹಚರರೇ ಹತ್ಯೆ ಮಾಡಿದ್ದಾರೆ ಎಂಬ ಶಂಕೆ ದಟ್ಟವಾಗಿದೆ. ಸಂಸದ ಪಿ.ಸಿ. ಮೋಹನ್ ಅವರ ಶಿಷ್ಯೆಯಾಗಿದ್ದ ರೇಖಾ ಕದಿರೇಶ್ 2010 ಮತ್ತು 2015ರಲ್ಲಿ ಎರಡು ಭಾರಿ ಛಲವಾದಿಪಾಳ್ಯ ಕಾರ್ಪೋರೇಟ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಡ್ಡಿ ವ್ಯವಹಾರವನ್ನೂ ನಡೆಸುತ್ತಿದ್ದರು. ಇಡೀ ವಾರ್ಡ್ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.
ಬಡವರಿಗೆ ಊಟ ಕೊಡುತ್ತಿರುವಾಗಲೇ ರೇಖಾ ಕದಿರೇಶ್​ನನ್ನು ಅಟ್ಟಾಡಿಸಿ ಕೊಂದ್ರು! ಇಲ್ಲಿದೆ ಭಯಾನಕ ರಹಸ್ಯ

ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ

ಬೆಳ್ಳಂಬೆಳಗ್ಗೆ ಗೀಜರ್ ಬ್ಲಾಸ್ಟ್: ಹೊತ್ತಿ ಉರಿದ ಮನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
