ಬೆಂಗಳೂರು:ಪ್ರೇಯಸಿಯ ಚಿನ್ನದ ಮೋಹ ತಣಿಸಲು ಮತ್ತು ಆಕೆಯ ಬ್ಯೂಟಿಪಾರ್ಲರ್​ನ ಖರ್ಚು-ವೆಚ್ಚಕ್ಕಾಗಿ ದ್ವಿತೀಯ ದರ್ಜೆ ಸಹಾಯಕನೊಬ್ಬ ಬಿಬಿಎಂಪಿಯ ಹಣವನ್ನೇ ಆಕೆಯ ಬ್ಯಾಂಕ್​ ಖಾತೆಗೆ ಜಮೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಕಚೇರಿಯಲ್ಲಿ ಎಸ್​ಡಿಎ ಆಗಿದ್ದ ಎಂ.ಕೆ. ಪ್ರಕಾಶ್​, ವಾರ್ಡ್​ನಲ್ಲಿ ನಡೆಯುತ್ತಿದ್ದ ಕೆಲಸಕ್ಕೆ ಚೆಕ್​ ಮೂಲಕ ಅಥವಾ ಆರ್​ಟಿಜಿಎಸ್​ನಲ್ಲಿ ಹಣ ಬಿಡುಗಡೆ ಮಾಡಬೇಕಿತ್ತು. ಬ್ಯೂಟಿಷಿಯನ್​ ಕಾಂಚನಾ ಜತೆ ಪ್ರಕಾಶ್​ಗೆ ಸ್ನೇಹ ಬೆಳೆದು ಸಲುಗೆಗೆ ತಿರುಗಿತ್ತು. ಪಾಲಿಕೆ ಖಾತೆಯಿಂದ ಚೆಕ್​ ಅಥವಾ ಆರ್​ಟಿಜಿಎಸ್​ನಲ್ಲಿ ಹಣ ವರ್ಗಾವಣೆ ಮಾಡುವಾಗ ತನ್ನ ಅಥವಾ ಪ್ರೇಯಸಿ ಬ್ಯಾಂಕ್​ ಖಾತೆಗೆ ಪ್ರಕಾಶ್​ ಜಮೆ ಮಾಡುತ್ತಿದ್ದ. ಆದರೆ, ಪಾಲಿಕೆ ಲೆಕ್ಕಪತ್ರದಲ್ಲಿ ಮಾತ್ರ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿದೆ ಎಂದು ಉಲ್ಲೇಖ ಮಾಡುತ್ತಿದ್ದ. 2021ರ ನವೆಂಬರ್​ನಿಂದ 14.07 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿದ್ದ.
ಈ ಬಗ್ಗೆ ಕಾರ್ಯಪಾಲಕ ಇಂಜಿನಿಯರ್​ (ವಿದ್ಯುತ್​) ರಾಜೇಂದ್ರ ನಾಯ್ಕ್​ ದೂರು ದಾಖಲಿಸಿದ್ದಾರೆ. ಜು.4ರಂದು ಮುಖ್ಯ ಲೆಕ್ಕಪರಿಶೋಧಕರು, ಪಾಲಿಕೆ ಲೆಕ್ಕಪರಿಶೋಧನೆ ಶುರು ಮಾಡಿದ ಮೇಲೆ ಪ್ರಕಾಶ್​ ಅನುಮತಿ ಪಡೆಯದೆ ರಜೆ ಹಾಕುತ್ತಿದ್ದ. ಇತ್ತ ಲೆಕ್ಕಪರಿಶೋಧನೆಗೂ ಲೆಕ್ಕಪತ್ರ ಹಾಜರುಪಡಿಸುತ್ತಿರಲಿಲ್ಲ. ಅನುಮಾನ ಬಂದು ಕೆನರಾ ಬ್ಯಾಂಕ್​ ಖಾತೆಯ ಸ್ಟೇಟ್​ಮೆಂಟ್​ ಪಡೆದು ಪರಿಶೀಲನೆ ನಡೆಸಿದಾಗ ಅನುಮಾನಾಸ್ಪದ ವ್ಯವಹಾರಗಳು ನಡೆದಿರುವುದು ಕಂಡು ಬಂದಿತ್ತು. ಪ್ರಕಾಶ್​ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಲೆಕ್ಕಪರಿಶೋಧನೆ ನಡೆಸಿದಾಗ 14.07 ಲಕ್ಷ ರೂ.ಗಳನ್ನು ಅಕ್ರಮವಾಗಿ ಬೇರೆಯವರ ಬ್ಯಾಂಕ್​ ಖಾತೆಗೆ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ರಾಜೇಂದ್ರ ನಾಯ್ಕ್​ ತಿಳಿಸಿದ್ದಾರೆ.
ದೂರಿನ ಮೇರೆಗೆ ಆರೋಪಿಗಳಾದ ಥಣಿಸಂದ್ರದ ಎಕೆ ಕಾಲನಿ ನಿವಾಸಿ ಪ್ರಕಾಶ್(39)​ ಮತ್ತು ಯಲಹಂಕ ಉಪನಗರದ ಬ್ಯೂಟಿಷಿಯನ್​ ಕಾಂಚನಾ(30) ಅವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ. ಅನೂಪ್​ ಎ. ಶೆಟ್ಟಿ ತಿಳಿಸಿದ್ದಾರೆ.
ಆಭರಣ ಕೊಡುಗೆ:ಒಂದೂವರೆ ವರ್ಷದಿಂದ ಕಾಂಚನಾ ಬ್ಯಾಂಕ್​ ಖಾತೆಗೆ ಪಾಲಿಕೆ ಹಣವನ್ನು ಪ್ರಕಾಶ್​ ಜಮೆ ಮಾಡಿದ್ದಾನೆ. ಇದರಿಂದ ಆಕೆ ಚಿನ್ನಾಭರಣ ಖರೀದಿ ಮಾಡಿದ್ದಳು. ಅಲ್ಲದೆ, ಮೋಜು-ಮಸ್ತಿ ಮಾಡಲು ಪ್ರಕಾಶ್​ ಮತ್ತು ಕಾಂಚನಾ ಪಾಲಿಕೆ ಹಣ ಬಳಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಷ ನಿವಾರಣೆ ನೆಪದಲ್ಲಿ ನಕಲಿ ಹೇಯ ಕೃತ್ಯವೆಸಗಿದ ಸ್ವಾಮೀಜಿ-ಪತ್ನಿ! ಐದು ವರ್ಷದಿಂದ ಯುವತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಇನ್ಮುಂದೆ ವಾರದಲ್ಲಿ 6 ದಿನ ಸಂಚರಿಸಲಿದೆ ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ ರೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
