ಬೆಂಗಳೂರು:ಮೊನ್ನೆಮೊನ್ನೆ ಹೊಸ ವರ್ಷದ ಅಂದರೆ ಜನವರಿ 1ರಂದು ಬಹಳಷ್ಟು ಮಂದಿ ಸೂರ್ಯೋದಯವನ್ನು ವಿಶೇಷ ಆಸಕ್ತಿ ಹಾಗೂ ಸಂಭ್ರಮದಿಂದ ಕಣ್ತುಂಬಿಕೊಂಡು ಸಂತೋಷಪಟ್ಟಿದ್ದರು. ಅದಾಗಿ ನಾಲ್ಕೇ ದಿನಗಳಲ್ಲಿ ಇನ್ನೊಂದು ಸೂರ್ಯಾಸ್ತದ ದೃಶ್ಯ ಜನರ ಗಮನ ಸೆಳೆದಿರುವುದಷ್ಟೇ ಅಲ್ಲ, ಮನಮೋಹಕ ಎನಿಸಿ ವೈರಲ್ ಕೂಡ ಆಗಿದೆ. ಇದಕ್ಕೆ ಕಾರಣ ಅದೊಂದು ಲೋಹದಹಕ್ಕಿ!
ಅಂದರೆ, ಮುಳುಗುತ್ತಿದ್ದ ಸೂರ್ಯನ ಮಧ್ಯದಿಂದ ವಿಮಾನವೊಂದು ಹಾದುಹೋಗಿದ್ದು ಅದು ವಿಶೇಷವಾದ ದೃಶ್ಯವಾಗಿ ಪರಿಣಮಿಸಿದೆ. ಇಂಥ ಮನಮೋಹಕ ದೃಶ್ಯಾವಳಿ ಮೂಡಿಬಂದಿದ್ದು ರಾಜಧಾನಿ ಬೆಂಗಳೂರಿನಲ್ಲೇ ಎಂಬುದು ಇನ್ನೊಂದು ವಿಶೇಷ.
ಛಾಯಾಗ್ರಾಹಕ ಆದಿತ್ಯ ವೆಂಕಟೇಶ್ ಎನ್ನುವವರು ಈ ಮನಮೋಹಕ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ಇಂದು ಬೆಂಗಳೂರಿನಲ್ಲಿ ಕಾಣಸಿಕ್ಕ ಸುಂದರ ಸೂರ್ಯಾಸ್ತ’ ಎಂದು ಅವರು ನಿನ್ನೆಯ ಈ ದೃಶ್ಯದ ವಿಡಿಯೋ ಮಾಡಿ ಅವರು ಟ್ವೀಟ್ ಮಾಡಿದ್ದಾರೆ. ಅಂದು ಒಂದೇ ದಿನದಲ್ಲಿ ವೈರಲ್ ಆಗಿದ್ದಷ್ಟೇ ಅಲ್ಲ, 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಸಾವಿರಕ್ಕೂ ಅಧಿಕ ಮಂದಿ ಅದನ್ನು ರಿಟ್ವೀಟ್ ಮಾಡಿಕೊಂಡಿದ್ದು, 13 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
A beautiful sunset in Benguluru today 🙂pic.twitter.com/2gDOlJecgi— Auditya Venkatesh (@AudiPhotography)January 4, 2023
A beautiful sunset in Benguluru today 🙂pic.twitter.com/2gDOlJecgi
ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!
ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:two × 2 =
Remember me
