ಬೆಂಗಳೂರು:ಚಾಕು ಇರಿತಕ್ಕೊಳಗಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಸ್​​ಕೆಆರ್​ ಮಾರ್ಕೆಟ್​ ವಾರ್ಡ್​ನ ಮಾಜಿ ಸದಸ್ಯ ಅಯೂಬ್​ ಖಾನ್​ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಈ ಹಿಂದೆ ಅಯೂಬ್​ ಖಾನ್​ ರಾಜಕೀಯವಾಗಿ ಬೆಳೆಯಲು ತನ್ನ ಕುಟುಂಬದ ಸದಸ್ಯರನ್ನು ಬಳಸಿಕೊಂಡಿದ್ದು, ಇದೀಗ ರಾಜಕೀಯವಾಗಿ ಬೆಳೆದ ಬಳಿಕ ಎಲ್ಲರನ್ನೂ ದೂರು ಮಾಡಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಇವರ ಸಹೋದರನ ಪುತ್ರ ಮತ್ತಿನ್​ ಖಾನ್​ ನಡುವೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಬುಧವಾರ ರಾತ್ರಿ ಕೂಡ ಚಾಮರಾಜಪೇಟೆಯ ವಿನಾಯಕ ಚಿತ್ರಮಂದಿರ ಸಮೀಪ ಅಯೂಬ್​ ಖಾನ್​ ಮನೆ ಬಳಿ ಮತ್ತಿನ್​ ಗಲಾಟೆ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಮತ್ತಿನ್​, ಚಾಕುವಿನಿಂದ ಅಯೂಬ್​ ಖಾನ್​ ಹೊಟ್ಟೆಗೆ ಇರಿದಿದ್ದ.
ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದ ಅಯೂಬ್​ ಖಾನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಯೂಬ್​ ಮೃತಪಟ್ಟಿದ್ದಾರೆ. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಮಸೀದಿ ಅಧ್ಯಕ್ಷ ಪಟ್ಟವೇ ಕಾರಣ ಎಂದು ಅಯುಬ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಟಿಪ್ಪುನಗರದ ಖುದಾಯತ್ ಮಸೀದಿಗೆ ಅಯೂಬ್ ಅಧ್ಯಕ್ಷರಾಗಿದ್ದರು. ಈ ಸ್ಥಾನ ಬಿಟ್ಟುಕೊಡುವಂತೆ ಅಯೂಬ್​ರ ಮತ್ತೀನ್ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಈ ಹಿಂದೆ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…

ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 3 =
Remember me
