ಬೆಂಗಳೂರು:ನೂರಾರು ಕನಸಿನ ಬುತ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ ಜೋಡಿ ಬಾಳಲ್ಲಿ ನಡೆಯಬಾರದ್ದು ನಡದೇ ಹೋಯ್ತು. ಮದ್ವೆಯಾದ ಕೆಲವೇ ತಿಂಗಳಲ್ಲಿ ಗಂಡ ಅಕಾಲಿಕ ಮರಣಕ್ಕೀಡಾದರು. 5 ತಿಂಗಳ ಗರ್ಭಿಯಾಗಿದ್ದ ಪತ್ನಿಗೆ ಗಂಡನ ಸಾವು ತಂದೊಡ್ಡಿದ ಆಘಾತ ಹೇಳತೀರತು. ತಾಯಿಯ ಗರ್ಭದಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡಿದ್ದ ಮಗುವಿನ ಬಾಳಲ್ಲಿ ವಿಧಿ ಮತ್ತೊಮ್ಮೆ ಆಟವಾಡಿಬಿಟ್ಟಿದೆ. ತನ್ನ ಕಂದನಿಗೆ ಅಪ್ಪ-ಅಮ್ಮ ಎರಡೂ ಆಗಿದ್ದ ಅಮ್ಮನೂ ಇದೀಗ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾಳೆ…
ಇದು ಸೋಮವಾರ ಸಂಜೆ ಬಿಬಿಎಂಪಿ ಕಸದ ಲಾರಿಗೆ ಬಲಿಯಾದ ಎಸ್​​ಬಿಐ ಬ್ಯಾಂಕ್ ಉದ್ಯೋಗಿ ಪದ್ಮಿನಿ (40) ಅವರ ದುರಂತ ಕಥೆ. ಪದ್ಮಿನಿ ಮೂಲತಃ ಆಂಧ್ರಪ್ರದೇಶದವರು. 2010ರಲ್ಲಿ ಕೆಲಸ ನಿಮಿತ್ತ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಂದ್ರಾಲೇಔಟ್ ಬ್ರಾಂಚ್‌ನಲ್ಲಿ‌ ಡೆಪ್ಯುಟಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 5 ವರ್ಷದ ಹಿಂದೆ ಮದುವೆಯಾಗಿದ್ದ ಪದ್ಮಿನಿ ಕೆಲವೇ ದಿನಗಳಲ್ಲಿ ಗಂಡನನ್ನು ಕಳೆದುಕೊಂಡಿದ್ದರು. ಆ ವೇಳೆ ಪದ್ಮಿನಿ ಗರ್ಭಿಣಿಯಾಗಿದ್ದರು. ಗಂಡು ಮಗು ಜನಿಸಿದ ಬಳಿಕ ಪೋಷಕರ ಜೊತೆ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದರು. ಸೋಮವಾರ ಕೆಲಸ ಮುಗಿಸಿದ ಪದ್ಮಿನಿ, ಪುಟ್ಟ ಮಗ ಯುವಾನ್ ಕಾಯುತ್ತಿದ್ದಾನೆ, ಬೇಗ ಮನೆಗೆ ಹೋಗಬೇಕು ಎನ್ನುತ್ತಾ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ನಾಯಂಡಹಳ್ಳಿ ಬಳಿ ಪದ್ಮಿನಿ ಅವರ ಸ್ಕೂಟರ್​ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಪದ್ಮಿನಿ ಸ್ಥಳದಲ್ಲೇ ಕೊನೆಯುಸಿರೆಳೆದರು.
ಪದ್ಮಿನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಏನೂ ಅರಿಯದ ಪುಟ್ಟ ಕಂದನ ಮುಖ ನೋಡಿದರೆ ಕರಳುಹಿಂಡುತ್ತೆ. ಅಯ್ಯೋ ದುರ್ವಿಧಿಯೇ ನಿನೇಷ್ಟು ಕ್ರೂರಿ? ಅಪ್ಪನ ಪ್ರೀತಿ ಕಾಣದ ಮಗುವಿನ ಪಾಲಿಗೆ ಅಮ್ಮನನ್ನಾದರೂ ಉಳಿಸಬಾರದಿತ್ತೇ.. ಎಂದು ಮನದಲ್ಲೇ ಶಪಿಸುತ್ತಿದ್ದಾರೆ.
ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ

ಬಾಡಿಗೆ ಮನೆ ತೋರಿಸೋ ನೆಪದಲ್ಲಿ ಕರೆಸಿ ಮಾಡಬಾರದ್ದು ಮಾಡಿದ್ರು… ದಪ್ಪಗಿದ್ದರಿಂದ ಶವ ಸಾಗಿಸದೆ ಅಲ್ಲೇ ಬಿಟ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
